ರಾಜ್ಯ ಸುದ್ದಿಗಳು

ದೀವರ ಸಂಸ್ಕೃತಿ ಕೇವಲ ಸಾಮಾಜಿಕ ಜಾಲತಾಣದಲ್ಲಿ ಹರಿದುಹೋಗುವುದು ಬೇಡ-ಯೋಗೇಂದ್ರ ಅವಧೂತರು

ಸುದ್ದಿಲೈವ್/ಶಿವಮೊಗ್ಗ

ಸಂಸ್ಕೃತಿ ತೇಲುಹೋಗುತ್ತಿರುವುದನ್ನ ಹಿಡಿದು ದೀವರ ಸಂಸ್ಕೃತಿಯನ್ನ ನೆನಪಿಸಲಾಗಿದೆ. ಈ ಸಂಸ್ಕೃತಿ ಉಳಿಸಲು ಒಗ್ಗಾಟ್ಟಾಗಬೇಕೆಂದು ಯೋಗೇಂದ್ರ ಅವಧೂತರು ಕರೆ ನೀಡಿದರು.

ನಗರದ ಈಢಿಗರ ಭವನದಲ್ಲಿ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ದೀವರ ಸಂಸ್ಕೃತಿಕ ವೈಭವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು‌

ಯೂಟ್ಯೂಬ್ ಫೇಸ್ ಬೂಕ್ ನಲ್ಲಿ ಸಂಸ್ಕೃತಿ ಹರಿದುಹೋಗ್ತಾ ಇದೆ. ಇದಕ್ಕಾಗಿ ದೀವರ ಸಾಂಸ್ಕೃತಿಕ ವೈಭವ ದೊಡ್ಡದಾಗಿ ಬಿಂಬಿಸಬೇಕಿದೆ. ಲಕ್ಷ್ಮೀ ಪೂಜೆ ಮಾಡುವುದು ಸಹ ಒಂದು ಸಂಸ್ಕೃತಿಯನ್ನ ಬಿಂಬಿಸುತ್ತದೆ. ಪೂಜಾ ಪುನಸ್ಕಾರದಲ್ಲಿ ದೀವರ ಸಮಾಜ ಹಿಂದುಳಿದಿದೆ. ಕಳಶ ಇಡಲಾಗುತ್ತದೆ. ಅದಕ್ಕೆ ಹೆಸರೇನು ಇಡಬೇಕು ಗೊತ್ತಿಲ್ಲ. ಯಾವ ರೀತಿಯ ದೇವರನ್ನ ಕರೆಯಬೇಕು ಗೊತ್ತಿಲ್ಲ ಎಂದು ತಿಳಿಸಿದರು.

ತೆಂಗಿನ ಕಾಯಿ ದೇವರ ತಲೆ, ವೀಳ್ಯವನ್ನ ಮೂರು ಎಲೆ ಇಡ ಬೇಕು. ದೇವ ಸಙಕೇತವಾಗಿದೆ. ದೇವರ ಆರಾಧನೆ ಮಾಡಲಾಗುತ್ತಿದೆ. ಮಹಿಳೆಯರಿ್ಎ ಮಂತ್ರ ಬಾರದ ಕಾರಣ ಮೂರು ಬಾರಿ ಅಕ್ಷತೆ ಹಾಕಿ ದೇವಿಯನ್ನಾಹ್ವಾನಿಸಲಾಗುತ್ತದೆ. ಹೀಗೆ  ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.

ನಿಟ್ಟೂರ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಂಸ್ಕೃತಿ ಉಳಿಯಬೇಕಿದೆ ಮತ್ತು ಬೆಳಸುವ ಮೂಲಕ ಪಾಲಿಸಿಕೊಂಡು ಹೋಗಬೇಕಿದೆ. ದೀವರ ಸಂಸ್ಕೃತಿ ನಮ್ಮ‌ಪೀಳಿಗೆಗೆ ಧಾರೆ ಎರೆಯುವ ಕೆಲಸವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸತೀಶ್ ಬಾಳೆಗುಂದಿ ವಹಿಸಿದ್ದರು. ಪತ್ರಕರ್ತ ನಾಗರಾಜ್ ನೇರಿಗೆ ಕಾರಗಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ಅಂಟಿಕೆ ಪಿಂಟಿಕೆ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಇದನ್ನೂ ಓದಿ-https://suddilive.in/archives/3687

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373