ಸ್ಥಳೀಯ ಸುದ್ದಿಗಳು

ನೂತನ ಜಿಲ್ಲಾಧಿಕಾರಿಗಳ ಅಧಿಕಾರ ಸ್ವೀಕಾರ

ಸುದ್ದಿಲೈವ್/ಶಿವಮೊಗ್ಗ

ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ನಾರಾಯಣ ಹೆಗಡೆ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ವರ್ಗಾವಣೆ ಆದೇಶ ಹೊರಬಿದ್ದು ಎರಡು ದಿನಗಳ ನಂತರ ನೂತನ ಜಿಲ್ಲಾಧಿಕಾರಿಗಳು ಶಿವಮೊಗ್ಗ ಡಿಸಿಯಾಗಿ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಎಸ್ಪಿ ಮಿಥುನ್ ಕುಮಾರ್ ಮತ್ತು ಸಿಇಒ ಸುಧಾಕರ್ ಲೋಖಂಡೆ ಅವರೊಂದಿಗೆ ಕ್ಲೋಸ್ಡ್ ಡೋರ್ ನಲ್ಲಿ ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ನಂತರ ಸಂಘ ಸಂಸ್ಥೆಗಳು ನೂತನ ಜಿಲ್ಲಾಧಿಕಾರಿಗಳಿಗೆ ಹೂ ಗುಚ್ಛ ನೀಡಿದ್ದಾರೆ. ಸ್ವಾಗತಿಸಿದ್ದಾರೆ.

ಪಂಚ ಸಮಸ್ಯೆಗಳನ್ನ ಹೇಗೆ ಎದುರಿಸುತ್ತಾರೆ ಎಂಬುದೇ ಈಗಿನ ನೂತನ ಜಿಲ್ಲಾಧಿಕಾರಿಗಳ ಮುಂದೆ ಇರುವ ಸವಾಲಾಗಿದೆ. ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವುದು, ಹುಣಸೋಡು ಪ್ರಕರಣ, ಮರಳು ದಂಧೆ, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದು ಸಹ ನೂತನ ಜಿಲ್ಲಾಧಿಕಾರಿಗಳಿಗೆ ಸವಾಲಾಗಲಿದೆ. ಒತ್ತಡವನ್ನ ನಿಭಾಯಿಸುವುದು ಅವರಿಗೆ ಸವಾಲೇ ಸಹಿ.

ಈ ಹಿಂದಿನ ಇಬ್ಬರು ಜಿಲ್ಲಾಧಿಕಾರಿಗಳು ಮಾಧ್ಯಮದವರನ್ನ ಹೊರಗಿಟ್ಟೇ ಅಧಿಕಾರ ನಡೆಸಿದ್ದರು. ಈಗಿನ‌ ಜಿಲ್ಲಾಧಿಕಾರಿಗಳು ಏನು ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಅದರ ಜೊತೆಗೆ ಶಿವಮೊಗ್ಗ ನಗರವೇ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಇದನ್ನ ಹಿಂದಿನ ಜಿಲ್ಲಾಧಿಕಾರಿಗಳು ತುಂಬ ಸೂಕ್ಷ್ಮವಾಗಿಯೇ ನಿಭಾಯಿಸಿದ್ದರು. ಪತ್ರಕರ್ತರ ವಿಷಯವೊಂದು ಹೊರತು ಪಡಿಸಿ ಹಿಂದಿನ ಜಿಲ್ಲಾಧಿಕಾರಿಗಳು ಉತ್ತಮವಾಗಿಯೇ ಆಡಳಿತ ನೀಡಿದ್ದರು.

ಇದನ್ನೂ ಓದಿ-https://suddilive.in/archives/8057

Related Articles

Leave a Reply

Your email address will not be published. Required fields are marked *

Back to top button