ಸ್ಥಳೀಯ ಸುದ್ದಿಗಳು

ಶಿವಮೊಗ್ಗ ತಲುಪಿದ ಕಾಲ್ನಡಿಗೆ ಜಾಥಾ-ಕೇಸರಿ ಬಾವುಟ ಹಿಡಿದುಕೊಂಡು ಬಂದರೆ ಬಿಡ್ತೀರಾ ಎಂದು ಗುರುಮೂರ್ತಿ ಗರಂ ಆಗಿದ್ದೆಕೆ?

ಸುದ್ದಿಲೈವ್/ಶಿವಮೊಗ್ಗ

ಹೊರೆಬೈಲಿನಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಮಾಡಿರುವ ಡಿಎಸ್ ಎಸ್ ಅಂಬೇಡ್ಕರ್ ವಾದ ಸಂಘಟನೆಯ ಟಿ.ಹೆಚ್.ಹಾಲೇಶಪ್ಪ ಮತ್ತು ಇತರೆಯರನ್ನ ಗಡಿಪಾರು ಮಾಡುವಂತೆ ಆಗ್ರಹಿಸಿ ಡಿ.ಎಸ್.ಎಸ್.ಗುರುಮೂರ್ತಿಯವರ ಕಾಲ್ನಡಿಗೆ ಶಿವಮೊಗ್ಗ‌ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ.

ಬೆಳಿಗ್ಗೆ 8-00 ಕ್ಕೆ ಹೊರಬೈಲಿನಿಂದ ಹೊರಟ ಬೃಹತ್ ಕಾಲ್ನಡಿಗೆ ಜಾಥ ಕುಂಸಿ, ಆಯನೂರು, ವೀರಣ್ಣನಬೆನವಳ್ಳಿ, ಸಿಂಹಧಾಮ, ಗಾಡಿಕೊಪ್ಪ, ಬಸ್ ನಿಲ್ದಾಣ ಅಮೀರ್ ಅಹ್ಮದ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ.

ಜೋಗಿ ಸಮುದಾಯದ ವಿರುದ್ಧ ಹೊರೆಬೈಲು ನಗರದಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಮಾಡಿರುವ ಹಾಲೇಶಪ್ಪ, ಭೈರಪ್ಪ, ಜಗದೀಶ್, ದಿನೇಶ್ ಮತ್ತು‌ ಪ್ರೀತಿ ಮತ್ತಿತರನ್ನ ಗಡಿಪಾರು ಮಾಡಬೇಕು. ಪ್ರೀತಿಯವರು ದಾಖಲಿಸಿರುವ ವರದಿಗೆ ಬಿ ರಿಪೋರ್ಟ್ ಹಾಕುವಂತೆ ಪತ್ರಿಭಟನಾಕಾರರು ಆಗ್ರಹಿಸಿದ್ದಾರೆ. ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಜಿಲ್ಲಾ ಶಾಖೆಯ ವತಿಯಿಂದ ಪ್ರತಿಭಟನೆ ನಡೆದಿದೆ.

ಸೆಪ್ಟಂಬರ್ ನಲ್ಲಿ ದಲಿತ ಯುವತಿ ಪ್ರೀತಿ ಎಂಬುವರು ಜೋಗಿ ಸಮುದಾಯದ ದಿನೇಶ್ ರನ್ನ ಪ್ರೀತಿಸಿ ಮದುವೆಯಾಗಿದ್ದರು. ಸಹಬಾಳ್ವೆ ಮಾಡಬೇಕಿದ್ದ ಜೋಡಿಗೆ ಹಾಲೇಶಪ್ಪನವರ ಕಡೆಯವರು ಕುಮ್ಮಕ್ಕು ನೀಡಿ 19 ಜನರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗುವಂತೆ ಮಾಡಿದೆ. ಸಮಸ್ಯೆ‌ ಬಗೆಹರಿಸಬೇಕಿದ್ದವರು ಈ ರೀತಿ ಅಡ್ಡಮಾರ್ಗ ಹಿಡಿದು ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು‌ ಆಗ್ರಹಿಸಿದ್ದಾರೆ.

ಕೇಸರಿ ಶಾಲು ಹಾಕಿಕೊಂಡು ಬಂದರೆ ಬಿಡ್ತೀರಾ? ಗುರುಮೂರ್ತಿ ಗರಂ

ಕಚೇರಿ ಒಳಗೆ ಮೈಕ್ ನಲ್ಲಿ ಮಾತನಾಡಲು ಅವಕಾಶ ನೀಡದ ಪೊಲೀಸರ ವಿರುದ್ಧ ಡಿಎಸ್ ಎಸ್ ಗುರುಮೂರ್ತಿ ಗರಂ ಆಗಿದ್ದಾರೆ. ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ತಲುಪುತ್ತಿದ್ದಂತೆ ಜಾಥಾದಲ್ಲಿ ಮೈಕ್ ಅಳವಡಿಸಿಕೊಂಡಿದ್ಸ ಮಾರುತಿ ಓಮ್ನಿಯನ್ನ ಕಚೇರಿಯ ಗೇಟ್ ಒಳಗೆ ತರಲಾಗಿತ್ತು. ಆದರೆ ಪೊಲೀಸರು ಮೈಕಿನ ವಾಹನಕ್ಕೆ ಅವಕಾಶ ಇಲ್ಲ ಎಂದು ಆಕ್ಷೇಪಿಸಿದ್ದರು.

ಮೈಕ್ ವಾಹನ ಹೊರಗೆ ಇಡುವಂತೆ ಪೊಲೀಸರು ಆಗ್ರಹಿಸಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಗೆ ಜಾಥದಲ್ಲಿ ಬಂದಿದ್ದ ಗುರುಮೂರ್ತಿ ಗರಂ ಆದರು. ಕೇಸರಿ ಮತ್ತು ಹನುಮಧ್ವಜ ಹಾಕಿಕೊಂಡು ಬಂದರೆ ಬಿಡ್ತೀರಾ ಎಂದು‌ ಪೊಲಶರಿಗೆ ಗರಂ ಆದರು.‌ ನಂತರ ಪೊಲೀಸರೇ ಅವರಿಗೆ ಅವಕಾಶ ಮಾಡಿಕೊಟ್ಟರು. ನಂತರ ಪ್ರತಿಭಟನಾ ಭಾಷಣ ಮುಂದುವರೆಯಿತು.

ಚಂದ್ರಗುತ್ತಿ ಮಠದ ನಿವೃತ್ತನಾಥ್ ಸ್ವಾಮೀಜಿ, ಡಿಎಸ್ ಎಸ್ ಗುರುಮೂರ್ತಿ ಬಣದ ಚಂದ್ರಪ್ಪ, ಬಂಗಾರಪ್ಪ, ಹನುಮಂತು, ಲಿಂಗಪ್ಪ, ಶಿವಬಸಪ್ಪ, ಗ್ರಾಪಂ ಮಾಜಿ ಸದಸ್ಯೆ ಸುರೇಖಾ ಹಾಲಿ ಉಪಾಧ್ಯಕ್ಷೆ ಶಶಿಕಲಾ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8072

Related Articles

Leave a Reply

Your email address will not be published. Required fields are marked *

Back to top button