ಕ್ರೈಂ ನ್ಯೂಸ್

ನಾಳೆಗೂ ಮುಂದುವರೆಯಲಿದೆ ಬಿಜಿಕೆ ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2007 ಮತ್ತು 2009 ರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಕ್ಸಲ್ ವಾದಿ ಬಿ.ಜಿ.ಕೃಷ್ಣಮೂರ್ತಿಯವರನ್ನ ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಬಸ್ ಮತ್ತು ಗೇಟು ಸುಟ್ಟುಹಾಕಿದ ಪ್ರಕರಣ ಹಾಗೂ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಕ್ಸಲ್ ವಾದಿ ಬಿಜಿ ಕೃಷ್ಣಮೂರ್ತಿ ಭಾಗಿಯಾಗಿದ್ದು ಇಂದು ಎರಡು ಪ್ರಕರಣ ಚಾರ್ಜ್ ಆಗಿದೆ. ನಾಳೆ ಮತ್ತೊಂದು ಪ್ರಕರಣ ವಿಚಾರಣೆ ನಡೆಯಲಿದೆ.

ಕ್ರೈಂ ನಂ 51/2009,174/2007 12/2009 ಪ್ರಕರಣದಲ್ಲಿ ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಮೂರು ಪ್ರಕರಣಗಳಲ್ಲಿ ಒಂದು ತೀರ್ಥಹಳ್ಳಿ ಮತ್ತು ಎರಡು ಪ್ರಕರಣ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಬಸ್ ಸುಟ್ಟ ಪ್ರಕರಣ ನಾಳೆ ವಿಚಾರಣೆ ನಡೆಯಲಿದೆ.

ಈ ಮೂರು ಪ್ರಕರಣದಲ್ಲಿ ಆಗುಂಬೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಆಗುಂಬೆಯಲ್ಲಿ ಅರಣ್ಯ ಇಲಾಖೆಯ ಗೇಟನ್ನ ಸ್ಪೋಟಿಸಿರುವ ಪ್ರಕರಣ ನಾಳೆ ವಿಚಾರಣೆ ನಡೆಯಲಿದೆ.
ಬಿದರಗೋಡಿನ ಅರುಣ್ ಮನೆಯ ದರೋಡೆ ಪ್ರಕರಣ, ಹೊಸಗದ್ದೆಯಲ್ಲಿ ಬಸ್ ಸುಟ್ಟುಹಾಕಿದ ಪ್ರಕರಣ ದಾಖಲಾಗಿತ್ತು.

2009 ರಲ್ಲಿ ದರೋಡೆ ಪ್ರಕರಣ ನಡೆದಿತ್ತು. 2009 ರಲ್ಲಿ ಅರಣ್ಯ ಇಲಾಖೆ ಗೇಟ ಸ್ಪೋಟಿಸಿದ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣದ ಚಾರ್ಜ್ ಆಗಿದೆ. ಮೂರನೇ ಪ್ರಕರಣದ ವಿಚಾರಣೆ ನಾಳೆಗೆ ನ್ಯಾಯಾಧೀಶರು ಮುಂದೂಡಿದ್ದರು.

ಮೂರನೇ ಪ್ರಕರಣ ಆಗುಂಬೆ ಬೆಂಗಳೂರು ಸರ್ಕಾರಿ ಬಸ್ ಸುಟ್ಟಿದ್ಧ ಪ್ರಕರಣವಾಗಿದೆ. ತೀರ್ಥಹಳ್ಳಿ ತಾಲೂಕಿನ ಹೊಸಗದ್ದೆ ಯಲ್ಲಿ 2007ರಲ್ಲಿ ಬಸ್ ನ್ನ ಸ್ಪೋಟಿಸಿರುವ ಪ್ರಕರಣದಲ್ಲಿ ಬಿಜಿಕೆ ಮೂರನೇ ಆರೋಪಿಯಾಗಿದ್ದಾರೆ. 62 ಕ್ಕೂ ಹೆಚ್ಚು ಪ್ರಕರಣಗಳು ಬಿಜಿಕೆ ಮೇಲೆ ದಾಖಲಾಗಿದೆ.
2021 ನವೆಂಬರ್ ನಲ್ಲಿ ಕೇರಳದಲ್ಲಿ ಬಿಜಿ ಕೃ್ಣಮೂರ್ತಿ ಬಂಧನ ಆಗಿತ್ತು.

ಬಿಗಿ ಪೊಲೀಸ್ ಬಂದೊಬಸ್ತ್ ನಲ್ಲಿ ಕೋರ್ಟ್ ಗೆ ಹಾಜರು ಪಡಿಸಲಾಗಿದ್ದುವಿಚಾರಣೆ ಮುಗಿದ ಬಳಿಕ ಮತ್ತೆ ಶಿವಮೊಗ್ಗ ಸೆಂಟ್ರೆಲ್ ಜೈಲಿಗೆ ಕೃಷ್ಣಮೂರ್ತಿಯನ್ನ ಪೋಲಿಸರು ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ-https://suddilive.in/archives/8061

Related Articles

Leave a Reply

Your email address will not be published. Required fields are marked *

Back to top button