ಶೈಕ್ಷಣಿಕ ಸುದ್ದಿಗಳು

ಶಾಸಕರು ಬೀಸಿದ ಚಾಟಿ ಏಟು ಶಾಲೆ ಕೊಠಡಿ ಕಾಮಗಾರಿ ವೇಗ ಪಡೆದುಕೊಳ್ಳಬಲ್ಲದೆ?

ಸುದ್ದಿಲೈವ್/ಶಿವಮೊಗ್ಗ

ನ್ಯೂ ಮಂಡಲಿಯ ಉರ್ದು ಶಾಲೆಯನ್ನ ಇಲಿಯಾಜ್ ನಗರಕ್ಕೆ ಶಿಪ್ಟ್ ಮಾಡುವಂತೆ ಸಾರ್ಜನಿಕರ ಒತ್ತಾಯದ ಬಗ್ಗೆ ಶಾಸಕ ಚನ್ನಬಸಪ್ಪ  ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ನ್ಯೂ ಮಂಡಳಿಯ ಕನ್ನಡ ಶಾಲೆಯ ನೂತನ ಕಟ್ಟಡವನ್ನ 1 ತಿಂಗಳ ಅವಧಿಯಲ್ಲಿ  ಪೂರ್ಣಗೊಳಿಸಲು ಸೂಚನೆ ನೀಡಿದರು.

ಮಂಡಲೇಶ್ವರ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಉರ್ದು ಶಾಲೆ ಇರುವುದರಿಂದ ಇಲಿಯಾಜ್ ನಗರದ  ಸರ್ವೆ ನಂಬರ್ 138 ಕ್ಕೆ ಬದಲಾಯಿಸಿಕೊಡಿ ಎಂದು ಸ್ಥಳೀಯರಾದ ರಿಯಾಜ್ ಅಹ್ಮದ್, ಮುಹೀಬ್ ಮೊದಲಾದವರು ಕೇಳಿಕೊಂಡ ಕಾರಣ ಇಲಿಯಾಜ್ ನಗರದ ಸರ್ವೆ ನಂಬರ್ 138 ಕ್ಕೇ ಶಾಸಕರು ಭೇಟಿ ನೀಡಿ ಅಗತ್ಯ ಸೂಚನೆಗಳನ್ನ ನೀಡಿದರು.

ಸರ್ವೆ ನಂಬರ್ 138 ರಲ್ಲಿ 1 ಎಕರೆ 2 ಗುಂಟೆ ಜಾಗವಿದ್ದು ಈ ಜಾಗದಲ್ಲಿ ಒಂದು ವಾರದ ಒಳಗೆ ಸರ್ವೆ ಮುಗಿಸಲು ಶಾಸಕರು ತಹಶೀಲ್ದಾರ್ ನಾಗರಾಜ್ ಗೆ ಸೂಚನೆ ನೀಡಿದರು.ಈ ಜಾಗದಲ್ಲಿ ಕುಡಿಯುವ ನೀರಿನ‌ ಟ್ಯಾಂಕಿ ನಿರ್ಮಿಸಲು ಸೂಚನೆ ನೀಡಿದರು.ಜೊತೆಗೆ ಸರ್ಕಾರಿ ಜಾಗದಲ್ಲಿ ಖಾಸಗಿ ಸಹಭಾಗತ್ವದಲ್ಲಿ ಶಾಲೆ ನಿರ್ಮಿಸಲು ಶಾಸಕರು ಸೂಚನೆ ನೀಡಿದರು.

ಕನ್ನಡ ಶಾಲೆಯ ಕಟ್ಟಡವೂ ಸಹ ಎರಡು ವರ್ಷದಿಂದ ನಿರ್ಮಾಣಗೊಳ್ಳುತ್ತಿದ್ದು ಇಂಜಿನಿಯರ್ ಮತ್ತು ಗುತ್ತಿಗೆದಾರನಿಗೆ ಶಾಸಕರು ತರಾಟೆ ತೆಗೆದುಕೊಂಡರು. ಕನ್ನಡ ಶಾಲೆಯ ಮಕ್ಕಳು 1 ರಿಂದ 7 ನೇ ತರಗತಿ ಇದ್ದು ಒಂದೇ ತರಗತಿಯಲ್ಲಿ 1 ಮತ್ತು 2 ನೇ ತರಗತಿ ನಡೆದರೆ.

ಅದೇ ತರಗತಿಯಲ್ಲಿ 7 ನೇ ತರಗತಿ ನಡೆದಿದೆ.7 ನೇ ತರಗತಿ, 1 ಮತ್ತು 2ನೇ ತರಗತಿ ಒಂದೇ ಕೊಠಡಿಯಲ್ಲಿ ನಡೆದಿದೆ. 114 ವಿದ್ಯಾರ್ಥಿಗಳಿಗೆ ನಿರ್ಮಾಣಗೊಳ್ಳುತ್ತಿರುವ 8 ಕೊಠಡಿ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ. ಮಾಜಿ ಸಚಿವ ಈಶ್ವರಪ್ಪನವರು 1 ಕೋಟಿ ಹಣ ವೆಚ್ಚದಲ್ಲಿ ನಿರ್ಮಿಸಲು 2021 ರಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆಮೆಗತಿ ಪಡೆದುಕೊಂಡಿರುವ ಶಾಲೆ ಶಾಸಕರ ಚಾಟಿ ಏಟಿನಿಂದ ವೇಗ ಪಡೆದುಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/4098

Related Articles

Leave a Reply

Your email address will not be published. Required fields are marked *

Back to top button