ರಾಜಕೀಯ ಸುದ್ದಿಗಳು

ಸಚಿವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಜಿಲ್ಲಾಧ್ಯಕ್ಷರ ಆಹ್ವಾನ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಸಚಿವ ಮಧು ಬಂಗಾರಪ್ಪನವರು ಶುಗರ್ ಫ್ಯಾಕ್ಟರಿ ಭೂಮಿಯಲ್ಲಿ ಒಕ್ಕಲೆಬ್ಬಿಸುತ್ತಿರು ರೈತರ ವಿಚಾರದಲ್ಲಿ ಬಿಜೆಪಿ ಸಂಸದರು ಮತ್ತು ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ವಿರುದ್ಧ ಗರಂ ಆದಬೆನ್ನಲ್ಲೇ ಜಿಲ್ಲಾಧ್ಯಕ್ಷ ಮೇಘರಾಜ್ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಚರ್ಚೆಗೆ ತಿರುಗೇಟು ನೀಡಿದ್ದಾರೆ.

ರೈತರ ಪರವಾಗಿ ನಿಂತಿರುವ ಸಚಿವರ ನಿಲುವು ಸ್ವಾಗತಾರ್ಹ, ಆದರೆ ಸಂಸದರ ವಿರುದ್ಧ ಮತ್ತು ನನ್ನ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನ ಸ್ವೀಕರಿಸಲು ಸಾಧ್ಯವಿಲ್ಲ. ಜನಪರ ಹೋರಾಟದಲ್ಲಿ ವಿಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ಸರಿಯಲ್ಲ ಎಂದು ಗುಡುಗಿದ್ದಾರೆ.

ಜಿಲ್ಲೆ, ಭೂಮಿ‌ ಮತ್ತು ಭೂಮಿಯ‌ ಒಡೆತನದ ವಿಚಾರಕ್ಕೆ ಸಂಬಂಧಪಟ್ಟಂತೆ ಇತಿಹಾಸ ಹೊಂದಿದೆ ಸದಾಶಿವಪುರ, ಯರಗನಾಳು, ಮಲವಗೊಪ್ಪ ಶುಗರ್ ಕಾರ್ಖಾನೆಯನ್ನ ಪುನರಾರಂಭದ ಕೂಗು ಕೇಳಿ ಬಂದಿದೆ 2384 ಎಕರೆಗಳಿದ್ದ ಕಾಡಾ, ಆರ್ ಟಿ‌ಒ‌ ಕಚೇರಿ ಇದ್ದು ಈ ಜಾಗ ಸರ್ಕಾರಕ್ಕೆ ಸೇರುತ್ತದೆ. ಆದರೆ ಇದೇ ಜಾಗದಲ್ಲಿರುವ ರೈತರ ಮತ್ತು ವಸತಿ ನಿಲಯಗಳು ಶುಗರ್ ಫ್ಯಾಕ್ಟರಿಗೆ ಸೇರುತ್ತದೆ‌ ನಿರಾಶ್ರಿತರ ಪರ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.

ರೈತರು ತಮ್ಮನ್ನ‌ ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಜ.12 ರ ಒಳಗೆ ಕಾರ್ಖಾನೆಯ ಹಂಚಿ ಹೋಗಿರುವ ಭೂಮಿಯನ್ನ ರಿಸ್ಟೋರ್ ಮಾಡಲು ಸೂಚಿಸಿದೆ.‌ ಒಕ್ಕಲೆಬ್ಬಿಸುವ ಮುನ್ನ ಸಂಬಂಧಪಟ್ಟ ರೈತರಿಗೆ ನೋಟೀಸ್ ನೀಡಿಲ್ಲ. ಎಸಿ, ಜಿಲ್ಲಾಧಿಕಾರಿ ಉಪತಹಶೀಲ್ದಾರ್ ತಹಶೀಲ್ದಾರ್ ಅವರ ಹಿಂಬರಹವೂ ಸಹ‌ನೀಡಿಲ್ಲ. ಒಕ್ಕಲೆಬ್ಬಿಸುವ ಕುರಿತು ಒಳಗಿಂದೊಳಗೆ ನಡೆಯುವ ಶಂಕೆ ಇರುವುದರಿಂದ‌ ಪಕ್ಷ ನೊಂದ‌ ರೈತರ ಪರ ನಿಲ್ಲುತ್ತದೆ ಎಂದು ಅವರು ದೂರಿದರು.

ಮೂರು ದಿನಗಳ ಮುಂಚೆ, ರೈತರು ಉಸ್ತುವಾರಿ ಸಚಿವರನ್ನ‌ ಭೇಟಿ ಮಾಡಿ ಈಗ ಗಮನಕ್ಕೆ ಬಂದಿದೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತರಗನಹಳ್ಳಿ ಗ್ರಾಮದ ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ಈ ಆತಂಕವನ್ನ‌ಗಮನಿಸಿದ ಸಂಸದರು ದೆಹಲಿ ಪ್ರವಾಸವನ್ನ ರದ್ದುಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ನ್ಯಾಯಾಲಯದಿಂದ ಭದ್ರತೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಗೆ ಸಂಸದರು ನೀಡಿದ ಬೆಂಬಲದಿಂದಾಗಿ ಶೇ50% ಹೋರಾಟಕ್ಕೆ ಜಯವಾಗಿದೆ. ಉಸ್ತುವಾರಿ ಮಂತ್ರಿಗಳು ಮಾಧ್ಯಮಗಳಲ್ಲಿ ಮಾತಿನ ವರಸೆಗೆ ಬಿಜೆಪಿಯ ಅಕ್ಷೇಪವಿದೆ. ಪಾಲಿಕೆಯ ಮಾಜಿ ಸದಸ್ಯ ಹೆಚ್ ಸಿ‌. ಯೋಗೀಶ್ ರೈತರ ಪರ ಹೋರಾಟ ಮಾಡಿದ್ದು ಸಚಿವ ಮಧು ಬಂಗಾರಪ್ಪನವರ ಗಮನಕ್ಕೆ ಬಂದಿಲ್ವಾ? ಎಂದು ಕುಟುಕಿದರು.

ಸಂಸದರ ತಂದೆಯವರೆ ಸಿಎಂ ಆಗಿದ್ದು ರೈತರಸಮಸ್ಯೆ ಯಾಕೆ ಬಗೆಹರಿಸಿಲ್ಲ ಎಂದು ಮಧು ಬಂಗಾರಪ್ಪನವರು ಕೇಳಿದ್ದಾರೆ. ಅವರ ತಂದೆಯೂ‌ ಸಿಎಂ ಆಗಿದ್ದಾಗ ರೈತರ ಸಮಸ್ಯೆಯನ್ನ ಬಗೆಹರಿಸ ಮಾಡಬಹುದಿತ್ತಲ್ಲ ಎಂದು ನಾವು ಕೇಳಿದರೆ ಹೇಗಿರುತ್ತದೆ. ರೈತರ ಸಮಸ್ಯೆಯನ್ನ ಗಮನಕ್ಕೆ ತಂದರೆ ಪಂಚಾಯಿತಿ ಬಿಚ್ಚಿಡಬೇಕಿದೆ ಎಂಬ ಸಚಿವರ ಸವಾಲು ರೈತರು ಭೂಮಿ ಕಳೆದುಕೊಳ್ಳುವ ವಿಷಯದಲ್ಲಿ ಬಹಿರಂಗ ಸಭೆಗೆ ಆಹ್ವಾನಿಸಿದರು.

ಬಿಜೆಪಿಯವರು ಪಾದಯಾತ್ರೆ ಮಾಡಲಿಲ್ಲ ಏಕೆ ಎಂದು ಸಚಿವರು ಕೇಳುತ್ತಾರೆ. ಹಾಗಾದರೆ ನೀವು ಯಾಕೆ ಪಾದಯಾತ್ರೆ ಮಾಡಿದ್ದು ಬೊಜ್ಜು ಕರೆಗಿಸಿಕೊಳ್ಳುವುದಕ್ಕಾ ಎಂದು‌ ಪ್ರಶ್ನಿಸಿದರು. ನಿಮ್ಮ ಪಾದಯಾತ್ರೆಯಿಂದ‌ ಏನು ಪ್ರಯೋಜನವಾಗಿದೆ ಎಂದು ಮರುಪ್ರಶ್ನಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶರಾವತಿ ಸಮಸ್ಯೆಯನ್ನ ನೀವು ಯಾಕೆ ಬಗೆಹರಿಸಲಿಲ್ಲ ಎಂದು ಕೇಳಿದರು.

ನೀವು ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿದ್ದಾಗ ಯಾಕೆ ಕ್ರಮ‌ಜರುಗಿಸಲಿಲ್ಲ.. ಸಂಸದರು 9½ ಸಾವಿರ ಎಕರೆ ಜಮೀನನ್ನ ಕಂದಾಯ ಭೂಮಿ ಮಾಡಲು ಪ್ರಸ್ತಾವನೆನ್ನ‌ ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಸಂಸದರು ಸಂತ್ರಸ್ತರ ಪರ ಸಂಸತ್ ನಲ್ಲಿ ಭಾಗಿಯಾಗಿ ಮಾತನಾಡಿರುವ ವಿಡಿಯೋ ಕ್ಲಿಪ್ ಗಳಿವೆ. ಸಚಿವರು ಬಯಸಿದ್ದಲ್ಲಿ ಸಿಡಿ ಮೂಲಕ ಹಾಜರಿ ಪಡಿಸುವುದಾಗಿ ಸಚಿವರ ಸವಾಲ್ ಗೆ ಜವಾಬು ಕೊಟ್ಟಿದ್ದಾರೆ ಎಂದರು.

ಹಾಲು ಉತ್ಪಾದಕರಿಗೆ ಸರ್ಕಾರದ ಅನುದಾನ‌ಕಟ್

ಪ್ರತಿಯೊಂದು ಹಾಲು ಒಕ್ಕೂಟ ಕೂಡ 25-30 ಕೋಟಿ ನಷ್ಟದಲ್ಲಿವೆ. ಉತ್ಪಾದಕನಿಗೆ ಅನುಕೂಲವಾಗುವಂತೆ 3.50 ರೂ ಹಾಲಿನ ದರ ಹೆಚ್ಚಿಸಲಾಯಿತು. ಆದರೆ ಹಾಲು ಉತ್ಪಾದಕರಿಗೆ ಸರಿಯಾದ ಹಣ ದೊರೆಯುತ್ತಿಲ್ಲ.‌ ಸರ್ಕಾರ ಮತ್ತು ಒಕ್ಕೂಟದ ಮಧ್ಯೆ ಹೊಂದಾಣಿಕೆ ಇಲ್ಲ ಎಂಬುದು ಸ್ಪಚ್ಟವಾಗಿದೆ. ಹಾಲಿನದರದ ಪ್ರೋತ್ಸಾಹ ಧನ ನಿಲುಗಡೆ ಮಾಡಲಾಗಿದೆ. ಬಿಎಸ್ ವೈ ಆರಂಭಿಸಿದ ಪ್ರೋತ್ಸಾಹ ಧನ ಬಂದ್ ಮಾಡಲಾಗಿದೆ ಎಂದು ದೂರಿದರು.

ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ 35 ರೂ. ಹಣವನ್ನ 28 ರೂ. ಹಣಕ್ಕೆ ಇಳಿಸಲಾಗಿದೆ. ಪಶುಆಹಾರಕ್ಕೆ ನೀಡಲಾಗುತ್ತಿರುವ ಹಣವನ್ನ ಹೆಚ್ಚಿಸಿ ಹಾಲು ಉತ್ಪಾದಕರ ರೈತನ ಜೀವನವನ್ನ ದುಸ್ಥಿರವಾಗುವಂತೆ ಮಾಡಲಾಗಿದೆ. ಹಿಂಡಿಗಳ ಚೀಲದ ಹೆಚ್ಚಿಸಲಾಗಿದೆ.

ಶಿಮೂಲ್ ಹಾಲು ಒಕ್ಕೂಟವು ಆರ್ಥಿಕ ಸಂಕಷ್ಟವನ್ನ‌ಬಗೆಹರಿಸಿಕೊಳ್ಳಿ ರೈತನ ಉತ್ಪಾದನೆಯನ್ನ ಕಡಿತಗೊಳಿಸಿದರೆ ಬಿಜೆಪಿ ಕೈಕಟ್ಟಿಕೂರಲ್ಲ. ಒಂದು ವಾರದಲ್ಲಿ ರೈತನಿಗೆ ನೀಡುವ‌ ಹಣವನ್ನ ಹಿಂದಿನ ಸರ್ಕಾರ‌ನೀಡುವ ರೀತಿ‌ ಮಾಡದಿದ್ದರೆ ಬಿಜೆಪಿ ಎಲ್ಲಾ ಒಕ್ಕೂಟದ ಮುಂದೆ ಧರಣಿ ನಡೆಸಲಿದೆ ಎಂದು‌ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button