ಸ್ಥಳೀಯ ಸುದ್ದಿಗಳು

ಆಟೋರಿಕ್ಷಾ ಪ್ರೀ ಪೇಯ್ಡ್ ಕೌಂಟರ್ ತೆರೆಯಲು ಅರ್ಜಿ ಆಹ್ವಾನ

ಸುದ್ದಿಲೈವ್/ಶಿವಮೊಗ್ಗ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಿದಂತೆ ಶಿವಮೊಗ್ಗ ನಗರದ ರೈಲ್ವೇ ನಿಲ್ದಾಣ ಮತ್ತು ಪ್ರಮುಖ ಬಸ್ ನಿಲ್ದಾಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆವರಣದಲ್ಲಿ ಆಟೋರಿಕ್ಷಾ ಪ್ರೀ-ಪೇಯ್ಡ್ ಕೌಂಟರ್‍ಗಳನ್ನು ತೆರೆಯಲು ಪ್ರಾಧಿಕಾರ ಮುಂದಾಗಿದೆ.

ಸಾರ್ವಜನಿಕ ಸೇವೆ ಒದಗಿಸಲು ಜಿಎಸ್‍ಟಿ/ಐಟಿ ನಂ. ಹೊಂದಿರುವ ನೊಂದಾಯಿತ ಸಂಸ್ಥೆಯವರು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222209 ಹಾಗೂ ಇ-ಮೇಲ್ rtosmg-ka@nic.in ನ್ನು ಸಂಪರ್ಕಿಸುವುದು.

ಇದನ್ನೂ ಓದಿ-https://suddilive.in/archives/8461

Related Articles

Leave a Reply

Your email address will not be published. Required fields are marked *

Back to top button