ಕ್ರೈಂ ನ್ಯೂಸ್

ನೇಣು ಬಿಗಿದ ಸ್ಥಿಯಲ್ಲಿ‌ ಯುವಕ ಪತ್ತೆ-ಅನುಮಾನ ವ್ಯಕ್ತಡಿಸಿದ ಮೃತನ ಕುಟುಂಬ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಲವಗೊಪ್ಪದ ಮನೆಯೊಂದರಲ್ಲಿ ಯುವಕನೋರ್ವ ಫ್ಯಾನ್ ಗೆ ಸೀರೆಯನ್ನ ಕಟ್ಟಿಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಸಾವಿನ ಬಗ್ಗೆ ಆತನ ಕುಟುಂಬ ಅನುಮಾನ ವ್ಯಕ್ತ ಪಡಿಸಿ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಎರಡು ವರೆವರ್ಷದ ಹಿಂದೆ ಗಾಡಿಕೊಪ್ಪದ ಮಂಜುಳವೆಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಜಿತನ್ ಕುಮಾರ್ (28) ಮಲವಗೊಪ್ಪದಲ್ಲಿ ನೆಲಸಿದ್ದರು. ನಿನ್ನೆ ಮನೆಯಲ್ಲಿ ಫ್ಯಾನ್ ನ ಹುಕ್ ಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಮತ್ತು ಆಕೆಯ ಕುಟುಂಬದ ಕಡೆಯವರು ಮಗ ಜಿತನ್ ಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಮನಸಿ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎಂಬುದು ಮೃತನ ಕುಟುಂಬಸ್ಥರ ಆರೋಪವಾಗಿದೆ. ಜಿತನ್ ಕುಮಾರ್ ಪತ್ನಿ, ಪತ್ನಿಯ ತಾಯಿ ಮತ್ತು ಅವರ ಅಳಿಯನ ಕಿರುಕುಳದಿಂದ ಯುವಕ ಮೃತಪಟ್ಟಿದ್ದಾರೆ ಎಂಬುದು ಆರೋಪವಾಗಿದೆ.

ಮೃತನಿಗೆ ಮದುವೆಯಾಗಿ 2 ವರ್ಷ 3 ತಿಂಗಳು ಕಳೆದರೂ ಮಕ್ಕಳಿರಲಿಲ್ಲ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/9041

Related Articles

Leave a Reply

Your email address will not be published. Required fields are marked *

Back to top button