ಕ್ರೈಂ ನ್ಯೂಸ್

ಪರಿಹಾರ ಮೊತ್ತ ಪಾವತಿಸುವಂತೆ ಇನ್ಶೂರೆನ್ಸ್ ಕಂಪೆನಿಗೆ ಆದೇಶ

ಸುದ್ದಿಲೈವ್/ಶಿವಮೊಗ್ಗ ಜ.16

ಅರ್ಜಿದಾರರಾದ ಸಿ.ಡಿ ರವಿರಾಜ್ ಇವರು ಹೆಚ್‍ಡಿಎಫ್‍ಸಿ-ಇಆರ್ಟಿಒ ಜನರಲ್ ಇನ್ಶೂರೆನ್ಸ್ ಕಂ.ಲಿ ಮುಂಬೈ ಮತ್ತು ಶಿವಮೊಗ್ಗ ವಿರುದ್ದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ವಿಮಾ ಮೊತ್ತ ನೀಡುವಂತೆ ಆಯೋಗದ ಪೀಠ ಆದೇಶಿಸಿದೆ.

ಅರ್ಜಿದಾರರು ಬಿಎಎಂಎಸ್ ವೈದ್ಯರಾಗಿದ್ದು ಹೆಚ್‍ಡಿಎಫ್‍ಸಿ-ಇಆರ್‍ಜಿಓ ಜನರಲ್ ಇನ್ಶೂರೆನ್ಸ್ ಕಂ.ಲಿ ಇವರಿಂದ ರೂ.6,00,000 ಪರಿಹಾರ ಮೊತ್ತವನ್ನು ಒಳಗೊಂಡ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು 2021 ರಲ್ಲಿ ಪಡೆದಿರುತ್ತಾರೆ.

ಅರ್ಜಿದಾರರು ದಿ: 02-08-2021 ರಂದು ಕೋವಿಡ್-19 ಗೆ ಒಳಗಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಚಿಕಿತ್ಸೆ ಒಟ್ಟು ಖರ್ಚು ರೂ.4,08,564 ಗಳಾಗಿದ್ದು ಚಿಕಿತ್ಸೆ ನಂತರ ಅರ್ಜಿದಾರರು ವಿಮಾ ಕಂಪೆನಿಯವರಲ್ಲಿ ವೈದ್ಯಕೀಯ ವೆಚ್ಚದ ಮರುಪಾವತಿ ಅರ್ಜಿ ಸಲ್ಲಿಸಿದಾಗ ಎದುರುದಾರರು ನಕಲಿ ದಾಖಲೆ ಸೃಷ್ಟಿಸಿ ತಪ್ಪಾಗಿ ನಿರೂಪಿಸದ್ದಾರೆಂದು ತಿಳಿಸಿ, ವಿಮಾ ಪರಿಹಾರ ನೀಡಲು ನಿರಾಕರಿಸಿದ್ದಲ್ಲದೆ, ವಿಮಾ ಪಾಲಿಸಿಯನ್ನು ಕೂಡ ರದ್ದು ಪಡಿಸಿರುತ್ತಾರೆ.

ಗ್ರಾಹಕರ ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಪಕ್ಷಗಾರರು ಹಾಜರುಪಡಿಸಿದ ಎಲ್ಲ ದಾಖಲೆಗಳನ್ನು, ಚಿಕಿತ್ಸೆ ಪಡೆದಂತಹ ವೈದ್ಯಕೀಯ ದಾಖಲೆಗಳನ್ನು ಅವಲಂಬಿಸಿ, ಎದುರುದಾರ ವಿಮಾಕಂಪೆನಿ ನಿರಾಕರಣೆಯು ಸೇವಾನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸುತ್ತದೆ.

ವಿಮಾ ಕಂಪೆನಿಯು ಈ ಆದೇಶವಾದ 45 ದಿನಗಳೊಳಗಾಗಿ ಅರ್ಜಿದಾರರು ಪಡೆದಿದ್ದ ಪಾಲಿಸಿಯನ್ನು ಪುನರುಜ್ಜೀವಗೊಳಿಸಬೇಕು ಹಾಗೂ ವಿಮಾ ಪರಿಹಾರ ಮೊತ್ತ ರೂ.4,08,165 ನ್ನು ವಾರ್ಷಿಕ ಬಡ್ಡಿ ಶೇ.9 ಸಮೇತ ಪಾವತಿಸತಕ್ಕದ್ದು ಮತ್ತು ರೂ.25,000 ಗಳನ್ನು ಮಾನಸಿಕ ಹಾನಿಗೆ ಪರಿಹಾರವಾಗಿ, ರೂ.10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ದಿ: 11-01-2024 ರಂದು ಆದೇಶಿಸಿರುತ್ತದೆ.

ಇದನ್ನೂ ಓದಿ-https://suddilive.in/archives/7000

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373