ರಾಜಕೀಯ ಸುದ್ದಿಗಳು

ಈ ಬಾರಿ ಮೋದಿ ಅಲೆ ಇಲ್ಲ-ಆಯನೂರು ಮಂಜುನಾಥ್

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷ ನನ್ನನ್ನು ‌ಗುರುತಿಸಿ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಟಿಕೇಟ್ ನೀಡಿದೆ. ಟಿಕೇಟ್ ಸಿಕ್ಕಿದ್ದಕ್ಕೆ ಖುಷಿ ಆಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಪ್ಠಿ ನಡೆಸಿದ ಅವರು, ಟಿಕೇಟ್ ‌ಸಿಗುವ ನಿರೀಕ್ಷೆ ಇತ್ತು. ನಿರೀಕ್ಷೆಯಂತೆ ಪಕ್ಷ ಟಿಕೇಟ್ ನೀಡಿದೆ. ಟಿಕೇಟ್ ನೀಡಿದ್ದಕ್ಕಾಗಿ ಪಕ್ಷದ ವರಿಷ್ಠರಿಗೆ ಧನ್ಯವಾದ ಹೇಳ್ತೇನೆ. ನೈಋತ್ಯ ಪದವೀಧರ ಕ್ಷೇತ್ರ ದೊಡ್ಡ ಕ್ಷೇತ್ರವಗಿದೆ ಎಂದರು.

ಕ್ಷೇತ್ರದ ವ್ಯಾಪ್ತಿಯ ಶಾಸಕರು, ಉಸ್ತುವಾರಿ ಸಚಿವರ ಬೆಂಬಲ ಕೋರಿದ್ದೆ. ಎಲ್ಲರೂ ಟಿಕೇಟ್ ಗೆ ನನ್ನ ಹೆಸರು ಸೂಚಿಸಿದ್ದಾರೆ. ಅದರಂತೆ ನನಗೆ ಪಕ್ಷ ಟಿಕೇಟ್ ನೀಡಿದೆ. ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿತರು ಇದ್ದರು. ಟಿಕೇಟ್ ಸಿಗದಿದ್ದಕ್ಕೆ ಆಕಾಂಕ್ಷಿತರಿಗೆ ಸಹಜವಾಗಿ ಅಸಮಾಧಾನ ಆಗಿರುತ್ತದೆ ಎಂದರು.

ಎಲ್ಲಾ ಅಸಮಾಧಾನಿತರ ಭೇಟಿ ಆಗ್ತೇನೆ. ನನ್ನನ್ನು ಬೆಂಬಲಿಸುವಂತೆ ಮನವಿ ಮಾಡ್ತೇನೆ. ಎಲ್ಲರೂ ಬೆಂಬಲಿಸುವ ವಿಶ್ವಾಸ ಇದೆ. ಕಳೆದ ಹಲವು ವರ್ಷದಿಂದ ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಹಿಡಿತದಲ್ಲಿತ್ತು. ಈ ಬಾರಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇದೆ ಎಂದರು.

ಈಶ್ವರಪ್ಪ ಸ್ಪರ್ಧೆ ವಿಚಾರ

ನನಗೆ ಈಗಲೂ‌ ಈಶ್ವರಪ್ಪ ಪಕ್ಷೇತರ ಸ್ಪರ್ಧೆ ಮಾಡುವ ವಿಶ್ವಾಸ ಇಲ್ಲ. ಈಶ್ವರಪ್ಪ ಯಾವಾಗಲೂ ಕೊನೆಯವರೆಗೆ ಹೋರಾಟ ಮಾಡಲ್ಲ. ಈಶ್ವರಪ್ಪ ಅವರಿಗೆ ಕೊನೆಯವರೆಗೆ ಹೋರಾಟ ಮಾಡುವ ಗಂಡೆದೆ ಇಲ್ಲ. ಈಶ್ವರಪ್ಪ ಒಂದು ವೇಳೆ ಸ್ಪರ್ಧಿಸಿದ್ದೆ ಆದರೆ ನನ್ನ ಮತ ಅವರಿಗೆ ಹಾಕ್ತೇನೆ ಎಂದರು.

ಈಶ್ವರಪ್ಪ ಹಾಗು ರಾಘವೇಂದ್ರ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಇಬ್ಬರ‌ ನಡುವೆ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಈಶ್ವರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಿದ್ದಾರೆ. ಆದರೆ ಅವರೇ ಮಗನಿಗೆ ಟಿಕೇಟ್ ಸಿಗಲಿಲ್ಲ ಅಂತಾ ಸ್ಪರ್ಧೆ ಮಾಡ್ತಿದ್ದಾರೆ  ಎಂದರು.

ಮಗನಿಗೆ ಟಿಕೇಟ್ ಸಿಗಲಿಲ್ಲ ಅಂತಾ ಸ್ಪರ್ಧೆ ಮಾಡೋದು ಎಷ್ಟು ಸರಿ? ಕುಟುಂಬದ ವಿಚಾರ ಬಿಟ್ಟು ಧ್ವನಿ ಎತ್ತಿದ್ದರೆ ಅವರಿಗೆ ಗೌರವ ಇರುತಿತ್ತು. ಬಿಜೆಪಿ ಒಡೆದ ಮನೆಯಲ್ಲ ಚೂರು ಚೂರಾದ ಮನೆಯಾಗಿದೆ. ನಾನು ಪಕ್ಷ ಬಿಟ್ಟಾಗ ಯಾರು ಮಾತನಾಡಲಿಲ್ಲ.ಈಗ ಅವರ ಬುಡಕ್ಕೆ ಬಂದಾಗ ಎಲ್ಲಾ ಮಾತನಾಡ್ತಿದ್ದಾರೆ ಎಂದರು.

ಪಕ್ಷ ಶುದ್ದೀಕರಣ ಮಾಡಬೇಕು ಅಂತಿದ್ದಾರೆ. ನನಗು ಕೂಡಾ ಸಾಕಷ್ಟು ನೋವಿತ್ತು. ನಾನು ಸಹ ನೋವಿನಿಂದಲೇ‌ ಪಕ್ಷದಿಂದ ಹೊರ ಬಂದೆ ಎಂದು ಹೇಳಿದರು.

ಮೋದಿ ಅಲೆ ವಿಚಾರ

ಈ‌ ಬಾರಿ ಮೋದಿ ಅವರ ಯಾವುದೇ ಅಲೆ ಕಾಣ್ತಿಲ್ಲ. ಶಿವಮೊಗ್ಗದಲ್ಲಿ ಐದು ಜಿಲ್ಲೆ ಕಾರ್ಯಕರ್ತರ ಸೇರಿ ಸಮಾವೇಶ ನಡೆಸಲಾಯ್ತು. ಜನರ ಪ್ರವಾಹವೇ ಹರಿದು ಬರುತ್ತದೆ ಅಂತಿದ್ರು ಅದೆಲ್ಲಾ ಹುಸಿಯಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಯಾವುದೇ ಮೋದಿ ಅಲೆ ಇಲ್ಲ ಎಂದರು.

ಇದನ್ನೂ ಓದಿ-https://suddilive.in/archives/11313

Related Articles

Leave a Reply

Your email address will not be published. Required fields are marked *

Back to top button