ನಗರ‌ ಸುದ್ದಿಗಳು

ಈಶ್ವರಪ್ಪವರನ್ನ ಗೆಲ್ಲಿಸಿಯೇ ದುರ್ಗಕ್ಕೆ ವಾಪಾಸಾಗೋದು-ಗೂಳಿಹಟ್ಟಿ ಶೇಖರ್

ಸುದ್ದಿಲೈವ್/ಶಿವಮೊಗ್ಗ

ರೆಬಲ್ ರಾಜಕಾರಣಿ ಆಗಿರುವ ಈಶ್ವರಪ್ಪನವರನ್ನ ಭೇಟಿಯಾಗಲು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಭೇಟಿ ಆಗಿದ್ದಾರೆ.  ಬೆಂಬಲ ಈಶ್ವರಪ್ಪನವರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಗೂಳಿಹಟ್ಟಿಶೇಖರ್ ಮಾತನಾಡಿ, ಸಂಧಾನಕ್ಕೆ ಬಂದಿಲ್ಲ.‌ ಅವರ ಚುನಾವಣೆ ಮುಗಿಯುವವರೆಗೆ ಕ್ಷೇತ್ರದಲ್ಲಿ ಪ್ರಚಾರ ಮಾಡುವೆ. ಅವರ ಪರವಾಗಿ ಪ್ರಚಾರ ಮಾಡುವೆ.  ಹಿಂದೂ ಹುಲಿ ಈಶ್ವರಪ್ಪನವರನ್ನ‌ ಬೆಂಬಲಿಸಲು ಬಂದಿದ್ದೇನೆ. ಪಕ್ಷ ಶುದ್ಧೀಕರಣದ ಬಗ್ಗೆ ಈಶ್ವರಪ್ಪನವರು ಧ್ವನಿ ಎತ್ತಿದ್ದಾರೆ. ಸತ್ಯನೂ ಹೌದು ಪಕ್ಷದಲ್ಲಿ ಸರಿಯಾಗಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷವನ್ನ ಈಶ್ವರಪ್ಪನವರೂ ಕಟ್ಟಿಬೆಳಿಸಿದ್ದಾರೆ. ಕುಟುಂಬಕ್ಕೆ ಸೀಮಿತವಾಗಿದೆ. ಈಶ್ವರಪ್ಪನವರನ್ನ ಢರಂಭದಲ್ಲಿ ವಿಧಾನ ಸಭೆ ಟಿಕೇಟ್ ತಪ್ಪಿಸಲಾಯಿತು. ಈಗ‌ಲೋಕಸಭಾ ಕ್ಷೇತ್ರದಲ್ಲಿ ತಪ್ಪಿಸಲಾಗಿದೆ. ಸಿಟಿ ರವಿ, ಪ್ರತಾಪ್ ಸಿಂಹ ಸದಾನಂದ ಗೌಡರನ್ನ ತುಳಿಯಲಾಯಿತು. ಬಿಎಸ್ ವೈ ಹಿಙದುತ್ವದ ಪರವಾಗಿಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಿಎಸ್ ವೈನೇ ಕೇಳಬೇಕು. ಹಾಗಾದರೆ ಹಿಂದೂ ಹುಲಿಗಳನ್ನ ತುಳಿದಿರುವುದೇಕೆ ಎಂದರು.

ಬೋವಿ ನಿಗಮ‌ ಕ್ಲೋಸ್ ಮಾಡೋದು ಸರಿಯಾಗುತ್ತದೆ ಎಙದು ಗೂಳಿಟ್ಟ ಶೇಖರ್, ನಿಗಮಗಳಿಂದ ರಾಜಕೀಯ ಪಕ್ಷದವರಿಗೆ ಅನುಕೂಲವಾಗಿತ್ತದೆ. ಆದರೆ ಜನರಿಗೆ ಅನುಕೂಲವಾಗೊಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ನಾಲ್ಕು ವರ್ಷ ಇದ್ದಾಗ ನಿಗಮದ ಅಧ್ಯಕ್ಷ ಮಾಡದೆ ನಮ್ಮವರೇ ಹಣ ತಿನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಕೊನೆ ಹಂತದಲ್ಲಿ ನನ್ನನ್ನ ಅಧ್ಯಕ್ಷರನ್ನಾಗಿ ಮಾಡುದ್ರು, ಹಣ ಗುಳುಂ ಮಾಡಿದ  ಪ್ರಕರಣವನ್ನ ನ್ಯಾಯಾಯದ ಮುಂದೆ‌ಇದೆ. ಈಗ ಕಾಂಗ್ರೆಸ್ ಭೋವಿ ನಿಗಮದ ಅಧ್ಯಕ್ಷರನ್ನ ನೇಮಿಸಿದೆ. ಸಿದ್ದರಾಮಯ್ಯನವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಸಮಾಜ ಖಂಡನೆ

ಮೋದಿ ಕಾರ್ಯಕ್ರಮದಲ್ಲಿ ಕೆಜಿ ಕುಮಾರ್ ಸ್ವಾಮಿ ಹೆಸರೇಳಿದ ಸಙಸದರ ವಿರುದ್ಧ ಭೋವಿ ಸಮಾಜ ತಿಗಿಬಿದ್ದಿದೆ. ಮೋದಿ ಕಾರ್ಯಕ್ರಮದಲ್ಲಿ ಸಂಸದರು ಯಡವಟ್ಟು ಮಾಡಿದ್ದಾರೆ. ಭೋವಿ ಸಮಾಜದ ಮುಖಂಡರಾದ ಕೆಜಿ ಕುಮಾರಸ್ವಾಮಿ ಎಂದು ಉಲ್ಲೇಖಿಸಿದ್ದಾರೆ ಅದನ್ನ ಸಮಾಜ ಖಂಡಿಸಿದೆ.

ಕೆಜಿ ಕುಮಾರ ಸ್ವಾಮಿ ಬೋವಿ ಸಮಾಜಕ್ಕೆ ಸೇರಿಲ್ಲ.‌ ಇದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ದಾಖಲಾತಿ ಇದೆ. ಕರ್ನಾಟಕ ಡಿವಿಜನ್ ಬೆಂಚ್ ನಲ್ಲಿ ಪ್ರಕರಣ ಪೆಂಡಿಂಗ್ ಇದೆ. ಅರ್ಜಿದಾರರು ಬಡವರಾದ ಕಾರಣ ಡಿವಿಜಿನ್ ಬೆಂಚ್ ನಲ್ಲಿ ಫೈಟ್ ಮಾಡಲು ಹಣವಿಲ್ಲದ ಕಾರಣ ಪೆಂಡಿಂಗ್ ಇದೆ. ಎಂದು ಸಮಾಜ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-https://suddilive.in/archives/11073

Related Articles

Leave a Reply

Your email address will not be published. Required fields are marked *

Back to top button