ರಾಜ್ಯ ಸುದ್ದಿಗಳು

ಬಾಡಿಬಿಲ್ಡರ್ ರತಿಲ ಕುಮಾರ್ ನ ಸಾವಿನ ತನಿಖೆಗೆ ಕುಟುಂಬ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಎಲ್ಲಿ ಹೋದರೂ ಸಾವನ್ನಪ್ಪಿದ ಸಹೋದರನ ಸಾವಿನ‌ನ್ಯಾಯವನ್ನ‌ಕುಟುಂಬ ಕೇಳುತ್ತಿದೆ. ಬಾಡಿಬಿಲ್ಡರ್ ರತಿಲ ಕುಮಾರನ ಸಾವು ತನಿಖೆಯಾಗುತ್ತಿಲ್ಲ‌. ಹೋದಲೆಲ್ಲಾ ಮೃತ ರತಿಲನ ಕುಟುಂಬ ಫೋಟೊ ಹಿಡಿದು ಒಂದು ಅರ್ಜಿ ಕೊಟ್ಟು ರತಿಲನ ಸಾವು ಸಾವಲ್ಲ ಅದು ಒಂದು ಕೊಲೆ ಎಂದು ಹೇಳಿ ಬರುತ್ತಿದೆ.

ತಾನು ನಂಬಿದ ದೈವನ ಮೇಲೆ ನಂಬಿಕೆ ಇಟ್ಟಿರುವ ಮೃತ ರತಿಲ ಕುಮಾರನ ಕುಟುಂಬ ಕಳೆದ 8 ತಿಂಗಳಿಂದ ಅರ್ಜಿ ಹಿಡಿದು ಎಸ್ಪಿ, ಡಿಸಿ ಮತ್ತು ಸಚಿವ ಮಧು ಬಂಗಾರಪ್ಪನವರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸಿ ಬಂದಿದೆ. ಅದರಂತೆ ಇಂದು ಮತ್ತೆ ಎಸ್ಪಿ ಕಚೇರಿಗೆ ಬಂದ ಮೃತನ ಕುಟುಂಬ ಅಡಿಷನಲ್ ಎಸ್ಪಿ ಕರಿಯಪ್ಪರಿಗೆ ಮನವಿ ನೀಡಿ ಹೋಗಿದೆ.

2023 ರಂದು ಮೇ ತಿಂಗಳ 13 ನೇ ತಾರೀಕು ಭದ್ರಾವತಿಯ ರಾಮಮಂದಿರಲ್ಲಿ ಸ್ನೇಹಿತ ದರ್ಶನ್ ಎಂಬುವರ ಮದುವೆಗೆ ಹೋದ ಬಾಡಿಬಿಲ್ಡರ್ ರತಿಲ ಕುಮಾರ ಸಂಜೆಯಾದರೂ ಬಾರದ ಹಿನ್ನಲೆಯಲ್ಲಿ ಸಹೋದರಿ ದೀಪ್ತಿ ಆತನ ಮೊಬೈಲ್ ಗೆ ಕರೆ ಮಾಡಿದ್ದಾಳೆ.

ಆಗ ಸಿರಿಯೂರು ಗ್ರಾಮದ ನಿವಾಸಿಗಳು ಕರೆಯನ್ನ ಸ್ವೀಕರಿಸಿ ಚಾನೆಲ್ ಗೆ ತೆರಳಿದ ಕೆಲ ಯುವಕರು ಚಾನೆಲ್ ನ ದಂಡೆಯ ಮೇಲೆ ಬಟ್ಟೆ ಮತ್ತು ಮೊಬೈಲ್ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿ ಕರೆಯನ್ನ ಕಟ್ ಮಾಡಿರುತ್ತಾರೆ.

ತಕ್ಷಣ ರತಿಲ ಕುಮಾರನ ಕುಟುಂಬ ಚಾಲನೆಲ್ ಬಳಿ ಹೋದಾಗ ಸಹೋದರನ ಸ್ನೇಹಿತ ಪೃಥ್ವಿ ಇದ್ದಿದ್ದು ಚಾನೆಲ್ ನಲ್ಲಿ ಈಜಲು ರತಿಲ ಕುಮಾರ ಸ್ನೇಹಿತರೊಂದಿಗೆ ಅಂಜನ್, ಪ್ರತೀಕ್ ನೊಡನೆ ಬಂದಿದ್ದು, ನೀರಿನಲ್ಲಿ ಇಳಿದ ರತಿಲ ಕುಮಾರ ನಾಪತ್ತೆಯಾಗಿದ್ದನು ಎಂದು ತಿಳಿಸಿದ್ದಾನೆ. ಆದರೆ ಸ್ಥಳೀಯರ್ನ ವಿಚಾರಿಸಿದಾಗ‌ ಈಜಲು ಬಂದ ಯುವಕರು ಗಲಾಟೆ ಮಾಡಿಕೊಂಡು ಜೋರಾಗಿ ಕೂಗುತ್ತಿದ್ದರು ಎಂದು ತಿಳಿಸಿದ್ದಾರೆ.

ಸಿರಿಯೂರು ವೀರಾಪುರ ಗ್ರಾಮದ ಚಾನೆಲ್ ನಲ್ಲಿ ಅಗ್ನಿಶಾಮಕ ದಳ ಮತ್ತು ಸ್ನೇಹಿತ ಪ್ರವೀಣ್, ಚರಣ್, ರಾಕಿಯವರಿಗೆ ರತಿಲ ಕುಮಾರ ಶವವಾಗಿ ಪತ್ತೆಯಾಗಿದ್ದಾನೆ. ಪತ್ತೆಯಾಗುವ ಮುನ್ನಾ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.

ಆತನ ಕೈಗೆ ಹಾಕಿಸಲಾದ ಹಚ್ಚೆಯ ಮೇಲೆ ರತಿಲ ಕುಮಾರನ ಪತ್ತೆಯಾಗುತ್ತದೆ. ಮೃತನ ಮುಖವನ್ನ ತಿಂದು ಹಾಳಾಗಿವೆ. ಈ ಸಾವು ಅನುಮಾನದಿಂದ ಕೂಡಿದ್ದು ಈಜಲು ಕರೆದೊಯ್ದ ಸ್ನೇಹಿತರಿಂದ ಕೊಲೆಯಾಗಿದೆ ಎಂಬುದು ಅನುಮಾನವಿದೆ ತನಿಖೆ ನಡೆಸುವಂತೆ ಕೋರಿದ್ದಾರೆ.

ಇದನ್ನೂ ಓದಿ-https://suddilive.in/archives/7039

Related Articles

Leave a Reply

Your email address will not be published. Required fields are marked *

Back to top button