ಕ್ರೈಂ ನ್ಯೂಸ್

ಕನ್ನಡ ಪರ ಸಂಘಟನೆಗಳ ಮುಖಂಡನ ವಿರುದ್ಧವೂ ಪ್ರತಿದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಡಿ.5 ರಂದು ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಬಯೋಲಜಿ ಪರೀಕ್ಷೆ ಬರೆಯುತ್ತಿದ್ದ ಮೇಘಶ್ರೀ ಕಾಲೇಜಿನ  5 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಪ್ರತಿದೂರೊಂದು ಕಾಲೇಜಿನ ಕಡೆಯಿಂದ ದಾಖಲಾಗಿದೆ.

ಎಸ್ಪಿ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಎಲ್ಲವೂ ತೀರ್ಮಾನಗೊಂಡ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದೆ ಮೂಡಿತ್ತು. ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ 8 ಜನ ಕಾಲೇಜಿನ ಪ್ರಾಧ್ಯಪಕರು, ವಾರ್ಡನ್  ವಿರುದ್ಧ ಮೃತ ಮೇಘಶ್ರೀ ಪೋಷಕು ದೂರು ದಾಖಲಿಸಿದ್ದರು.

ಇಷ್ಟಕ್ಕೆ ಮುಗಿದಿದೆ ಎಂದು ತಿಳುದುಕೊಂಡ ಬೆನ್ನಲ್ಲೇ ಕಾಲೇಜಿನ ಕಡೆಯಿಂದ ಪ್ರತಿದೂರು ದಾಖಲಾಗಿದೆ. ಕನ್ನಡ ಪರ ಸಂಘಟನೆಯ ವಾಟಾಳ್ ಮಂಜುನಾಥ್ ನಾಲ್ಕನೇ ಆರೋಪಿ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ಗಗನ್ ದೀಪ್, ಅನಿಲ್, ತಿಮ್ಮಪ್ಪ ಯಾನೆ ತಿಮ್ಮಣ್ಣ, ವಾಟಾಳ್ ಮಂಜುನಾಥ್ ವಿರುದ್ಧ ಕಾಲೇಜಿನ ಪೀಠೋಪಕರಣಗಳನ್ನ ಒಡೆದಿರುವ ದೂರನ್ನ ದಾಖಲಿಸಲಾಗಿದೆ.

ಕಾಲೇಜಿನ ಪ್ರಯೋಗಾಲಯದ ಸಹಾಯಕರಾದ ಕೃಷ್ಣ ನಾಯ್ಕ್ ಈ ದೂರನ್ನ ದಾಖಲಿಸಿದ್ದಾರೆ. ಮೇಘಶ್ರೀ ಕಾಲೇಜು ಕಟ್ಟಡದಿಂದ ಕೆಳಗೆ ಬಿದ್ದಿದ್ದು ಆಕೆಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆಯ ವೇಳೆಗೆ ಕಾಲೇಜಿನ ಕಾಂಪೌಂಡ್ ಒಳಗೆ ಬಂದ ಗಗನ್ ದೀಪ್, ಅನಿಲ್ ತಿಮ್ಮಪ್ಪ ಯಾನೆ ತಿಮ್ಮಣ್ಣ, ಮಂಜುನಾಥ್ ಯಾನೆ ವಾಟಾಳ್ ಮಂಜು ಸಂಸ್ಥೆಯ ಪೀಠೋಪಕರಣವನ್ನ ಕೆಡವಿಹಾಳು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನ ತಡೆಯಲು ಬಂದ ಕೃಷ್ಣನಾಯ್ಕ್, ಸಚಿನ್ ಮತ್ತು ಇತರರಿಗೆ ಇವರೆಲ್ಲಾ ಸೇರಿ ಅವ್ಯಾಚ್ಯ‌ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ದೂರಲಾಗಿದೆ.

ಇದನ್ನೂ ಓದಿ-https://suddilive.in/archives/4484

Related Articles

Leave a Reply

Your email address will not be published. Required fields are marked *

Back to top button