ರಾಜ್ಯ ಸುದ್ದಿಗಳು

ಸದ್ದುಗದ್ದಲದಾಚೆ ನಡೆಯುತ್ತಿದೆ ದಸರಾ, ಸರಳ ದಸರಾ ಎಂದು ಹೇಳಲು ಪಾಲಿಕೆ ಬೆಚ್ಚಿಬಿದ್ದಿದೆಯಾ?

ಸುದ್ದಿಲೈವ್/ಶಿವಮೊಗ್ಗ

195 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಕೆಲವೆಡೆ ಕೇಂದ್ರ ಸರ್ಕಾರದಿಂದ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗೆ ಭೇಟಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ತಾಲೂಕಿನ ಬರದ ಬೆನ್ನಲ್ಲೇ ಸದ್ದುಗದ್ದಲದ ಆಚೆ ಶಿವಮೊಗ್ಗದಲ್ಲಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ರೀತಿ ಮೌನದ ರೀತಿಯಲ್ಲಿ ಪಾಲಿಕೆ ದಸರಾ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡದೆ ಆರಂಭಿಸಿರುವುದು ‘ಬರ’ ಸಿಡಿಲಿಗೆ ಬೆದರಿ ದಸರಾಗೆ ಚಾಲನೆ ನೀಡಲಾಗುತ್ತಿದೆಯಾ ಎಂಬ ಅನುಮಾನ ಹುಟ್ಟಿದೆ. ಇಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಿಳಾ ದಸರಾಕ್ಕೂ ಮತ್ತು ನೆಹರೂ ಕ್ರೀಡಾಂಗಣದಲ್ಲಿ ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಗಿದೆ.

ಒಂದು ಸುದ್ದಿಗೋಷ್ಠಿಯೂ ಕರೆಯದೆ ಪಾಲಿಕೆ ಬರಗಾಲದಲ್ಲಿ ದಸರಾಹಬ್ಬಕ್ಕೆ ಚಾಲನೆ ನೀಡಿರುವುದೇಕೆ? ಸರಳ ದಸರಾ ನಡೆಸಲಾಗುತ್ತಿದೆ ಎಂದು ಹೇಳಲು ಮೀನಾಮೇಷ ಎಣಿಸಲಾಗುತ್ತಿದೆಯಾ? ಹಣದ ಕೊರತೆ ಸಹಜವಾಗಿ ಇದ್ದೇ ಇರುತ್ತದೆ. ಆದರೆ ಇರುವ ಹಣದಲ್ಲಿಯೇ ಅದ್ದೂರಿಯಾಗಿ ನಡೆಸುವ ಚಾಲಾಕಿತನ ಶಿವಮೊಗ್ಗದವರಿಗೆ ಗೊತ್ತಿದೆ.

ಹಾಗಾಗಿ ಸರಳ ದಸರಾವನ್ನ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ನಡೆಸುತ್ತಿರುವ ಯೋಜನೆಯಾದರೂ ಏನು ಎಂಬುದಕ್ಕೆ ಪಾಲಿಕೆ ವಿವರಿಸಬೇಕಲ್ವಾ? ಯಾವ ವರ್ಷವೂ ಈ ರೀತಿ ನಡೆದಯ ದಸರಾ ಈ ರೀತಿ ನಡೆಯುತ್ತಿರುವುದೇಕೆ ಎಂಬ ಅನುಮಾನದೊಂದಿಗೆ ಸುದ್ದಿ ಮುಕ್ತಾಯ ಗೊಳಿಸಬೇಕಿದೆ.

ಇದನ್ನೂ ಓದಿ-https://suddilive.in/archives/838

Related Articles

Leave a Reply

Your email address will not be published. Required fields are marked *

Back to top button