ಸ್ಥಳೀಯ ಸುದ್ದಿಗಳು

ಮೀಸಲಾತಿ ಹೋರಾಟ ಅನಿವಾರ್ಯ-ಯತ್ನಾಳ್

ಸುದ್ದಿಲೈವ್/ಶಿವಮೊಗ್ಗ

ಬೊಮ್ಮಾಯಿ ಸರ್ಕಾರವಿದ್ದಾಗ ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಿಸಲು ಹೇಳಿದ್ದೆ. ಎಲ್ಲರ ಪ್ರಯತ್ನದಿಂದ ವೀರಶೈ,ಮರಾಠ, ಕ್ರಿಶ್ಚಿಯನ್ ಸೇರಿದಂತೆ ಹಲವು ಸಮುದಾಯಗಳನ್ನ 2 ಡಿ ಮೀಸಲಾತಿ ಘೋಷಿಸಲಾಗಿತ್ತು. ಆದರೆ ಪಂಚಮಸಾಲಿ ವೀರಶೈವ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಸಿದ್ದರಾಮಯ್ಯ ಆಶ್ವಾಸನ ನೀಡಿ ಈಗ ಯಾವುದೇ ಮಾತನಾಡುತ್ತಿಲ್ಲ ಎಂದು ಶಾಸಕ ಬಸವರಾಜ್ ಪಾಟೀಲ್ ಆರೋಪಿಸಿರು.

ಮಾಧ್ಯಮಗಳ ಜೊತೆ ಮಾತನಾಡಿ, ಆಂದ್ರದ ಹೈಕೋರ್ಟ್ ಧರ್ಮ ಆಧಾರಿತ ಮೀಸಲು ಕೊಡಲ್ಲ ಎಂದು ತಿರಸ್ಕರಿಸಿತ್ತು. 2 ಡಿಯಲ್ಲಿ 2 ಸಿ ಮೀಸಲಾತಿಯನ್ಬ ಒಕ್ಕಲಿಗರು ಪಡೆದಿದ್ದರು.‌ ಅವರ ಮೀಸಲಾತಿ ಪ್ರಮಾಣ ಹೆಚ್ಚಾಯಿತು. 7% ಎಸ್ ಟಿ ಮೀಸಲಾತಿ ಹೆಚ್ಚಿಸಲಾಯಿತು. ಪ್ರಧಾನಿ ನಿರ್ದೇಶಕದಂತೆ ಕೊಡಲಾಗಿತ್ತು.ಆದರೆ ಕಾಂಗ್ರೆಸ್ ನ ಮುಖಂಡನೋರ್ವ ಸ್ಟೇ ಅರ್ಜಿ ಹಾಕಿದ್ದಕ್ಜೆ ಸ್ಟೇ ಸಿಕ್ಕುದೆ ಎಂದರು.

ಬೆಳಗಾವಿ ಅಧಿವೇಶನದ ವೇಳೆ ತಕ್ಷಣ ಕಾನೂನು ತಜ್ಞೆ ಸಲಹೆ ಪಡೆದು ಅಂತಿಮ ತೀರ್ಮಾನಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಯಾವುದೇ ಮೀಸಲಾತಿಯ ಕಾನೂನು ಸಲಹೆ ಪಡೆಯುವ ಪ್ರಕ್ರಿಯೆ ಸಿದ್ದರಾಮಯ್ಯನವರು ಮಾಡಲಿಲ್ಲದ ಕಾರಣ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.

ಗೌಳಿ, ಮಲೆಗೌಡ ಲಿಂಗಾಯಿತರಿಗೆ 2 ಎ ಕೊಡಿ ಎಂದು ಪ್ರಧಾನಿ ಮೋದಿಗಳಿಂದಾಗಿ ಕ್ರಿಶ್ಚಿಯನ್ ಜೈನರು, ಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ. ಅಮಿತ್ ಶಾ‌ ಅವರು‌ ನನ್ನನ್ನ ದೆಹಲಿಗೆ ಕರೆದು ಎಲ್ಲಾ ಆರ್ಥಿಕವಾಗಿ ಬಡವರಾಗಿದ್ದಾರೆ ಅವರಿಗೆ ಮೀಸಲಾತಿ ಘೋಷಿಸಲಾಗುವುದು ಎಂದು ಹೇಳಿ ಮೀಸಲಾತಿ ಘೋಷಿಸಿದರು‌. ಆದರೆ ಅದು ಜಾರಿಯಾಗಲಿಲ್ಲ ಎಂದರು.

ನೇಮಕಾರಿ ಮತ್ತು ಶಿಕ್ಷಣದ ನೇಮಕಾತಿಗಾಗಿ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಕೊಡಲಾಗುವುದಾಗಿ ಹೇಳಿ 2 ಎ ಕೊಡಲಾಗದು ಎಂದು ಭರವಸೆ ನೀಡಲಾಗಿತ್ತು. ಮುಸ್ಲೀಂರಿಗೆ ಕೊಟ್ಟ ಮೀಸಲಾತಿ ಅಸಂವಿಧಾನ ಆಗಿದೆ ಎಂಬ ಆಂದ್ರ ಹೈಕೋರ್ಟ್ ಆದೇಶ ನೀಡಿರುವುದರಿಂದ ಆ ಮೀಸಲಾತಿಯನ್ನ ನಮಗೆ‌ಕೊಡಿ ಎಂದು ಕೇಳುತ್ತಿದ್ದೇವೆ.

ಮುಸ್ಲೀಂರಿಗೆ ಮೀಸಲಾತಿ ಬೇಡ ಎಂಬ ತೀರ್ಮಾನ ಕುರಿತಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದನ್ನ ನಾವು ಕೇಳಿದ್ದೇವೆ ಅಷ್ಟೆ. ಆದರೆ ಸರ್ಕಾರದ ಭರವಸೆ ಸಿಗಲಿಲ್ಲ. ಹಾಗಾಗಿ ಪ್ರತಿಭಟನೆ‌ಅನಿವಾರ್ಯವಾಗಿದೆ ಎಂದರು.

ಕಾಂಗ್ರೆಸ್ ನ ಮುಖಂಡ ಅಫಿಡವಿಟ್ ಹಾಕಿದ್ದಾರೆ. ಹಿಂಪಡೆಯಿಸಿದರೆ ನಮಗೆ ಮೀಸಲಾತಿ ದೊರೆಯಲಿದೆ. 2 ಎ ಯಲ್ಲಿ 104 ಸಮುದಾಯವಿದೆ.‌ಎಸ್ಟ ಟಿಗೆ ಕುರುಬ ಸಮಾಜ ಹೋದರೆ ನಮಗೆ ಅನುಕೂಲವಾಗಲಿದೆ ಎಂದರು.

ಕಾಂತರಾಜ ವರದಿ ಅವೈಜ್ಞಾನಿಕವಾಗಿದೆ. ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಯಬೇಕಿತ್ತು. ಆಗಲಿಲ್ಲ ಹೊಸದಾಗಿ ಆಯೋಗ ರಚಿಸಿ ಮನೆ ಮನೆಗೆ ಹೋಗಿ ಸರ್ವೆ ಮಾಡಲು ಯತ್ನಾಳ್ ಆಗ್ರಹಿಸಿದರು.

ಲಿಂಗಾಯಿತ ಸಮುದಾಯದಲ್ಲಿ ಎಲ್ಲರೂ ಟಾಟಾ ಬಿರ್ಲಾ ಇದಾರೆಯೇ? ಐಬಿಗೆ ಬಂದು ಸಮುದಾಯದ ಅಂಕಿ ಅಂಶ ಬರೆಯೋದಲ್ಲ. ಮನೆ ಮನೆಗೆ ಹೋಗಿ ಅಂಕಿ ಅಂಶ ಪಡೆಯಬೇಕು ಎಂದರು.

ಇದನ್ನೂ ಓದಿ-https://suddilive.in/archives/8962

Related Articles

Leave a Reply

Your email address will not be published. Required fields are marked *

Back to top button