ರಾಜ್ಯ ಸುದ್ದಿಗಳು

ಜೈ ಶ್ರೀ ರಾಮ್ ಈಗ‌ ಸೆಲ್ಫಿ ಹಾಟ್ ಸ್ಪಾಟ್!

ಸುದ್ದಿಲೈವ್/ಶಿಚಮೊಗ್ಗ

ಸೆಲ್ಫಿ ಹಾಟ್ ಸ್ಪಾಟ್ ಆಗಿದೆ ಶಿವಪ್ಪ ನಾಯಕ ಪ್ರತಿಮೆಯ ಜಾಗ. ಮಾಜಿ ಈಶ್ವರಪ್ಪನವರಿಂದ ಈ ಜಾಗದಲ್ಲಿ ಐದು ಸಾವಿರ ಲಡ್ಡು ಹಂಚುವ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿದೆ.

ಶಿವಪ್ಪ ನಾಯಕ ವೃತ್ತದ ಬಳಿ ಪ್ರಸಾದ ವಿತರಣೆಗಾಗಿ ಜೈ ಸ್ರೀ ರಾಮ್ ಎಂದು ಹೂವಿನಲ್ಲಿ ಅಲಂಕರಿಸಾಗಿದೆ. ಎದುರಿಗೆ ಶ್ರೀರಾಮನ ಕಟೌಟ್ ನಿರ್ಮಿಸಲಾಗಿದೆ. ಈ ವೇಳೆ ಮ್ಯಾಕ್ಸ್ ಆಸ್ಪತ್ರೆಯ ಡಾ.ನಾಗೇಂದ್ರ ಸಹ ಸೆಲ್ಫಿ ತೆಗೆದುಕೊಂಡಿರುವುದು ವಿಶೇಷವಾಗಿತ್ತು.  ಪಾಲಿಕೆಯ ಮಲ್ಟಿ ಪಾರ್ಕಿಂಗ್ ಬಿಲ್ಡಿಂಗ್ ನ ಮುಂಭಾಗ ಸಾವಿರಾರುಕರಸೇವಕರಿಗೆ ಸಂದ ಜಯ ಶ್ರೀರಾಮ ಯುಗ ಪುನರಾರಂಭ ಬೃಹದಾಕಾರದ ಫ್ಲೆಕ್ಸ್ ಅಳವಡಿಸಲಾಗಿದೆ.

ವಿಷ್ಣು ದೇವರ ಮತ್ತು ಆಂಜನೇಯ ಪ್ರತಿಮೆ ನಿರ್ಮಿಸಿ ಹಿಙದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗಾಗಿ ನಿರ್ಮಿಸುವ ರೀತಿ ಅಲಂಕಾರ ನಿರ್ಮಿಸಲಾಗಿದೆ. ಜನಗಳು ಮಾತ್ರ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮದಲ್ಲಿ ಮುಳುಗಿದ್ದಾರೆ. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಕಟೌಟ್ ನಿರ್ಮಿಸಲಾಗಿದೆ.

ಆಂಜನೇಯನ ಫ್ಲೆಕ್ಸ್ ಸಹ ಆಕರ್ಷಣೀಯವಾಗಿದೆ. ಒಟ್ಟಿನಲ್ಲಿ ಹಳೇ ಶಿವಮೊಗ್ಗ ಮತ್ತೊಮ್ಮೆ ಶೃಂಗಾರಗೊಂಡಿದೆ.

ಇದನ್ನೂ ಓದಿ-https://suddilive.in/archives/7410

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373