ರಾಜಕೀಯ ಸುದ್ದಿಗಳು

ಶಿವಣ್ಣನ ಡ್ಯಾನ್ಸು, ರಾಘಣ್ಣನ ನೋಟು, ಈಶ್ವರಪ್ಪನಿಗೆ ಓಟು-ಬಿಎಸ್ ವೈ ಕ್ಷೇತ್ರದಲ್ಲಿ ಕೇಳಿ ಬಂದ ಘೋಷಣೆ

ಸುದ್ದಿಲೈವ್ ಶಿವಮೊಗ್ಗ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ.‌

ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪ ಇಂದು ಶಿಕಾರಿಪುರದಲ್ಲಿ ಬೈಕ್ ರ್ಯಾಲಿ ನಡೆಸಿದ್ದಾರೆ. ಶಿಕಾರಿಪುರದ ಹುಚ್ಚರಾಯ ಆಂಜನೇಯ ಸ್ಬಾಮಿ ದೇವರಿಗೆ ಪೂಜೆ ಸಲ್ಲಿಸಿ ಹಿಂದೂ ಹುಲಿ ಈಶ್ವರಪ್ಪ ಬೈಕ್‌ರ್ಯಾಲಿ ನಡೆಸಿದ್ದಾರೆ.‌

ತಾವು ಮತ್ತು ಪುತ್ರ ಕಾಂತೇಶ್ ತೆರದ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಮೆರವಣಿಗೆ. ದೇವಸ್ಥಾನದಿಂದ‌, ತೇರುಬೀದಿ. ಬಸ್ ಸ್ಡ್ಯಾಂಡ್ . ಶಿರಾಳಕೊಪ್ಪ ಸರ್ಕಲ್ ಮೂಲಕ ದೊಡ್ಡೇಕೇರಿ ಗಿಡ್ಡೇಶ್ವರ ದೇವಸ್ಥಾನ ತಲುಪಿದೆ.

ಜೈಶ್ರೀರಾಮ್, ನರೇಂದ್ರಮೋದಿ ಆಗೇಬಡೋ ಹಮ್ ತುಮಾರ ಸಾಥ್ ಹೈ, ರಾಘಣ್ಣ ನೋಟು, ಶಿವಣ್ಣನ ಡ್ಯಾನ್ಸು ಈಶ್ವರಪ್ಪನಿಗೆ ಓಟು ಎಂಬ ಘೋಷಣೆ ಮೊಳಗಿದವು. ಗಿಡ್ಡೇಶ್ವರ ದೇವಾಲಯದ ಬಳಿ ಮಾತನಾಡಿದ ಕಾಂತೇಶ್, ಯಡಿಯೂರಪ್ಪನವರ ಮನೆಗೆ ಹೋದಾಗ ಹಾವೇರಿಯಿಂದ ಟಿಕೇಟ್ ಕೊಡಿಸಿ ಗೆಲ್ಲಿಸಿಕೊಡ್ತೀನಿ ಎಂದಿದ್ದರು. ನಾನು ಮಾಡಿದ ತಪ್ಪೇನು? ಟಿಕೇಟ್ ತಪ್ಪಿಸಲು ಕಾರಣವೇನು ಎಂದು ಪ್ರಶ್ನಿಸಿದರು.

ವಿಜಯೇಂದ್ರ ಮತ್ತುರಾಘವೇಂದ್ರ ಇಬ್ಬರೂ ನನಗೆ ಅಣ್ಣ, ಇಬ್ಬರೂ ಅಣ್ಣಂದಿರು ಎಂಪಿ ಎಂ ಎಲ್ ಎ ಆಗಿದ್ದಾರೆ. ಕಳೆದ ಬಾರಿ ಎಂಎಲ್ ಎ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಸ್ಪರ್ಧೇಬೇಡ ಎಂದ್ರು ಕಣದಿಂದ ಹಿಂದೆ ಸರಿದರು. ಸಿಟಿ ರವಿ, ನಳೀನ್ ಕುಮಾರ್ ಕಟೀಲ್ ಪ್ರತಾಪ್ ಸಿಂಹರಿಗೆ ಟಿಜೇಟ್ ನೀಡಲಿಲ್ಲ. ಹಿಂದೆಂದೂ ಪಕ್ಷ ಹೇಳಿದ ಗೆರೆದಾಟಿರಲಿಲ್ಲ. ಈ ಬಾರಿ ಪಕ್ಷ ಕುಟುಂಬದ ಕಪಿಮುಷ್ಠಿಯಿಂದ ಹಿಂದೆ ಮುಕ್ತ ಪಡಿಸಲು ಸ್ಪರ್ಧೆ ಅನಿವಾರ್ಯವಾಯಿತು.

ತೆರದ ಜೀಪಿನ ಮೂಲಕ ಮಾತನಾಡಿದ ಈಶ್ವರಪ್ಪ, ಬಿಜೆಪಿಯಲ್ಲಿರುವ ಅನ್ಯಾಯವನ್ನ ಸರಿಪಡಿಸಲು ಸ್ಪರ್ಧೆ ಮಾಡುತ್ತಿರುವೆ. ಹುಚ್ಚರಾಯ ದೇವಸ್ಥಾನದಿಂದ ಹೊರಟ ಮೆರವಣಿಗೆ ಗಿಡ್ಡಪ್ಪ ದೇವರ ಮುಂದೆ ನಿಂತು ಹೇಳುತ್ತಿದ್ದೇನೆ. ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಕೊಡಲಿ ಎಂದರು.

ನರೇಂದ್ರ ಮೋದಿ ವಂಶ ಪರಂಪರೆ ಬೇಡ ಎಂದರು. ಆದರೆ ಕರ್ನಾಟಕದಲ್ಲಿ ಏನಾಗಿದೆ. ಲಿಂಗಾಯಿತರು ನಾಯಕರಾಗಿದ್ದರೆ ಯತ್ನಾಳ್ ಗೆ ಕೊಡಬಹುದಿತ್ತು. ಬಿಜೆಪಿ ಅಧ್ಯಕ್ಷ ಸ್ಥಾನ, ಒಕ್ಕಲಿಗರು ಬೇಕಿದ್ದರೆ ಸಿಟಿ ರವಿಗೆ ಕೊಡಬಹುದಿತ್ತು. 6 ತಿಂಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಬಹುದಿತ್ತು. 6 ತಿಂಗಳು ಹಠಹಿಡಿದು ತನ್ನ‌ಮಗನಿಗೆ ಟಿಕೇಟ್ ಕೊಡಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ಭಾಗಿಯಾಗಿದ್ದಾರೆ. ಎಲ್ಲಾ ಹಿಂದೂ ಹುಲಿಗಳನ್ನ ಹಿಂದೆ ಸರಿಸಲಾಗುತ್ತಿದೆ ಕಾರಣ ತನ್ನ ಮಗ ಸಿಎಂ ಆಗಲು ಅಡ್ಡವಾಗುತ್ತಾರೆ ಎಂದು ಇವರುಗೆ ಯಾವ ಜವಬ್ದಾರಿ ನೀಡಲಾಗುತ್ತಿಲ್ಲ ಎಂದು ದೂರಿದರು.

ಗಿಡ್ಡಪ್ಪ ದೇರ ಮುಂದೆ ಬಂದು ಅವರು ಬಂದು ಹೇಳಲಿ ಕಾಂತೇಶ್ ಗೆ ಟಿಕೇಟ್ ಕೊಡಲು ಹೇಳಲಿಲ್ಲ ಎಂದು ಹೇಳಿ ಸವಾಲು ಹೇಳಿದರು. ಆದರೆ ಶೋಭಾ ಕರದ್ಲಾಂಜೆಗೆ ಮತ್ತು ಬಸವರಾಜು ಬೊಮ್ಮಾಯಿಗೆ ಹಠ ಹಿಡಿದು ಟಿಕೇಟ್ ಕೊಡಿಸಿದರು. ಆದರೆ ಈ ಬಾರಿ ರಾಘವೇಂದ್ರರನ್ನ ಸೋಲಿಸಿಯೇ ಸೋಲಿಸುವೆ ಎಂದರು.

ನಾನು ಅಖಾಡದಿಂದ ಹಿಂದೆ ಸರಿಯಲ್ಲ. ಬಿಜೆಪಿ ಕಾರ್ಯಕರ್ತರು ನೊಂದಿದ್ದಾರೆ. ಹಾಗಾಗಿ ಬದಲಾವಣೆ ಅನಿವಾರ್ಯವಾಗಿದೆ. ಚಿಕ್ಕಮಗಳೂರಿಗೆ ಹೋಗಿ ಶೋಭಾರಿಗೆ ಟಿಕೇಟ್ ಎಂದು ಹೇಳುತ್ತಾರೆ‌. ಆದರೆ ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಲಿಲ್ಲವಾ ಎಂದು ಪ್ರಶ್ನಿಸಿದರು.

ಬಿಜೆಪಿಯ ಶಿಸ್ತು ಕಾಪಾಡಿಕೊಂಡು ಬಂದವನು.‌ಕೇಂದ್ರದ ನಾಯಕರು ಬಿಎಸ್ ವೈ ಬಗ್ಗೆ ಭ್ರೆಯಲ್ಲಿದ್ದಾರೆ. ಕೆಜೆಪಿ ಕಟ್ಟಿದಾಗ ಅವರ ಪಕ್ಷ ಎಷ್ಟು ಬಂತು 6 ಸೀಟು ಬಂದಿದೆ ಹಾಗಿದ್ದರೆ ಸ್ವೀಪ್ ಮಾಡಬೇಕಿತ್ತು ಎಂದು ಗುಡುಗಿದರು.

ಅನ್ಯಾಯ ಯಾಕೆ ಮಾಡುದ್ರಿ? ನಿಮ್ಮ ಮಗ ಸಿಎಂ ತಪ್ಪಿಸ್ತಾರೆ ಎಂದು ಟಿಜೆಟ್ ಕೊಡಲಿಲ್ಲ. ವಿಜೇಂದ್ರ ಶಿಕಾರಿಪುರದಲ್ಲಿ ಗೆದ್ದಿದ್ದು ಹೇಗೆ? ಹೊಂದಾಣಿಕೆ ಮೂಲಕವಾಗಿ. ಮೈಸೂರಿನಲ್ಲಿ ಸಿದ್ದರಾಮಯ್ಯ ಗೆಲ್ಲಬೇಕು. ಮಗ ಶಿಕಾರಿಪುರದಲ್ಲಿ ಗೆಲ್ಲಬೇಕೆಂದು ಹೊಂದಾಣಿಜೆ ಮಾಡಿಕೊಳ್ಳಲಾಗಿತ್ತು. ಈಗ ಅದೇ ಹೊಂದಾಣಿಕೆ ಮೂಲಕ ಕಾಂಗ್ರೆಸ್ ನಿಂದ ಡಮ್ಮಿಕ್ಯಾಂಡಿಡೇಟ್ ಹಾಕಿಸಿಕೊಙಡಿದ್ದಾರೆ ಎಂದು ಜನ ಹೇಳ್ತಾ ಇದ್ದಾರೆ ಎಂದು ಆರೋಪಿಸಿದರು.

ಶಿಕಾರಿಪುರ ಜನರನ್ನ ಕುರಿ ಮಾಡಿ‌ಕೊಂಡು ಗೆಲ್ಲಬಹುದು ಎಂದು ತಿಳಿದುಕೊಂಡಿದ್ದಾರೆ. ಈಬಾರಿ ಜನ ನನನ್ನ ಗೆಲ್ಲಿಸಿ ನಿಮ್ಮನ್ನ ಕುರಿ ಮಾಡಲಿದ್ದಾರೆ. ಈ ಬಾರಿ ನೀವೇ ಈಶ್ವರಪ್ಪ ಎಂದು ತಿಳಿದು ರಾಘವೇಂದ್ರರನ್ನ ಸೋಲಿಸೇಕು. ಆಗ ಅವರಿಗೆ ನೋವು ಗೊತ್ತಾಗುತ್ತೆ. ನನ್ನ ಚಿಹ್ನೆ ಶೀಘ್ರದಲ್ಲಿ ತಿಳಿಸುವೆ ಎಂದರು.

ಇದನ್ನೂ ಓದಿ-https://suddilive.in/archives/11413

Related Articles

Leave a Reply

Your email address will not be published. Required fields are marked *

Back to top button