ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ನಗರದ ವೀರ ಶೈವ ಕಲ್ಯಾಣ ಮಂದಿರದಲ್ಲಿ ಮತ್ತು ನೆಹರೂ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಗಿದೆ. ಮೇಯರ್ ಶಿವಕುಮಾರ್ ಈ ಎರಡೂ ದಸರಾಕ್ಕೂ ಚಾಲನೆ ನೀಡಲಾಗಿದೆ.
ಇಂದು ಬೆಳಗ್ಗೆ 10 ಗಂಟೆಗೆ ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಿಳಾ ದಸರಾ ಅಂಗವಾಗಿ ಕೆಳಕಂಡ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಕೆಳಕಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ರಂಗೋಲಿ ಸ್ಪರ್ಧೆ ಲೆಮನ್ ಅಂಡ್ ಸ್ಪೂನ್ ಮ್ಯೂಸಿಕಲ್ ಚೇರ್ ಪಾಸಿಂಗ್ ದ ಬಾಲ್ ಹಗ್ಗ ಜಗ್ಗಾಟ ಪ್ಲೇವುಡ್ ನೊಂದಿಗೆ ಬಾಲ್ ಬ್ಯಾಲೆನ್ಸಿಂಗ್, ಸಮೂಹ ಗಾಯನ, ಸಮೂಹ ನೃತ್ಯ ಹಾಗೂ ಬಕೆಟ್ ಇನ್ ದ ಬಾಲ್, ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳಾ ದಸರಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಂಗೀತ ನಾಗರಾಜ್ ರವರಿಂದ ನಡೆಯುತ್ತಿರುವ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಅ.16 ರಂದು ನಡೆಯಲಿದೆ.
ಅದರಂತೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಪಾಲಿಕೆ ಸದಸ್ಯೆ ರೇಖಾರಂಗನಾಥ್ ಅವರ ಮಾರ್ಗದರ್ಶನದಲ್ಲಿ ಮಕ್ಕಳಾ ದಸರಾ ಆರಂಭವಾಗಿದೆ. ಸ್ಲೇಟಿಂಗ್, ಅಥ್ಲೆಟಿಕ್, ಕಬ್ಬಡಿ, ಖೋಖೋ ಸೇರಿ 12 ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಇದರ ಪ್ರಶಸ್ತಿಯನ್ನ ಅ.17 ರಂದು ನೀಡಲಾಗುತ್ತದೆ.
ಇದನ್ನೂ ಓದಿ-https://suddilive.in/archives/846
