ಶೈಕ್ಷಣಿಕ ಸುದ್ದಿಗಳು

ಶಿವಮೊಗ್ಗದ‌ ಮೇಘನಾ ಯುಪಿಎಸ್ ಪರೀಕ್ಷೆಯಲ್ಲಿ 589 ನೇ ರ್ಯಾಂಕ್

ಸುದ್ದಿಲೈವ್/ಶಿವಮೊಗ್ಗ

ಯುಪಿಎಸ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಿವೃತ್ತ ಅರಣ್ಯ ಅಧಿಕಾರಿ ಐಎಂ ನಾಗರಾಜ್ ಅವರ ಪುತ್ರಿ ಮೇಘನಾ ಐಎಎಸ್ ನಲ್ಲಿ 589 ನೇ ರ್ಯಾಂಕ್ ಪಡೆದಿದ್ದಾರೆ.

ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿರುವ ಮೇಘನಾ, ಶಿವಮೊಗ್ಗದಲ್ಲಿ ಹೈಸ್ಕೂಲ್ ಮತ್ತು ದ್ವಿತೀಯ ಪಿಯುಸಿಯನ್ನ ಮುಗಿಸಿದ್ದಾರೆ. ನಂತರ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರ್ ಮುಗಿಸಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಮೂರನೇ ಅಟೆಂಪ್ಟ್ ಮುಗಿಸಿರುವ ಮೇಘನಾ ಮಹಾರಾಷ್ಟ್ರದಲ್ಲಿ ಐಪಿಎಸ್ ಪ್ರೊಬೇಷನರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಯುಪಿಎಸ್ ಪರೀಕ್ಷೆಯಲ್ಲಿ 617 ನೇ ರ್ಯಾಂಕ್ ಪಡೆದಿರುವ ಮೇಘನಾ ಈ‌ಬಾರಿ 589 ರ್ಯಾಂಕ್ ಪಡೆದಿದ್ದಾರೆ.

ಇಂಜಿನಿಯರ್ ಆಗಿರುವ ಮೇಘನಾ ಐಪಿಎಸ್ ನಲ್ಲಿ ಆಪ್ಷನಲ್ ವಿಷಯವಾಗಿ ಆಂತ್ರೋಪಾಲಜಿ ವಿಷಯವನ್ನ ಆಯ್ಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ-https://suddilive.in/archives/12962

Related Articles

Leave a Reply

Your email address will not be published. Required fields are marked *

Back to top button