ಶೈಕ್ಷಣಿಕ ಸುದ್ದಿಗಳು

ಶಾಲಾ ಮಕ್ಕಳ ಕೈಯಲ್ಲಿ ಶೌಚ ಶುಚಿ-ಎಫ್ ಐ ಆರ್ ದಾಖಲು

ಸುದ್ದಿಲೈವ್/ಭದ್ರಾವತಿ

ಗುಡ್ಡದ ನೇರಳೆ ಶಾಲೆಯಲ್ಲಿ ಶಾಲಾ ಮಕ್ಕಳ ಕೈಯಲ್ಲಿ ಶುಚಿ ಮಾಡಿಸಿದ ಹಿನ್ನಲೆಯಲ್ಲಿ ಮುಖ್ಯ ಶಿಕ್ಷಕರ ಅಮಾನತುಗೊಳಿಸಿದ ಪ್ರಕರಣದ ಬೆನ್ನಲ್ಲೇ ಭಧ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಇಒ ನಾಗರಾಜ್ ಮೂಲಕ ಈ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಡಿ.27 ರಂದು ಭದ್ರಾವತಿ ತಾಲ್ಲೂಕು ಗುಡ್ಡದ ನೇರಳೆಕೆರೆ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶೌಚಾಲಯವನ್ನ ಮಕ್ಕಳು ಶುಚಿ ಮಾಡುತ್ತಿರುವ ಬಗ್ಗೆ ಬಿಇಒ ನಾಗರಾಜ್ ಅವರ ಮೊಬೈಲ್ ಗೆ ಒಂದು ಸೆಕೆಂಡಿನ ವಿಡಿಯೋ ತುಣುಕಿರುವ ವಾಟ್ಸಪ್ ಬಂದಿತ್ತು.

ಅದರಲ್ಲಿ ವೀರಾಪುರ ಪಂಚಾಯ್ತಿ ವ್ಯಾಪ್ತಿ ನೇರಳೆಕೆರೆ ಭದ್ರಾವತಿ ತಾಲೂಕು ಭದ್ರಾವತಿ ಕ್ಷೇತ್ರ ಅಂತ ಉಲ್ಲೇಖವಾಗಿತ್ತು. ಇದಕ್ಕೂ ಮುಂಚೆ ಉಪವಿಭಾಗಾಧಿಕಾರಿ ಅವರ ಕಛೇರಿಯಿಂದ ಬಿಇಒ‌ ಅವರ ಕಚೇರಿಗೆ ಗುಡ್ಡದನೇರಳೆಕೆರೆ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಶಂಕರಪ್ಪನವರು ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯಗಳನ್ನು ಸ್ವಚ್ಚ ಮಾಡಿಸಿರುವ ಬಗ್ಗೆ ದೂರು ಸಹ ಬಂದಿತ್ತು.

ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿ ಆದೇಶಿಸಿದ ಹಿನ್ನಲೆಯಲ್ಲಿ ಗುಡ್ಡದನೇರಳೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಬಿಇಒ ಭೇಟಿ ನೀಡಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ.ಎಸ್ ರವರನ್ನು ಮತ್ತು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಧ ಶಿವು ಎಂಬುವರನ್ನು ವಿಚಾರಿಸಿ ಪ್ರಕರಣದ ಸಂಬಂದ ಲಿಖಿತ ಹೇಳಿಕೆಯನ್ನು ಪಡೆದಿದ್ದರು.

ಬಿಇಒ ಭೇಟಿ ನೀಡಿದ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ರವಿಕುಮಾ‌ರ್ ಎಂಬುವರು ದೂರವಾಣಿ ಮುಖಾಂತರ ಕರೆ ಮಾಡಿ ಪರಿಶಿಷ್ಟ ಜನಾಂಗಕ್ಕೆ ಸೇರಿದವನಾಗಿದ್ದು ಗುಡ್ಡದನೇರಳೆಕೆರೆ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಅವರ ಸಣ್ಣ ಮಗಳು 5 ನೇ ಕ್ಲಾಸಿನಲ್ಲಿ, ಹಾಗು ದೊಡ್ಡಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಡಿ.23 ರಂದು ಬೆಳಿಗ್ಗೆ ಶಾಲೆ ಮುಗಿಸಿಕೊಂಡು ಮಕ್ಕಳು ಮನೆಗೆ ವಾಪಾಸ್ಸಾದಾಗ ರವಿಕುಮಾರ್ ಹತ್ತಿರ ಶಾಲೆಯ ಹೆಡ್ ಮಾಸ್ಟರ್ ಆದ ಶಂಕರಪ್ಪನವರು, ಈ ದಿವಸ ಬೆಳಿಗ್ಗೆ 6 ನೇ ತರಗತಿಯಲ್ಲಿ ಮಕ್ಕಳು ಮತ್ತು ಸ್ನೇಹಿತರ ಕೈಯಲ್ಲಿ ಶಾಲೆಯ ಶೌಚಾಲಯ ವನ್ನು ಸ್ವಚ್ಛ ಮಾಡಿಸಿರುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.‌

ಮಕ್ಕಳ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡಿಸಿ ನಮಗೆ ಅವಮಾನ ಮಾಡಿರುತ್ತಾರೆ ದಯವಿಟ್ಟು ಅವರ ಮೇಲೆ ಕ್ರಮ ಜರುಗಿಸಿ ಎಂದು ಬಿಇಒ ಮುಂದೆ ತಿಳಿಸಿದ್ದಾರೆ. ನಂತರ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶಂಕರಪ್ಪ ರವರ ಮೇಲೆ ಕ್ರಮ ಜರುಗಿಸಲು ಕೋರಿ ಬಿಇಒ ಅವರು ಡಿಡಿಪಿಐ ಗೆ ಮಾಹಿತಿ ಸಲ್ಲಿಸಿದ್ದಾರೆ. ನಂತರ ಡಿಡಿಪಿಐ ಅವರ ಸೂಚನೆಯ ಮೇಲೆ ಬಿಇಒ ಮಕ್ಕಳ ಕೈಯಲ್ಲಿ ಶೌಚ ಮಾಡಿಸಿದ ಹಿನ್ನಲೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button