ರಾಜ್ಯ ಸುದ್ದಿಗಳು

ಒಂದೇ ದಿನ ಜಿಲ್ಲೆಯಲ್ಲಿ 11 ಜನರಿಗೆ ಮಂಗಲ ಕಾಯಿಲೆ

ಸುದ್ದಿಲೈವ್/ಶಿವಮೊಗ್ಗ

ಕ್ಯಾಸನೂರು ಫಾರೆಸ್ಟ್ ಡಿಸೀಸ್ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ. ಇದರಿಂದ ಇಂದು‌ ಜಿಲ್ಲೆಯಲ್ಲಿ 11 ಜನರಿಗೆ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ತೀರ್ಥಹಳ್ಳಿಯಲ್ಲಿ 3 ಜನರಿಗೆ ಮತ್ತು ಹೊಸನಗರ ತಾಲೂಕಿನಲ್ಲಿ 8 ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

24 ಗಂಟೆಯಲ್ಲಿ ಶಿವಮೊಗ್ಗ ಮತ್ತು ಶಿರಸಿ ಜಿಲ್ಲೆಯಲ್ಲಿ 19 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 11 ಜನರಿಗೆ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಶಿರಸಿ ಜಿಲ್ಲೆಯಲ್ಲಿ ಯಾರಿಗೂ ಕಾಣಿಸಿಕೊಂಡಿಲ್ಲ ಮಲೆನಾಡಿನಲ್ಲಿ ಈ ಕಾಯಿಲೆ ಡಿಸೆಂಬರ್ ನಂತರ ತಾಂಡವಾಡುತ್ತದೆ.

ಶಿವಮೊಗ್ಗದ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಡಿಸೆಂಬರ್ ನಂತರ ಹೆಚ್ಚಾಗಲಿದೆ. ಮಳೆ ಬಿದ್ದರೆ ಈ ಕಾಯಿಲೆ ಕಡಿನೆಯಾಗಲಿದೆ. ಮಳೆ ಬೀಳದಿದ್ದರೆ ಕಾಯಿಲೆ ಉಲ್ಬಣಗೊಳ್ಳಲಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ಮಂಗನ ಕಾಯಿಲೆ ಉಲ್ಬಣವಾಗಲಿದೆ. 2019 ರಲ್ಲಿ ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡಿನಲ್ಲಿ ತಲ್ಲಣ ಮೂಡಿಸಿದ್ದ ಈ ಕಾಯಿಲೆ 2025 ರಲ್ಲಿ ಮತ್ತೆ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಅದರಂತೆ ಡಾ.ಹರ್ಷವರ್ಧನ್ ನಿನ್ನೆ ಆಯುಕ್ತರ ಸಭೆಯಲ್ಲಿ ತಿಳಿಸಿದ್ದಾರೆ.

ಎನಿವೇ… 2024 ರ ಜನವರಿ 1 ರಿಂದ ಇದುವರೆಗೆ 2410 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಶಿರಸಿ ಜಿಲ್ಲೆಯಿಂದ 64 ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಇದುವರೆಗೂ ಗುಣಮುಖರಾದವರೂ 25 ಜನರಿದ್ದಾರೆ ಇದರಲ್ಲಿ ಎರಡು ಸಾವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕಾಣಿಸಿಕೊಂಡ 11 ಜನರೊಂದಿಗೆ ಒಟ್ಟು ಕಾಯಿಲೆ ಸಂಖ್ಯೆ 24 ಕ್ಕೆ ಏರಿದೆ. ಶಿರಸಿ ಜಿಲ್ಲೆಯಲ್ಲಿ 37 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರಿನಲ್ಲಿ 3 ಜನರಲ್ಲಿ ಪಾಸಿಟವ್ ಕಾಣಿಸಿಕೊಂಡಿದೆ.‌

ಇದನ್ನೂ ಓದಿ-https://suddilive.in/archives/8414

Related Articles

Leave a Reply

Your email address will not be published. Required fields are marked *

Back to top button