ರಾಜ್ಯ ಸುದ್ದಿಗಳು

ನಾವು ಅಂದುಕೊಂಡಂತೆ ಕಾನೂನು ವ್ಯವಸ್ಥೆ ಇಲ್ಲ-ವಿಧಾನ ಸಭೆಯಲ್ಲಿ ಶಾಸಕ ಚೆನ್ನಿ ಗುಡುಗು

ಸುದ್ದಿಲೈವ್/ಬೆಂಗಳೂರು

ನಾವು ಅಂದುಕೊಂಡಂತೆ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಶಾಸಕ ಚೆನ್ನಬಸಪ್ಪ 16 ನೇ ವಿಧಾನಸಭೆಯ 3 ನೇ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಗುಡುಗಿದ್ದಾರೆ. ಶಿವಮೊಗ್ಗದ ಕಾನೂನು ವ್ಯವಸ್ಥೆ ಸರಿಯಿಲ್ಲವೆಂದು ನಾಲ್ಕೈದು ಉದಾಹರಣೆ ಸಮೇತ ಗುಡುಗಿದ್ದಾರೆ.

ರಾಗಿಗುಡ್ಡದಲ್ಲಿ ಅಕ್ಟೋಬರ್ ತಿಂಗಳ ವೇಳೆ ನಡೆದ ಈದ್ ಮೆರವಣಿಗೆಯಲ್ಲಿ ಔರಂಗಜೇಬ್ ನ ಕಟೌಟ್ ಹಾಕಲಾಗಿತ್ತು. ಆದರೆ ಹನುಮಾನ್ ಧ್ವಜದ ಬಗ್ಗೆ ಆಕ್ಷೇಪಿಸಲಾಗುತ್ತದೆ. ಹಿಂದುಗಳ ಮನೆಗಳನ್ನ ಹುಡುಕಿಕೊಂಡು ಹೋಗಿ ಹಾನಿ ಮಾಡಲಾಯಿತು. ಆದರೆ ಅಮಾಯಕ ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆತನನ್ನ ಗುಲ್ಬರ್ಗ ಜೈಲಿಗೆ ಕಳುಹಿಸಲಾಗಿದೆ ಎಂದು ದೂರಿದರು.

ಅದರಂತೆ ಅಯೋದ್ಯ ರಾಮಮಂದಿರ ಉದ್ಘಾಟನೆಯ ದಿನವಾದ ಜ.22 ರಂದು ಶಿವಮೊಗ್ಗ‌ದ ಶಿವಪ್ಪ ನಾಯಕನ ಪ್ರತಿಮೆಯ ಬಳಿ ಸಿಹಿ ಹಂಚುವಾಗ ದ್ವಿಚಕ್ರವಾಹನದಲ್ಲಿ ಮಗುವಿನೊಂದಿಗೆ ಬಂದ ಮಹಿಳೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾಳೆ. ಆದರೆ ಆ ಬಗ್ಗೆ ಎಸ್ಪಿ ಅವರು ಘೋಷಣೆ ಕೂಗಿದ ಮಹಿಳೆ ಮಾನಸಿಕ ಅಸ್ವಸ್ಥಳು ಎಂದು ಹೇಳುತ್ತಾರೆ.

ಮಹಿಳೆಗೆ ಮಗುವನ್ನ ದ್ವಿಚಕ್ರವಾಹನದಲ್ಲಿ ಬಂದು ವೃತ್ತದ ಬಳಿ ವಾಹನದಲ್ಲಿ ನಿಂತು ಜೈಶ್ರೀರಾಮ್ ಎಂದರೆ ಅಲ್ಲಾಹು ಅಕ್ಬರ್ ಎನ್ನಲು ಗೊತ್ತಾಗುವ ಮಹಿಳೆಗೆ ಮಾನಸಿಕ ಅಸ್ವಸ್ಥೆ ಪಟ್ಟ ಕಟ್ಟಿ ಪ್ರಕರಣ ಏನೂ ಆಗಿಲ್ಲವೆಂಬಂತೆ ನೋಡಿಕೊಳ್ಳಲಾಯಿತು. ಇದು ನಮ್ಮ ಕಾನೂನಿನ ವ್ಯವಸ್ಥೆಯಾಗಿದೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶ ಎಂದು ಗೊತ್ತಿದ್ದರು. ಅದನ್ನ ಸಮರ್ಪಕವಾಗಿ ನೋಡಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ ಎಂದು ದೂರಿದರು.

ಅದರಂತೆ ರೈಲ್ವೆ ನಿಲ್ದಾಣದ ಬಳಿ ದೊರೆತ ಪೆಟ್ಟಿಗೆ ಕುರಿತು ಶಾಸಕ ಚೆನ್ನಬಸಪ್ಪ ಮಾಹಿತಿ ಬಿಚ್ಚಿಟ್ಟಿದ್ದಾರೆ. ನವೆಂಬರ್ ನಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಬಾಂಗ್ಲಾ ದೇಶದ ವಿಳಾಸವಿರುವ ದೊರೆತ ಪೆಟ್ಟಿಗೆಯನ್ನ ಬಾಂಬ್ ಬ್ಲಾಸ್ಟ್ ಮಾಡಿ ಪೆಟ್ಟಿಗೆ ಒಪನ್ ಮಾಡಲಾಯಿತು. ಆ ವೇಳೆ ಸಾಮಾನ್ಯನಾಗಿ ಅದೇ ಜಾಗದಲ್ಲಿ ಬೆಳಗಿನ ಜಾವದ ವರೆಗೂ ಇದ್ದೆ.

ಪೆಟ್ಟಿಗೆಯಲ್ಲಿದ್ದ ಬಿಳಿ ಪೌಡರ್ ಬಗ್ಗೆ ಬಾಂಬ್ ಸ್ಕ್ವಾಡ್ ನವರೇ ಆತಂಕ ವ್ಯಕ್ತಪಡಿಸಿದ್ದರು. ಎಫ್ ಎಸ್ ಐ ಎಲ್ ವರದಿ ಬರುವ ಮುನ್ನವೇ ಎಸ್ಪಿಯವರು ಪೆಟ್ಟಿಗೆಯಲ್ಲಿ ದೊರೆತಿರುವುದು ಉಪ್ಪು ಎಂದು ಹೇಳುತ್ತಾರೆ. ಬಾಂಬ್ ತಯಾರಿಸಿ ನದಿಯಲ್ಲೇ ಟ್ರಯಲ್ ಬಾಂಬ್ ಸ್ಪೋಟಿಸಿದ ನಗರವಾದ ಶಿವಮೊಗ್ಗದಲ್ಲಿ ಪೆಟ್ಟಿಗೆಯಲ್ಲಿ ದೊರೆತಿದ್ದ ವಸ್ತು ಉಪ್ಪು ಎಂದು ಹೇಳಲಾಗುತ್ತೆ. ಎಫ್ ಎಸ್ ಎಲ್ ವರದಿ ಬರುವ ಮುಂಚೆ ಅಧಿಕಾರಿಯೊಬ್ವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ಕೊಡುತ್ತಾರೆ ಎಂದು ಗುಡುಗಿದ್ದಾರೆ.‌ ಇದು ನಮ್ಮ ರಾಜ್ಯದ ಕಾನೂನು ಎಂದು ಶಾಸಕರು ವಿಧಾನ ಸಭಾ ಅಧಿವೇಶನದಲ್ಲಿ ಸ್ಪೀಕರ್ ಅವರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ-https://suddilive.in/archives/9049

Related Articles

Leave a Reply

Your email address will not be published. Required fields are marked *

Back to top button