ಕ್ರೈಂ ನ್ಯೂಸ್

ಇಬ್ಬರಲ್ಲಿ ಕೆಎಫ್ ಡಿ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೂರು ಜಿಲ್ಲೆಯಿಂದ 7 ಜನರಿಗೆ ಕೆಎಫ್ ಡಿ ಕಾಯಿಲೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇಬ್ಬರಿಗೆ ಪಾಸಿಟಿವ್ ಕಾಣಿಸಿಕೊಡಿದೆ ಎಂದು ಬುಲಿಟಿನ್ ತಿಳಿಸಿದೆ.

ಆದರೆ 11 ಜಿಲ್ಲೆಯಲ್ಲಿ ಈ ಕೆಎಫ್ ಡಿಯ ಪರಿಣಾಮಗಳು ಬೀರಲಿದ್ದು,  11ರಲ್ಲಿ ಇವತ್ತು ಶಿರಸಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್ ಡಿ  ಪಾಸಿಟಿವ್ ಕಾಣಿಸಿಕೊಂಡಿದೆ.  ಮತ್ತು ಶಿರಸಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದೆ ಎಂದು ಬುಲಿಟಿನ್ ತಿಳಿಸಿದೆ.

ಇಂದು 188 ಜನರಲ್ಲಿ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 156 ಜನ ಶಿವಮೊಗ್ಗದ ಜಿಲ್ಲೆಯವರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇಬ್ವರಿಗೆ  ಸೋಂಕು ಪತ್ತೆಯಾಗಿದೆ. ಶಿರಸಿ ಜಿಲ್ಲೆಯಲ್ಲಿ 06 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ.  6 ಜನರಲ್ಲಿ  ಓರ್ವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರಿನ 26 ಜನರಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಾಲ್ವರಿಗೆ ಸೋಂಕು ತಗುಲಿದೆ ಎಂದು ಬುಲಿಟಿನ್ ತಿಳಿಸಿದೆ.

ಜನವರಿ 1, 2024 ರಿಂದ ಇವತ್ತಿನ ವರೆಗೆ 3473 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 97 ಜನರಲ್ಲಿ ಸೋಂಕು ಪತ್ತೆಯಾಗಿದೆ. 63 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 32 ಜನರಲ್ಲಿ ಸೋಂಕು  ಆಕ್ಟಿವ್ ಆಗಿದೆ.

ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಇಬ್ಬರಲ್ಲಿ ಒಬ್ಬರು ತೀರ್ಥಹಳ್ಳಿಯವರು ಮತ್ತೋರ್ವರು ಹೊಸನಗರದಿಂದ ತೀರ್ಥಹಳ್ಳಿ ತಾಲೂಕಿಗೆ ಅಡಿಕೆ ಸುಲಿಯಲು ಬಂದವರಿಗೆ ಕೆಎಫ್ ಡಿ ಕಾಣಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/9006

Related Articles

Leave a Reply

Your email address will not be published. Required fields are marked *

Back to top button