ಕ್ರೈಂ ನ್ಯೂಸ್

ಶಿವಮೊಗ್ಗದಲ್ಲಿ ನಕಲಿ ಚಿನ್ನಾಭರಣದ ಹಾವಳಿ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಭೂಮಿ ಕೆಲಸ ಮಾಡುವಾಗ ರಾಶಿ ರಾಶಿ ಚಿನ್ನಾಭರಣ ದೊರೆತಿದೆ ಎಂದು ನಂಬಿಸಿ ಲಕ್ಷಾಂತರ ರೂ ವಂಚಿಸಿರುವ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೇಸಿಲ್ ಮೋನ್ ಎಂಬುವರಿಗೆ ಎನ್ ಆರ್ ಪುರದ ಶೆಟ್ಟಿಕೊಪ್ಪ ಗ್ರಾಮಕ್ಕೆ ರಸ್ತೆ ಕೆಲಸಕ್ಕೆ ಬಂದಿದ್ದಾಗಿ ಹೇಳಿಕೊಂಡು ತಾನು ಒರಿಸ್ಸಾ ರಾಜ್ಯದ ವಾಸಿ ಕರಣ್ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದನು.‌ ತನಗೆ ಭೂಮಿ ಕೆಲಸ ಮಾಡುವಾಗ ಸುಮಾರು ಬಂಗಾರದ ಸರಗಳು ಸಿಕ್ಕಿದ್ದು,

ಈ ಊರಿನಲ್ಲಿ ನನಗೆ ಯಾರೂ ಪರಿಚಯವಿಲ್ಲ, ನಿಮ್ಮ ಪರಿಚಯವಿರುವುದರಿಂದ ಈ ವಿಚಾರವನ್ನು ನಿಮಗೆ ತಿಳಿಸುತ್ತಿದ್ದೇನೆ ಇದು ಅಸಲಿ ಬಂಗಾರವೇ ಅಂತ ತಿಳಿದುಕೊಳ್ಳಿ ಎಂದು ಹೇಳಿ ತನ್ನ ಬಳಿ ಇದ್ದ ಸರದಲ್ಲಿ ಸ್ವಲ್ಪ ತುಂಡನ್ನು ಕೊಟ್ಟಿದ್ದನು.

ಅದನ್ನು ಬೇಸಿಲ್ ಮೋವಿ ತಮಗೆ ಪರಿಚಯವಿದ್ದ ಆಚಾರಿಯ ಬಳಿ ತೋರಿಸಿದ್ದು ಅದು ಆಸಲಿ ಬಂಗಾರ ಎಂದು ತಿಳಿದು ಈ ವಿಚಾರವನ್ನು ಕರಣ್ ಗೆ ತಿಳಿಸಿರುತ್ತಾರೆ. ಈಗ್ಗೆ 10 ದಿವಸಗಳ ಹಿಂದೆ ಕರಣ್ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಬಂದು ನಮಗೆ ಸಿಕ್ಕಿರುವ ಅಷ್ಟು ಬಂಗಾರದ ಸರವನ್ನು ನಿಮಗೆ ಮಾರಾಟ ಮಾಡುತ್ತೇವೆ.‌ ನಮಗೆ 30 ಲಕ್ಷ ಹಣ ಕೊಡುತ್ತಿರಾ ಅಂತ ಕೇಳಿದ್ದನು.‌

ನಿಮ್ಮ ಬಳಿ ಇರುವ ಅಷ್ಟೂ ಸರವನ್ನು ನೋಡಿ 15 ಲಕ್ಷ ಹಣವನ್ನು ಕೊಡುತ್ತೇನೆ ಅಂತ ಹೇಳಿದ್ದರು. ಅದಕ್ಕೆ ಕರಣ್ ಎಂಬುವವನು ನಾನು ನಿಮಗೆ ಪೋನ್ ಮಾಡುತ್ತೆನೆಂದು ಹೇಳಿ ಮಾರನೇ ದಿವಸ ಸಂಜೆ 7.30 ಗಂಟೆಗೆ ಕರಣ್ ಈತನು ತನ್ನ ಮೊಬೈಲ್ ನಂಬರ್ 8861764918 ನಂಬರಿನಿಂದ ಕರೆ ಮಾಡಿದ್ದರು.

ನನ್ನ ಬಳಿ ಬಂಗಾರದ ಸರಗಳನ್ನು ಇಟ್ಟುಕೊಂಡಿದ್ದು ನಾನು ಒಂದು ಊರಿನಲ್ಲಿದ್ದೇನೆ ಅಲ್ಲಿಗೆ ಬನ್ನಿ ಅಂತ ಅಂದಾಗ ಬೇಸಿಲ್ ಮೋವಿ ಯಾವ ಊರು ಅಂತ ಕೇಳಿದಾಗ ಅಕ್ಕ ಪಕ್ಕದವರಿಗೆ ಕೇಳಿ ಇದು ಶಿವಮೊಗ್ಗ, ಅಂತ ತಿಳಿದು ಬಂದಿದೆ.

ನಂತರ ಫೆ.04 ರಂದು ಬೆಳಗ್ಗೆ,, 6.50 ಗಂಟೆಗೆ ಬೇಸಿಲ್ ಮೋವಿ ಶಿವಮೊಗ್ಗಕ್ಕೆ ಬಂದಿದ್ದು, ಕರಣ್ ಗೆ ಪೋನ್ ಮಾಡಿದಾಗ ಕರಣ್ ಇರುವ ಶಿವಪ್ಪ ನಾಯಕ ಸರ್ಕಲ್ ನ ಬಳಿ ಇರುವ ಒಂದು ಚರ್ಚ್ ಹತ್ತಿರ ಇರುವುದಾಗಿ ತಿಳಿಸಿದ್ದಾನೆ.

ಬೆಳಗ್ಗೆ ಸುಮಾರು 6.50 ಬಂದು ಕರಣ್ ಮತ್ತು ಆತನ ಸ್ನೇಹಿತರಿಬ್ಬರು ಬೇಸಿಲ್ ಮೋವಿಯವರ ಕಾರಿನಲ್ಲಿ ಕೂಳಿತುಕೊಂಡು ಸರದ ಗೊಂಚಲನ್ನು ಇಟ್ಟಿದ್ದಾರೆ. ಒಂದು ಚೀಲವನ್ನು ತೋರಿಸಿ ಆ ಚೀಲದಿಂದ ಬಂಗಾರದಂತಿರುವ ಸರದ ಗೊಂಚಲನ್ನು ತೋರಿಸಿದ್ದು ಆ ಗೊಂಚಲಿನಲ್ಲಿ 3 ಅಡಿ ಉದ್ದನೆಯ 16 ಎಳೆಯ ಸರವಿದನ್ನ ತೋರಿಸಿದ್ದಾರೆ.

ಈ ಹಿಂದೆ ಪರಿಶೀಲನೆ ಮಾಡಿದ ಕಟ್ ಮಾಡಿದ ಸರವಿರುವುದನ್ನು ನೋಡಿ ಅವರ ಮಾತುಗಳನ್ನು ನಂಬಿ ಆ ಸರವಿರುವ ಚೀಲವನ್ನು ತೆಗೆದುಕೊಂಡು ಬೇಸಿಲ್ ಮೊವಿ ಬಳಿ ಇದ್ದ 15 ಲಕ್ಷ ರೂ ಹಣವನ್ನು ಕರಣ್ ಗೆ ಕೊಟ್ಟಿದ್ದಾರೆ.

ಸ್ವಲ್ಪ ಸಮಯದ ನಂತರ ತುಂಡಾಗಿದ್ದ ಸರವನ್ನು ತೆಗೆದುಕೊಂಡು ಹೋಗಿ ಬಾಲ್ ರಾಜ್ ಅರಸ್ ರಸ್ತೆಯಲ್ಲಿರುವ ಜ್ಯೂವೆಲರಿ ಶಾಪಿಗೆ ಹೋಗಿ ತಪಾಸಣೆ ಮಾಡಿದ್ದಾರೆ. ಅದು ನಕಲಿ ಬಂಗಾರವೆಂದು ತಿಳಿದುಬಂದರುತ್ತದೆ.

ಏನೂ ಮಾಡಬೇಕೆಂದು ತೋಚದೇ ಸ್ವಲ್ಪ ದಿವಸ ಸುಮ್ಮನಿದ್ದು ನಂತರ ಈ ವಿಚಾರವನ್ನು ತನ್ನ ಸ್ನೇಹಿತನಾದ ಉತ್ತಮ್ ಕುಮಾರ್ ಸೇನ್ ಗೆ ತಿಳಿಸಿ ನಂತರ 15 ಲಕ್ಷ‌ವಂಚನೆಯಾಗಿರುವ ಬಗ್ಗೆ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8936

Related Articles

Leave a Reply

Your email address will not be published. Required fields are marked *

Back to top button