ಸ್ಥಳೀಯ ಸುದ್ದಿಗಳು

ಉಪ್ಪಿನ ರಹಸ್ಯ ಬಿಚ್ಚಿಟ್ಟ ಜಿಲ್ಲಾ ರಕ್ಷಣಾಧಿಕಾರಿಗಳು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಎರಡು ಸ್ಟೀಲ್ ಪೆಟ್ಟಿಗೆಯಲ್ಲಿ ಪತ್ತೆಯಾದ ಉಪ್ಪಿನ ರಹಸ್ಯವನ್ನ ಪೊಲೀಸರು ಬೇಧಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಕೂಲಂಕುಷವಾಗಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಇಂತಹ ಪ್ರಕರಣದಲ್ಲಿ ಇಬ್ಬರು ಬಂಧಿತರಾಗಿದ್ದಾರೆ. ತಿಪಟೂರಿನ ಗಿರೀಶ್ ಎಂಬುವರಿಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಈತನಿಗೆ ಮತ್ತು ಗೋವಾದ ರಾಜೇಶ್ ಜಾದವ್ ರಿಗೆ ಎರಡು ಪೆಟ್ಟಿಗೆಯಲ್ಲಿ ಎರಡು ಕೋಟಿ ಹಣವಿದೆ ಇದಕ್ಕೆ ಸ್ವಲ್ಪ ಖರ್ಚಾಗುತ್ತೆ ಎಂದು ಇಬ್ವರ ಬಳಿಯೂ ಲಕ್ಷಾಂತರ ರೂ ಹಣವನ್ನ ಬಾಬಾ ಯಾನೆ ನಜ್ರುಲ್ಲಾ ಮತ್ತು ಮೊಹ್ಮದ್ ಜಬೀವುಲ್ಲ ಪಡೆದುಕೊಂಡಿರುತ್ತಾರೆ ಎಂದರು.

ಗಿರೀಶ್ ಗೆ ಬಾಬಾ ಪರಿಚಯವಾಗಿದ್ದು ಒಂದು ಕೋಟಿ ರೂ.ಹಣವನ್ನ ಕೊಡಿಸುತ್ತೇನೆ ಐದು ಪರ್ಸೆಂಟ್ ಹಣ ಕೊಡಬೇಕು ಎಂದು ಹೇಳಿ ಬಾಬಾ ಈತನಿಂದ 2½ ಲಕ್ಷ ರೂ ಹಣ ಮುಂಗಡವಾಗಿ ಹಣ ಪಡೆದಿರುತ್ತಾರೆ. ಸ್ವಲ್ಪದಿನದ ನಂತರ ಬಾಬಾ ಗಿರೀಶನಿಗೆ ಪೆಟ್ಟಿಗೆ ಬಂದಿದೆ ಎರಡು ಪೆಟ್ಟಿಗೆಯಲ್ಲಿ ಎರಡು ಕೋಟಿ ಹಣವಿದೆ. ನಿನ್ನ ಜೊತೆಗೆ ಮತ್ತೋರ್ವನನ್ನ ಸೇರಿಸಿಕೊಳ್ಳಿ ಎರಡು ಕೋಟಿ ಹಣ ಇದೆ ಎಂದು ತಿಳಿಸಿದ್ದಾನೆ ಎಂದರು.

2021-22 ರಲ್ಲಿ ಇದೇರೀತಿ ಪೆಟ್ಟಿಗೆಯಲ್ಲಿ ಹಣವಿದೆ ಎಂದು ನಂಬಿಸಿ ತಿಪಟೂರಿನ ಡಾಕ್ಟರ್ ಒಬ್ವರಿಗೆ ಈತ ಯಾಮಾರಿಸಿದ್ದ. ಘಟನೆ ಇದೇ ಘಟನೆಯ ರೀತಿ ನಡೆದಿತ್ತು. ಗಿರೀಶ್ ನನ್ನ ರೆಡಿ ಮಾಡಿದಂತೆ ಮತ್ತೋರ್ವ ಗೋವದಲ್ಲಿದ್ದ ರಾಜೇಶ್ ಜಾದವ್ ಗೆ ಹಣ ತೆಗೆದುಕೊಂಡು ಹೋಗಿ ಎಂದು ತಿಳಿಸಿ ಇಬ್ವರಿಗೂ ಶಿವಮೊಗ್ಗಕ್ಕೆ ಬರಲು ಹೇಳಿದ್ದಾರೆ ಎಂದರು.

ಅದೃಷ್ಠ ಎಂದರೆ ಇಬ್ಬರೂ ಬಾರದೆವಿರುವ ಕಾರಣ ಪೆಟ್ಟಿಗೆ ಇಲ್ಲೆ ಅನಾಥನಾಗಿ ಬಿದ್ದಿತ್ತು. ಇದನ್ನ ಕಂಡ ಶಿವಮೊಗ್ಗ ರೈಲ್ವೆ ನಿಲ್ದಾಣದ ಆಟೋಚಾಲಕರು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣವನ್ನ ಜಬೀವುಲ್ಲಾ ಮತ್ತು ಬಾಬಾ ಯನೆ ನಸ್ರುಲ್ಲಾರನ್ನ ಬಂಧಿಸಲಾಗಿದೆ ಎಂದು ತಿಳಿಸಿದರು. . ಇಂದು ಘಟನಾ ಸ್ಥಳಕ್ಕೆ ಮಹಜರ್ ಮಾಡಲಾಗಿದೆ.

ನಸ್ರುಲ್ಲಾರನ್ನ ಕರೆದುಕೊಂಡು ಬಂದು ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಮಹಜರ್ ಮಾಡಲಾಗಿದೆ. ಸ್ಟೀಲ್ ಪೆಟ್ಟಿಗೆಯ ಪ್ರಕರಣ ಈ ಹಿಂದೆ ಎರಡು ಮೂರು ಪ್ರಕರಣಗಳು ನಡೆದಿದೆ. ರಾಜೇಶ್ ಯಾದವ್ ಬಳಿಯೈ ಹಣ ಮತ್ತು ಚೆಕ್ ಪಡೆದುಕೊಂಡಿರುತ್ತಾರೆ. ಎರಡು ಪೆಟ್ಟಿಗೆಯನ್ನ ಮುಳಬಾಗಿಲಿನಲ್ಲಿ ಪಡೆದುಕೊಂಡು ಬಂದು ಗೋಣಿಚೀಲದಲ್ಲಿ ಅನುಮಾನ ಬಾರದಂತೆ ಮ್ಯಾನ್ಯುಫ್ಯಾಕ್ಚರ್ ಬೈ ಬಾಂಗ್ಲಾ ಎಂದು ಬರೆಸಿರುತ್ತಾರೆ ಎಂದು ಎಸ್ಪಿ ವಿವಣೆ ನೀಡಿದರು.

ಇದನ್ನೂ ಓದಿ-https://suddilive.in/archives/2623

Related Articles

Leave a Reply

Your email address will not be published. Required fields are marked *

Back to top button