ಕ್ರೈಂ ನ್ಯೂಸ್

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ನಲ್ಲಿ ವಂಚನೆಯ ಆರೋಪ

ಸುದ್ದಿಲೈವ್/ಶಿರಾಳಕೊಪ್ಪ

ಪಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಲಿಮಿಟೆಡ್ ನ ಶಿರಾಳಕೊಪ್ಪ ಶಾಖೆಯ ಕೇಂದ್ರ ಮ್ಯಾನೇಜರ್ (ನಿರ್ವಹಣಾಧಿಕಾರಿ)ಯಿಂದಲೇ ವಂಚನೆ ನಡೆದಿದೆ ಎಂದು ಆರೋಪಿಸಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬ್ಯಾಂಕಿಂಗ್ ಕಾರ್ಯ ನಿರ್ವಹಿಸುತ್ತಿರುವ ಗುಜರಾತಿನ ಪಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಲಿಮಿಟೆಡ್ ( ಮೊದಲು ದಿಶಾ ಮೈಕ್ರೋಪಿನ್ ಪ್ರೈ.ಲಿ. ಎಂದು ನಂತರದ ದಿನಗಳಲ್ಲಿ ದಿಶಾ ಮೈಕ್ರೋಫಿನ್ ಲಿ ಎಂದು ಜನಪ್ರೀಯವಾಗಿತ್ತು) ನೊಂದಾಯಿತ ಶಾಖೆಯು ದೇಶದ ಕೆಲವು ರಾಜ್ಯಗಳಲ್ಲಿ ಶಾಖೆಗಳು ಹೊಂದಿದೆ.

ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹೆಚ್ 12 ಮಹಡಿ ರವಿ ಇಂಜಿನಿಯರ್ ಕಾಂಪ್ಲೆಕ್ಸ್ ಹೊಸ ಬಸ್ ನಿಲ್ದಾಣದ ಹಿಂದೆ ಶಿರಾಳಕೊಪ್ಪದಲ್ಲಿ ಶಾಖೆಯನ್ನು ಹೊಂದಿದೆ. ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸಲು ಆದಾಯ ಗಳಿಕೆಗೆ ಪೂರಕವಾಗಿರುವ ಚಟುವಟಿಕೆಗಳಿಗೆ ಸಣ್ಣ ಪ್ರಮಾಣದ ಸಾಲ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಸಾಲ ಮರುಪಾವತಿ ಕಂತನ್ನು ಪ್ರತಿ ತಿಂಗಳು ಸಾಲಗಾರ / ಜನರಿಂದ ಸ್ವೀಕರಿಸಿ ಅದನ್ನು ತಮ್ಮ ಶಾಖೆಗಳಲ್ಲಿ ಜಮೆ ಮಾಡುವುದು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಒಂದಾಗಿದೆ, ಈ ಕಾರ್ಯ ನಿರ್ವಹಣೆಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲುಕಿನ ನಿವಾಸಿ ಸುರೇಶ ಬಿನ್ ಚಿನ್ನಪ್ಪ ಸಾಲೇರ್ ಎಂಬುವವರನ್ನು ಶಿರಾಳಕೊಪ್ಪ ಶಾಖೆಯ ಕೇಂದ್ರ ಮ್ಯಾನೇಜರ್ (ನೀರ್ವಹಣಾಧಿಕಾರಿ)ಯಾಗಿ ದಿನಾಂಕ:06-09-2022 ರಂದು ನೇಮಕ ಮಾಡಲಾಗಿತ್ತು.

ಗ್ರಾಹಕರಿಗೆ ಸಾಲ ನೀಡುವ ಅವರಿಂದ ಮರು ಪಾವತಿ ಕಂತು ಮತ್ತು ಅವಧಿಪೂರ್ವ ಸಾಲ ಖಾತೆ ಮುಕ್ತಾಯದ ಶುಲ್ಕವನ್ನು ಸಂಗ್ರಹಿಸುವ ಜವಾಬ್ದಾರಿಗಳನ್ನು ಸುರೇಶ್ ವಹಿಸಿದ್ದರು.‌

ನಿರ್ವಾಹಣಾಧಿಕಾರಿ ಸುರೇಶ ಬಿನ್ ಚಿನ್ನಪ್ಪ ಸಾಲೇರ್ 26-05-2023 ರಿಂದ ಸಂಸ್ಥೆಗೆ ಹಾಜರಾಗದೆ. ಜೊತೆಗೆ ಗೈರು ಹಾಜರಿಗೆ ಸೂಕ್ತ ಕಾರಣ ವಿವರವನ್ನು ನೀಡದೆ ಮೊಬೈಲ್ ಪೋನ್ ನ್ನು ಸ್ವಿಚ್ಛ ಆಫ್ ಮಾಡಿಕೊಂಡಿರುವುದಾಗಿ ಫಿನ್ ಕೇರ್ ಫೈನಾನ್ಸ್ ನ ಮ್ಯಾನೇಜರ್ ರಾಘವೇಂದ್ರ ಕಂಬಳೆ ದೂರಿನಲ್ಲಿ ದಾಖಲಿಸಿದ್ದಾರೆ.

ದಿನಾಂಕ:26-06-2023 ರಂದು ನಡೆಸಿದ ಕ್ಷೇತ್ರ ಭೇಟಿ ದೃಢೀಕರಣದ ವೇಳೆ ಸುರೇಶ್ ಕೆಲವು ಗ್ರಾಹಕರಿಂದ ಹಣ ಸಂಗ್ರಹಿಸಿ ತಲೆ ಮರೆಸಿಕೊಂಡಿರುವ ವಿಷಯವನ್ನ ಗ್ರಾಹಕರ ಮೂಲಕ ತಿಳಿದು ಬಂದಿದೆ. ಸುರೇಶ ರವರು ಸಂಗ್ರಹಿಸಿ ಸಂಸ್ಥೆಗೆ ಜಮಾ ಮಾಡದಿರುವ ಅಂದಾಜು ಹಣ ರೂ 1.47.542 ರೂಗಳೆಂದು ಅಂತರಿಕ ತನಿಖೆ ವೇಳೆ ತಿಳಿದು ಬಂದಿದ್ದು,

ತಮ್ಮ ಸಂಸ್ಥೆಯು ತನಿಖೆ ಮುಂದುವರೆಸಲಿದ್ದು, ಬಾಹ್ಯ ತನಿಖೆ ಸಂಪೂರ್ಣಗೊಂಡ ನಂತರ ದುರ್ಬಳಕೆಯಾದ ನಿಖರ ಮೊತ್ತವು ತಿಳಿಯಲಿದೆ, ಸುರೇಶನು ತಮ್ಮ ಸಂಸ್ಥೆಗೆ ಮೋಸ ಮಾಡಿದ ಬಗ್ಗೆ ತಮ್ಮ ಬ್ಯಾಂಕಿನ ಮೇಲಿನ ಅಧಿಕಾರಿಗಳಾದ ಡಿವಿಜನ್ ಮ್ಯಾನೇಜರ್ ಮತ್ತು ರಿಜಿನಲ್ ಮ್ಯಾನೇಜರ್ ಆಡಿಟರ್ ಗಳಲ್ಲಿ ಚರ್ಚಿಸಿ ದೂರು ನೀಡಿರುವುದಾಗಿ ರಾಘವೇಂದ್ರ ಕಂಬಳೆ ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/7268

Related Articles

Leave a Reply

Your email address will not be published. Required fields are marked *

Back to top button