ರಾಜಕೀಯ ಸುದ್ದಿಗಳು

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಟಿ.ಡಿ.ಮೇಘರಾಜ್ ಮುಂದುವರಿಕೆ

ಸುದ್ದಿಲೈವ್/ಶಿವಮೊಗ್ಗ

ಮತ್ತೆ ಮುಂದಿನ ಅವಧಿಯ ವರೆಗೆ ಸಾಗರದ ಟಿ.ಡಿ.ಮೇಘರಾಜ್ ಬಿಜೆಪಿ ಶಿವಮೊಗ್ಗದ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಅಚ್ಚರಿಯ ರೀತಿಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಂದು ವರೆದಿದ್ದಾರೆ.

ಸಂಕ್ರಾಂತಿ ಹಬ್ಬದ ಒಳಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿ ಬರಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ ಸಂಕ್ರಾಂತಿ ಹಬ್ಬಕ್ಕೆ ನೂತನ ಜಿಲ್ಲಾಧ್ಯಕ್ಷನ ಪ್ರಕಟಿಸಲಾಗಿದೆ. ಟಿ.ಡಿ.ಮೇಘರಾಜ್ ರನ್ನ ಮುಂದಿನ ಅವಧಿಯ ವರೆಗೆ ಆಯ್ಕೆ ಮಾಡಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಪ್ರಕಟಿಸದ್ದಾರೆ.

39 ಜಿಲ್ಲಾಧ್ಯಕ್ಷರ ನೇಮಕದ ಪಟ್ಟಿ ಬಿಡುಗಡೆ ಮಾಡಿರುವ ರಾಜ್ಯ ಅಧ್ಯಕ್ಷ ವಿಜೇಂದ್ರ ಶಿವಮೊಗ್ಗ ಜಿಲ್ಲೆಗೆ ಟ.ಡಿ.ಮೇಘರಾಜ್ ರನ್ನ ಉಳಿಸಿಕೊಂಡಿದ್ದಾರೆ. ಅಚ್ಚರಿಯ ಆಯ್ಕೆ ಆದರೂ ಆಗಬಹುದು ಎಂಬ ಚರ್ಚೆ ಆಗುತ್ತಿದ್ದ ವೇಳೆ ಅಚ್ಚರಿಯಾಗುವಂತೆ ಟಿ.ಡಿ.ಮೇಘರಾಜ್ ಅವರನ್ನ ಮುಂದುವರೆಸಲಾಗಿದೆ.

ಬಿಜೆಪಿಯ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಎಸ್ ದತ್ತಾತ್ರಿಯನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/6852

Related Articles

Leave a Reply

Your email address will not be published. Required fields are marked *

Back to top button