ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಪಾಕಿಸ್ತಾನದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೋ ಎಂದು ಮಾಜಿ ಸಚಿವ ಈಶ್ವರಪ್ಪ  ಅನುಮಾನ ವ್ಯಕ್ತಪಡಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ನಾಯಕರು ಸಂವಿಧಾನಿಕ ಪೀಠದಲ್ಲಿರುವ ಸ್ಪೀಕರ್ ಸ್ಥಾನದಲ್ಲಿರುವ ಮುಸ್ಲೀಂ‌ ನಾಯಕನಿಗೆ ನಮಸ್ಕಾರ ಸಲ್ಲಿಸಿ ಮಾತನಾಡುವ ಸ್ಥಿತಿ ಬಂದಿದೆ ಎಂದು ಸಚಿವ ಜಮೀರ್ ಲ ಹೇಳಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕತ್ತೆಯ ಕಥೆಗಳನ್ನ ಹೇಳಿದ ಈಶ್ವರಪ್ಪ ಸ್ಪೀಕರ್ ಸ್ಥಾನ ದೇವರ ಸ್ಥಾನ ಅಲ್ಲಿ ಕೂತವರನ್ನ ಕತ್ತೆ ಎಂದು ಹೇಳಲ್ಲ ನಮಗೆ ಅವರು  ದೇವರು. ಸಂವಿಧಾನಕ್ಕೆ ಅಪಮಾನವಾಗುವ ರೀತಿ ಸಚಿವ  ಜಮೀರ್ ಮಾತನಾಡಿದ್ದು ಅ ವರನ್ನ ಆ ಸ್ಥಾನದಿಂದ  ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.

ಭಾರತ ಸಂವಿಧಾನದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ. ಖಾದರ್ ಎಂಬ ವ್ಯಕ್ತಿಗೆ ಗೌರವವಲ್ಲ. ಅವರ ಸ್ಥಾನಕ್ಕೆ ಗೌರವವಿದೆ. ಜಮೀರ್ ಸೊಕ್ಕಿನ ಮಾತನಿಂದ ಆಡಿರುವುದರಿಂದ ಅವರ ರಾಜೀನಾಮೆ ಪಡೆಯಬೇಕು ಎಂದು ವಾಗ್ದಾಳಿ ನಡೆಸಿದರು.

ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಜಮೀರ್ ಹೇಳಿಕೆಯನ್ನ ಸ್ಪಷ್ಟ ಪಡಿಸಲಿ. ಜಮೀರ್ ರಾಜೀನಾಮೆ ಪಡೆಯಲು ರಾಷ್ಟ್ರೀಯ ನಾಯಕರು ಸೂಚನೆ ನೀಡಿದರೆ ಅವರನ್ನೂ ಗೌರವಿಸುವೆ. ಪಡೆಯದಿದ್ದರೆ ಮುಸ್ಲೀಂ ಮತಬ್ಯಾಂಕ್ ಬಗ್ಗೆ ಹಿಂದೂಗಳು ಜಾಗೃತಿಯಾಗಬೇಕು ಎಂದು ಕರೆ ನೀಡಿದರು.

ಬೆಂಗಳೂರಿನ ಸಯ್ಯದ್ ನಗರದ ಅನಾಥಾಲಯದಲ್ಲಿ ತಾಲಿಬಾನ್ ಶಿಕ್ಷಣ ನೀಡಲಾಗುತ್ತಿದೆ ಎಂದು ಮಕ್ಕಳ ರಕ್ಷಣ ಸಮಿತಿ ಆರೋಪಿಸಿದೆ. ಈ ಬಗ್ಗೆ ಸಿಎಂ ಮತ್ತು ಶಿಕ್ಷಣ ಸಚಿವ ಗಮನ ಹರಿಸಬೇಕೆಂದರು.

ಕಾಂತರಾಜು ವರದಿ ಜಾರಿಗೊಳಿಸಬೇಕೆಂಬ ತೀನಾಶ್ರೀನಿವಾಸ್ ನನ್ನ ಬಗ್ಗೆ ಮತ್ತು ರಾಜ್ಯಾಧ್ಯಕ್ಷರ ಬಗ್ಗೆ ಅವಹೇಳನ ಮಾಡಿದ್ದಾರೆ. ಇದನ್ನ ಗಮನ ಹರಿಸಬೇಕು. ಜಾತಿಜನಗಣತಿಯ ಕಾಂತರಾಜ ವರದಿ ಬಗ್ಗೆ ಕಾಂಗ್ರೆಸ್ ಸರ್ಕಾರ ಸಭೆಯಲ್ಲಿ ಪ್ರಸ್ಥಾಪಿಸಿ ಚರ್ಚೆಗೆ ಒಳಪಡಿಸಬೇಕು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜಾತಿ ಜನಗಣತಿ ಜಾರಿ ಮಾಡಿ ಮುಸ್ಲೀಂ ರನ್ನ ತಲೆಮೇಲೆ ಹೊತ್ತಿಕೊಂಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಜಾರಿ ಮಾಡಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.  ಹಾಗಾಗಿ ಜಾತಿ ಒಣಮೀಸಲಾತಿಯ ಬಗ್ಗೆ  ಚರ್ಚೆ ಅವಶ್ಯಕತೆ ಇದೆ ಎಂದರು.

ಹಲೋ ಅಪ್ಪ… ವಿಷಯದಲ್ಲಿ ವರ್ಗಾವಣೆಯಲ್ಲಿ ಯಾವ ಸರ್ಕಾರದಲ್ಲಿ ಆಗದ ಲೂಟಿ ಈ ಸರ್ಕಾರದಲ್ಲಿ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಾರೆ. ಹಲೋ ಅಪ್ಪ ಎಂಬ ಕ್ಯಾಸೆಟ್ ಬಗ್ಗೆ ತನಿಖೆ ನಡೆಸಬೇಕು. ಕಾಂಗ್ರೆಸ್ ಹಿಂದೂ ಧರ್ಮವನ್ನ ವಿರೋಧಿಸಿ ನಂತರ ಮನೆಗಳಲ್ಲಿ ಹೋಮ ಹವನ ಮಾಡುತ್ತಾರೆ.

ಈಗ ದತ್ತ ಪೀಠ ರಕ್ಷಣೆಯ ಬಗ್ಗೆ ದತ್ತ ಮಾಲ ಧರಿಸುವ ಅಭಿಯಾನ ಆರಂಭವಾಗಿದೆ. ಮಾಜಿ ಕುಮಾರ ಸ್ವಾಮಿ ದತ್ತ ಮಾಲ ಹಾಕಿಕೊಳ್ಳುವುದಾಗಿ ಘೋಷಿಸಿದ್ದಾರೆ. ಸ್ವಾಗತ ಎಂದ ಕೆ.ಎಸ್.ಈಶ್ವರಪ್ಪ ಕೆಲವರಿಗೆ ಕೆಟ್ಟ ಮೇಲೆ ಬುದ್ದಿಬರುತ್ತದೆ. ಹಾಗಂತ ಕುಮಾರ ಸ್ವಾಮಿಗೆ  ಬುದ್ದಿಬಂದಿದೆ ಎಂದು ಹೇಳಲ್ಲ ಎಂದರು.

ಬಿಜೆಪಿ ಬಂದರೆ ಗ್ಯಾರೆಂಟಿ ರದ್ದಾಗಲಿದೆ ಎಂದಬ ಡಿಕೆಶಿ ಹೇಳಿಕೆಗೂ ಟಾಂಗ್ ನೀಡಿದ ಈಶ್ವರಪ್ಪ, ಗ್ಯಾರೆಂಟಿ ಸಾರ್ವಜನಿಕರಿಗೆ ಒಳ್ಳೆಯದಾಗುತ್ತಿದ್ದರೆ ಬಿಜೆಪಿ ಮುಂದುವರೆಸಲಿದೆ. ಪರಾಮರ್ಶಿಸಿ ಬಿಜೆಪಿ ಗ್ಯಾರೆಂಟಿ‌ಮುಂದುವರೆಸುವುದಾಗಿ ಹೇಳಿದ್ದಾರೆ.

ಇದನ್ಯೂ ಓದಿ-https://suddilive.in/archives/3382

Related Articles

Leave a Reply

Your email address will not be published. Required fields are marked *

Back to top button