ರಾಜ್ಯ ಸುದ್ದಿಗಳು
10 ವರ್ಷದ ಹಿಂದಿನ ರಸ್ತೆ ಅಪಘಾತ, ಸಾರಿಗೆ ಸಂಸ್ಥೆಯಿಂದ ಪರಿಹಾರ ವಿತರಣೆ

ಸುದ್ದಿಲೈವ್/ಶಿವಮೊಗ್ಗ

ಬಂಕಾಪುರದ ಬಳಿ ಕೆಎಸ್ ಆರ್ ಟಿಸಿ ಬಸ್ ಅಪಘಾತ ಪಡಿಸಿತ್ತು. ಅಪಘಾತದಲ್ಲಿ ಪ್ರಯಾಣಿಕನ ಸಾವಾಗಿತ್ತು. 10 ವರ್ಷದ ಹಿಂದೆಯ ಪ್ರಕರಣದಲ್ಲಿ ಪ್ರಾಣ ಹಾನಿಯಾಗಿದ್ದ ಮೃತ ಕುಟುಂಬಕ್ಕೆ ಸಾರಿಗೆ ಸಂಸ್ಥೆ ಪರಿಹಾರ ನೀಡಿದೆ.
ದಿ: 11-05-2013 ರಂದು ವಾಹನ ಸಂಖ್ಯೆ ಕೆ.ಎ.17 ಎಫ್ 1284 ವಾಹನವು ಮಾರ್ಗ ಸಂಖ್ಯೆ 7/8 ರಲ್ಲಿ ಭದ್ರಾವತಿಯಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಬಸ್ ಹಾವೇರಿ ಜಿಲ್ಲೆಯ ಬಂಕಾಪುರದ ಹತ್ತಿರ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ವ್ಯಕ್ತಿಯ ಪ್ರಾಣ ಹಾನಿಯಾಗಿತ್ತು. ಮೃತಪಟ್ಟ ಪ್ರಯಾಣಿಕ ಕೃಷ್ಣ ಕಬಾಳೆ, 47 ವರ್ಷ ಇವರ ವಾರಸುದಾರರಾದ ವಂದನಾ ಕೃಷ್ಣ ಕಬಾಳೆ, ಸಾ.ಮೊಳವಡೆ, ಶಾಹುವಾಡಿ ತಾಲ್ಲೂಕು, ಕೊಲ್ಲಾಪುರ ಜಿಲ್ಲೆ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.2,50,000 ಚೆಕ್ಕನ್ನು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್.ಜಿ ರವರು ಹಸ್ತಾಂತರಿಸಿದರು.
ಇದನ್ನೂ ಓದಿ-https://suddilive.in/archives/1000
