ರಾಜ್ಯ ಸುದ್ದಿಗಳು

ಜಿಲ್ಲೆಯಲ್ಲಿ ಪತ್ತೆಯಾದ ಕೊರೋನ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5 ಕ್ಕೆ ಏರಿದೆ. ಇದುವರೆಗೆ 207 ಜನರಿಗೆ ಕೊರೋನ ತಪಾಸಣೆ ನಡೆಸಿದ್ದು ಇದರಲ್ಲಿ ಐದು ಜನರಿಗೆ ಸೋಂಕು ಪತ್ತೆಯಾಗಿದೆ.

ನಿನ್ನೆ ಬೆಳಿಗ್ಗೆ ಓರ್ವರಿಗೆ ಸೋಂಕು ಪತ್ತೆಯಾಗಿತ್ತು. ನಂತರ ನಿನ್ನೆ ಮಧ್ಯಾಹ್ನಕ್ಕೆ ಮೂವರಿಗೆ ಸೋಂಕು ಪತ್ತೆಯಾಗಿದೆ. ಇಂದು ಓರ್ವರಿಗೆ ಪತ್ತೆಯಾಗಿದೆ. ಮೂವರು ಶಿವಮೊಗ್ಗದವರೇ ಆಗಿದ್ದು ಭದ್ರಾವತಿಯಲ್ಲಿ ಒಬ್ಬ ವೈದ್ಯರಿಗೆ ಕೊರೋನ ಕಾಣಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/5354

ಈ ಐವರಲ್ಲೂ ರೂಪಾಂತರಿ ತಳಿ ಪತ್ತೆಯಾಗಿಲ್ಲ. ಅನೇಕ ತಿಂಗಳ ಬಳಿಕ ಮತ್ತೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಿನ್ನೆ ನಾಲ್ವರಿಗೆ ಟ್ರಾವಲ್ ಹಿಸ್ಟರಿ ಇರಲಿಲ್ಲ. ಓರ್ವ ಕೇರಳದಿಂದ ಬಂದಿದ್ದು ಆತನಲ್ಲಿ ಕೊರೋನ ಪತ್ತೆಯಾಗಿದೆ. ಮತ್ತೋರ್ವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಈ ಕುರಿತು ಮಾಹಿತಿ ನೀಡಿರುವ ಡಿಹೆಚ್ ಒ ಡಾ.ರಾಜೇಶ್ ಸುರಗೀಹಳ್ಳಿ, ಕೊರೋನ ಸೋಂಕು ಪತ್ತೆಯಾದ ಐವರಲ್ಲಿ ಯಾವುದೇ ರೂಪಾಂತರ ತಳಿ JN.1 ಪತ್ತೆಯಾಗಿಲ್ಲ. ಇವರೆಲ್ಲರಿಗೂ ಎರಡು ಮೂರು ದಿನ ಹೋಮ್ ಐಸೋಲೇಷನ್ ಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373