ಕರವೇ ಕಾರ್ಯಕರ್ತರ ಮನವಿ ಮೇರೆಗೆ ನೆಹರೂ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್

ಸುದ್ದಿಲೈವ್/ಶಿವಮೊಗ್ಗ

ತಮಿಳು ನಾಡಿಗೆ ಕಾವೇರಿ ನದಿ ಹರಿಸುವುದನ್ನ ವಿರೋಧಿಸಿ ಇಂದು ಕರೆದ ಕರ್ನಾಟಕ ಬಂದ್ ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಜ್ರಿಯೆ ದೊರೆಯದಿದ್ದರೂ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ. ಗೋಪಿ ವೃತ್ತದ ಬಳಿ ಸ್ಟ್ಯಾಲಿನ್ ಪ್ರತಿಕೃತಿ ದಹಿಸಲಾಯಿತು.
ಬೆಳಿಗ್ಗೆ ಕರವೇ ಸಙಘಟನೆಗಳು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದು ಅದರ ಬೆನ್ನಲ್ಲೇ ಕರವೇ ಪ್ರವೀಣ ಶೆಟ್ಟಿ ಬಣ ಪ್ರತಿಭಟನಾ ಮೆರವಣಿಗೆ ನಡೆಸಿವೆ. ನೆಹರೂ ರಸ್ತೆಯಿಂದ ಕರವೇ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಿಗೆ ಇವತ್ತು ಬಂದ್ ಮಾಡುವಂತೆ ಕೈಮುಗಿದು ಕಾರ್ಯಕರ್ತರು ಮನವಿ ಮಾಡಿಕೊಂಡರು. ನೆಹರೂ ರಸ್ತೆಯ ಅಷ್ಟು ಅಙಗಡಿಗಳು ಪ್ರತಿಭಟನಾ ಮೆರವಣಿಗೆ ವೇಳೆ ಬಂದ್ ಮಾಡಲಾಯಿತು.
ಈ ವೇಳೆ ನೆಹರೂ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕರೊಬ್ಬರು ಸಂಘಟನೆಯ ಕಾರ್ಯಕರ್ತರ ಜೊತೆ ವಾಗ್ವಾದಕ್ಕೆಇಳಿದಿದ್ದು, ನಿನ್ನೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಂದ್ ಮಾಡಲಾಗಿದೆ. ಮತ್ತೆ ಈಗ ಎಂದರೆ ನಮಗೆ ನಿರ್ವಹಣೆಗೆತೊಂದರೆ ಆಗುತ್ತೆ ಎಂದು ವಾಗ್ವಾದ ಮಾಡಿರುವ ದೃಶ್ಯಗಳು ಲಭ್ಯವಾಗಿದೆ.
ಕರವೇ ಪ್ರವೀಣ್ ಶೆಟ್ಟಿ ಬಣ ಆರ್. ಮಂಜು ಅವರ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಮುಂಭಾಗದಿಂದ ಗೋಪಿ ವೃತ್ತದ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ನಮ್ಮದು ನಮ್ಮದೂ ಕಾವೇರಿ ನಮ್ಮದು ಎಂಬ ಘೋಷಣೆಯೊಂದಿಗೆ ಹೊರಟ ಮೆರವಣಿಗೆ ಗೋಪಿ ವೃತ್ತ ತಲುಪಿದೆ. ಗೋಪಿ ವೃತ್ತದಲ್ಲಿ ತಮಿಳು ನಾಡು ಸಿಎಂ ಸ್ಟ್ಯಾಲಿಮ್ ಪ್ರತಿಕೃತಿ ದಹಿಸಲಾಯಿತು.
ಕಾವೇರಿ ನದಿ ನೀರನ್ನ ತಮಿಳು ನಾಡಿಗೆ ಹರಿಸುವುದನ್ನ ನಿಲ್ಲಿಸಬೇಕು. ಸಂಸದರು ಲೋಕಸಭೆಯಲ್ಲಿ ರಾಜ್ಯದ ಪರ ಮಾತನಾಡಬೇಕು. ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟದ ಪರಿಹಾರದಸೂತ್ರ ನೀಡಬೇಕು ಎಂದು ಒತ್ತಾಯಿಸಲಾಯಿತು.
ಮಳೆಯೇ ಇಲ್ಲದಿದ್ದರೂ ತಮಿಳುನಾಡು ನೀರು ಕೇಳುತ್ತಿದೆ. ನ್ಯಾಯ ಪ್ರಾಧಿಕಾರ ರಾಜ್ಯದ ಸ್ಥಿತಿಗತಿಯನ್ನ ಅವಲೋಕಿಸುವಂತೆ ಒತ್ತಾಯಿಸಲಾಯಿತು. ಮೆರವಣಿಗೆಯಲ್ಲಿ ಸಂಘಟನೆಯ ಮುಖಂಡರಾದ ಅಂಬರೀಶ್,ಬಸವರಾಜ್,ನ್ಯಾಮತ್, ಶೈಲೇಶ್ ಕುಮಾರ್, ಜುಳ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/2023/09/29/ಬೆಳಿಗ್ಗೆ-4-ಗಂಟೆಗೆ-ಹಿಂದೂ-ಮಹ/
