ಸ್ಥಳೀಯ ಸುದ್ದಿಗಳು

ರಾಜ್ಯೋತ್ಸವದ ಅಲಂಕಾರಗೊಂಡ ಕೃಷ್ಣ ಬಸ್-ವಿಡಿಯೋ ವೈರಲ್

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದೆ. ಜಿಲ್ಲಾಡಳಿತದಿಂದ ನಡೆದ ಕಾರ್ಯಕ್ರಮಕ್ರಮದಲ್ಲಿ ನಿರುತ್ಸಾಹದ ರಾಜ್ಯೋತ್ಸವ ನಡೆದಿದೆ. ರಾಜ್ಯೋತ್ಸವದ ವೇಳೆ ಕೆಎಸ್ ಆರ್ ಟಿಸಿ ಬಸ್ ನ ಶಕ್ತಿಯೋಜನೆಯ ಸ್ತಬ್ಧ ಚಿತ್ರಕ್ಕೆ ಎರಡನೇ ಸ್ಥಾನ ಪಡೆದಿದೆ.

ಆದರೆ ಯಾವುದೇ ರಾಜ್ಯೋತ್ಸವದಲ್ಲಿ ಭಾಗಿಯಾಗದ ಕನ್ನಡ ಏಕೀಕರಣದ 50 ರ ಸಂಭ್ರಮಾಚರಣೆಯ ವೇಳೆ ಖಾಸಗಿ ಬಸ್ ಒಂದನ್ನ ಅಲಂಕಾರಗೊಳಿಸಲಾಗಿದೆ. ಈ ಬಸ್ ಅಲಂಕಾರಕ್ಕೆ ಕನ್ನಡ ಹಾಡು ಸೇರಿಸಿ 20 ನಿಮಿಷದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

ನಿರುತ್ಸಾಹದ ರಾಜ್ಯೋತ್ಸವ ಆಚರಣೆಯ ಬೆನ್ನಲ್ಲೇ ಈ ಖಾಸಗಿ ಬಸ್ ನ ರಾಜ್ಯೋತ್ಸವದ ಅಲಂಕಾರ ನೆಟ್ಟಿಗರ ಗಮನ ಸೇಳೆದಿದೆ. ಈ ಬಸ್ ಶಿವಮೊಗ್ಗ-ಸೊರಬ-ಆನವಟ್ಟಿಗೆ ತೆರಳುವ ಕೃಷ್ಣ ಬಸ್ ಆಗಿದ್ದು ಖಾಸಗಿ ಬಸ್ ನಲ್ಲಿಯೇ ಏಕೈಕ ಬಸ್ ನ್ನ ರಾಜ್ಯೋತ್ಸವದ ಸಂಭ್ರಮಾಚರಣೆಯ ವೇಳೆ ಅಲಂಕಾರ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಲಂಕಾರದ ವಿಡಿಯೋ ವೈರಲ್ ಮಾಡಲಾಗಿದೆ. ಈ ಬಸ್ ನ ಮುಂಭಾಗದ ಅಲಂಕಾರವೂ ಸಹ ಚರ್ಚೆಗೆ ಒಳಪಟ್ಟಿದೆ.

ಮುಂಭಾಗದ ಅಲಂಕಾರ ಯಕ್ಷಗಾನದ ಅಲಂಕಾರಕ್ಕೆ ಹೋಲಿಸಲಾಗಿದೆ. ಹೀಗೆ ಖಾಸಗಿ ಬಸ್ ನ ರಾಜ್ಯೋತ್ಸವ ಅಲಂಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಸ್ ಅಲಂಕಾರವನ್ನ ಹಾಡಿ ಹೊಗಳಲಾಗುತ್ತಿದೆ. ಈಗಲೂ ಈ ಅಲಂಕಾರದಲ್ಲಿಯೇ ಬಸ್ ಸಂಚರಿಸುತ್ತಿದೆ ಎಂಬುದು ಪ್ರಯಾಣಿಕರ ಹೇಳಿಕೆ.

ಇದನ್ನೂ ಓದಿ-https://suddilive.in/archives/2293

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373