ಕ್ರೈಂ ನ್ಯೂಸ್

ಸ್ಪೋಟಗೊಂಡ ಪೋಷಕರ ಆಕ್ರೋಶ-ಸ್ವಾಮೀಜಿ ಅರೆಸ್ಟ್ ಗೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಆದಿಚುಂಚನಗಿರಿ ಕಾಲೇಜಿನಲ್ಲಿ  ಕಾಲುಜಾರಿ ಬಿದ್ದು ಸಾವುಕಂಡ ಪ್ರಕರಣ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.ಕಾಲೇಜಿ  ಪ್ರಸನ್ನನಾಥ ಸ್ವಾಮೀಜಿಗಳು ಡಿಸಿ ಎಸ್ಪಿ ಸ್ಥಳಕ್ಕೆಬರಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಸಾವನ್ನಪ್ಪಿದ ಮಗಳ ಬಗ್ಗೆಯೂಸರಿಯಾದ ಮಾಹಿತಿ ನೀಡಿಲ್ಲವೆಂದು ತಂದೆ ಓಂಕಾರಪ್ಪನವರ ಆರೋಪವಾಗಿದೆ. ಮಗಳ ಮೃತ ದೇಹ ಮರಣೋತ್ತರ ಪರೀಕ್ಷೆಗೆ ತಂದ ತಕ್ಷಣ ತಂದೆ ಓಂಕಾರಪ್ಪ ಮತ್ತು ಅವರ ಸ್ನೇಹಿತರು ಆದಿಚುಂಚನಗಿರಿ ಶಾಲೆಗೆ ಲಗ್ಗೆ ಇಟ್ಟಿದ್ದಾರೆ.

ಮೊದಲಿಗೆ ಶಾಲೆಯ ಗೇಟು ಹಾಕಿ ಮುಚ್ಚಲಾಗಿತ್ತು. ಗೇಟನ್ನ ದಬ್ಬಿ ಆಕ್ರೋಶವ್ಯಕದತಪಡಿಸಿದ ಪೋಶಕರ ತಂಡ ಸೀದಾ ಆಡಳಿತಮಂಡಳಿ ಕಚೇರಿಗೆ ಪ್ರವೇಶಿಸಿದೆ. ಮಗಳ ಸಾವಿನ ಬಗ್ಗೆ ಆಡಳಿತ ಮಂಡಳಿ ಮಾಹಿತಿ ನೀಡಿಲ್ಲ. ಮಗಳು ಶಾಲೆಯ ವಾರ್ಡನ್, ಟೀಚರ್ಸ್ ಗಳು ಟಾರ್ಚರ್ ನೀಡಿದ್ದಾರೆ ಎಂದು ದೂರಿದ್ದಾರೆ.

ಮೃತ ವಿದ್ಯಾರ್ಥಿನಿಯ ಪೋಷಕರು ದಾಗುಂಡಿ ಇಟ್ಟಾಗ ಕಾಲೇಜಿನ ಯಾವ ಸ್ಟಾಫ್ ಇರಲಿಲ್ಲ. ಪೊಲೀಸರು ಕೈಚಳಕ ತೋರಿರುವುದಾಗಿ ಆರೋಪಿಸಿದ್ದಾರೆ. ಈ ವೇಳೆ ಪಿಐ ರವಿ ಸಙಗನಗೌಡ ಮಾಧ್ಯಮದವರನ್ನ ತಡೆಗಟ್ಟುವಪ್ರಯತ್ನ ಮಾಡಿದ್ದಾರೆ. ನಂತರ ಪೋಷಕರೇ ಮಾಧ್ಯಮದವರನ್ನ ಕರೆದೊಯ್ದಿದ್ದಾರೆ.

ಅದರಂತೆ ಡಿಡಿಪಿಐ ಸಹ ಪರವಾನಗಿ ನೀಡಿ ಕಾಲೇಜಿನ ಮನಸ್ಸೋ ಇಚ್ಚೇ ಆಡಳಿತ ನಡೆಸಲು ಬಿಟ್ಟಿರುವುದೇ ಈ ಎಲ್ಲಾ ಗೊಂದಲಕ್ಕೆ ವಿದ್ಯಾರ್ಥಿನಿಯ ಸಾವಿಗೆ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾಮೀಜಿ ಅರೆಸ್ಟ್ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.ಮೇಲ್ಜಾತಿ ಮಕ್ಕಳಿಗೆ ಮನ್ಬಣೆಹಾಕಲಾಗುತ್ತದೆ. ಒಂದು ದಿನ ಫೀಸ್ ಕಟ್ಟೋದು ತಡವಾದರೂ ಕಾಲೇಜಿನವರು ಸುಮ್ಮನೆ ಕೂರಲ್ಲ ಒಂದು ಜೀವಹೋಗಿದೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ-https://suddilive.in/archives/4288

Related Articles

Leave a Reply

Your email address will not be published. Required fields are marked *

Back to top button