ರಾಜಕೀಯ ಸುದ್ದಿಗಳು

ಬಿಜೆಪಿ ನಡೆಸಿದ ಭ್ರಷ್ಠಾಚಾರದ ಹಣವನ್ನ ಜನರಿಗೆ ಗ್ಯಾರೆಂಟಿ ರೂಪದಲ್ಲಿ ಹಂಚಲಾಗುತ್ತಿದೆ-ಸುಂದರೇಶ್

ಸುದ್ದಿಲೈವ್/ಶಿವಮೊಗ್ಗ

ಮಂಗಳೂರಿನಲ್ಲಿ ಫೆ. 17 ರಂದು ನಡೆಯುವ ಗ್ಯಾರೆಂಟಿ ಸಮಾವೇಶಕ್ಕೆ ಜಿಲ್ಲೆಯಿಂದ 8 ಸಾವಿರ ಜನ ಭಾಗವಹಿಸುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ಹೆಚ್ ಎಸ್ ಸುಂದರೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.18 ರಂದು ಶಿಕಾರಿಪುರದಲ್ಲಿ, ಫೆ.21 ರಂದು ಸೊರಬದಲ್ಲಿ ಹಾಗೂ ಫೆ.24 ರಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಗ್ಯಾರೆಂಟಿ ಸಮಾವೇಶ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಬಿಜೆಪಿ ಗ್ಯಾರೆಂಟಿ ಯೋಜನೆಯನ್ನ ಅವಹೇಳನ ಮಾಡಿಕೊಂಡು ಬರುತ್ತಿದೆ ಎಂದು ದೂರಿದರು.

39 ಸಾವಿರ ಕೋಟಿ ರೂ. ಹಣವನ್ನ ಮಾರ್ಚ್ ಕೊನೆಯ ವರೆಗೆ ಜನರಿಗೆ ಗ್ಯಾರೆಂಟಿಯನ್ನ ಹಂಚಿದಂತಾಗುತ್ತದೆ. ಇದು ಭ್ರಷ್ಠಾಚಾರ ರಹಿತ ಹಣವೆಂದರು. ರಾಜ್ಯ ಸರ್ಕಾರ ಮುಖ್ಯಂತ್ರಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ 15 ನೇ ಹಣಕಾಸಿನ ಯೋಜನೆಯಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟನೆ ಮಾಡಲಾಗುತ್ತಿದೆ.

ಬಿಜೆಪಿ ಮಾಡಿರುವ ಭ್ರಷ್ಠಾಚಾರದ ಹಣವನ್ನೇ ಜನರಿಗೆ ನೀಡಲಾಗುತ್ತಿದೆ. ರೈತರ ಮೇಲೆ ಲಾಠಿ ಪ್ರಹಾರ, ಗೋಲಿಬಾರ್ ಮಾಡಲಾಗುತ್ತಿದೆ. ಕಳೆದ ಬಾರಿ ನಡೆದ ಘಟನೆಯಲ್ಲಿ ರೈತರನ್ನ ಪ್ರಧಾನಿ ಮೋದಿ ತಿರುಗಿ ನೋಡಿಲ್ಲ. ದೇವರ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಬುದ್ದಿಕಲಿಸಲಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ರೈತರ ಬಗ್ಗೆ ಹಗೂರವಾಗಿ ಮಾತನಾಡುತ್ತಿದ್ದಾರೆ. ಇವರು ಹೊಟ್ಟೆಗೆ ಏನು ತಿನ್ನುತ್ತಾರೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಸುಂದರೇಶ್,  ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇವೆ. ಬಗ್ಗೆ ಬಿಜೆಪಿ ಪಕ್ಷ ಭ್ರಷ್ಠಾಚಾರಕ್ಕೆ ಬ್ರೇಕ್ ಹಾಕಿದೆ. ನಾಲ್ಕುವಾರದಲ್ಲಿ ಬಾಂಡ್ ಕೊಟ್ಟವರ ಹೆಸರನ್ನ ಬಹಿರಂಗ ಪಡಿಸಲು ಸೂಚಿಸಿದೆ. ಬಾಂಡ್ ಕೊಟ್ಟವರಿಗೆ ಆದಾಯ ತೆರಿಗೆ ಮುಕ್ತ ಗೊಳಿಸುವ ಹುನ್ನಾರ ಈ ಬಾಂಡ್ ಹಿಂದೆ ಇತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಾಜಿ ಎಂಎಲ್ ಸಿ ಆರ್.ಪ್ರಸನ್ನ ಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶ, ಚಂದ್ರಭೂಪಲ್, ಪ್ರವೀಣ್ ಕುಮಾರ್ ಮೊದಲಾದವರು‌ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9110

Related Articles

Leave a Reply

Your email address will not be published. Required fields are marked *

Back to top button