ಕ್ರೈಂ ನ್ಯೂಸ್

ಮಾರಕಾಸ್ತ್ರಗಳನ್ನ ಹಿಡಿದು ಭಯಹುಟ್ಟಿಸುತ್ತಿದ್ದವರಿಬ್ಬರು ಅರೆಸ್ಟ್!

ಸುದ್ದಿಲೈವ್/ಶಿವಮೊಗ್ಗ

ಅಣ್ಣಾ ನಗರ 4 ತಿರುವಿನಲ್ಲಿ ಆಯುಧಗಳನ್ನ ತೋರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಇಬ್ಬರನ್ನ ಬಂಧಿಸಿದ ದೊಡ್ಡಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಗಣೇಶ್ ವಿಸರ್ಜನ ಮೆರವಣಿಗೆ ಸಂಭಂದ ಆಶೋಕ ನಗರ ಕಡೆ ಗಸ್ತು ಮಾಡುತ್ತಿದ್ದ ಪೊಲೀಸರಿಗೆ  ಅ. 09 ರಂದು  ಬೆಳಗ್ಗೆ 09:15 ಎ.ಎಂ ಗಂಟೆ ಸಮಯದಲ್ಲಿ, ಬಾತ್ಮಿದಾರರು ಕರೆ ಮಾಡಿ ಶಿವಮೊಗ್ಗ ಟೌನ್ ಅಣಾನಗರ 4ನೇ ಕ್ರಾಸ್ ನ ಬಳಿ ಮುಖ್ಯ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ರೌಡಿ ತರಹ ವರ್ತನೆ ಮಾಡುತ್ತಾ ಕೈಯಲ್ಲಿ, ಕಬ್ಬಿಣದ ಚಾಕುವನ್ನು ಇಟ್ಟು ಕೊಂಡು ಹೊರಗೆ ತೆಗೆಯುವುದು, ಸಾರ್ವಜನಿಕರಿಗೆ ತೋರಿಸುವುದು ಮಾಡುತ್ತಾ ಜನರಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿರುತ್ತದೆ.

ಅಣ್ಣಾ ನಗರ 4ನೇ ಕ್ರಾಸ್ ನ ಬಳಿ ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಹರೀಶ್ ಮತ್ತು ರುದ್ರೇಶ್  ಅಣಾ ನಗರ 4ನೇ ಕ್ರಾಸ್ ನ ರಸ್ತೆಯಲ್ಲಿ, ಅತ್ತಿಂದಿತ್ತ ಓಡಾಡುತ್ತಾ ಜನರಿಗೆ ಕಾಣುವಂತೆ ಚಾಕುವನ್ನು ತಿರುಗಿಸುತ್ತಾ, ಒಬ್ಬರ ಕೈಯಿಂದ ಒಬ್ಬರು ಹಿಡಿದು ಕೊಂಡು ಜನರಿಗೆ ಭಯ ಹುಟ್ಟುವಂತೆ ವರ್ತಿಸುತ್ತಿದ್ದರು.

ಇವರನ್ನ ದೊಡ್ಡಪೇಟೆ ಪೊಲೀಸರು ಇಬ್ಬರನ್ನೂ ಬಂದಿಸಿ ಈ ರೀತಿ ದುರ್ವರ್ತನೆಗೆ ಕಾರಣವೇನು ಎಂದು ಕೇಳಿದಾಗ ಸಮಂಜಸ ಉತ್ತರ ನೀಡದ ಹಿನ್ನಲೆಯಲ್ಲಿ ಇಬ್ವರನ್ನ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/956

Related Articles

Leave a Reply

Your email address will not be published. Required fields are marked *

Back to top button