ಸ್ಥಳೀಯ ಸುದ್ದಿಗಳು

ಶಾಮನೂರು ಅವರೇ ಬಂದು ಸರಿ ಮಾಡುತ್ತಾರೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಮಂಡ್ಯ ಕೆರೆಗೋಡು ಪ್ರಕರಣದ ಕುರಿತು ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಪ್ರತಿಯೊಂದನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಸರ್ಕಾರಕ್ಕೆ ರಾಮಭಕ್ತರ ಶಾಪ ತಟ್ಟುತ್ತೆ ಎಂಬ ಆರ್ ಅಶೋಕ್ ಹೇಳಿಕೆ ನೀಡಿದ್ದು, ಯಾವ ರಾಮಂದು ? ಅಯೋಧ್ಯೆಯ ರಾಮನಾ, ಪ್ರತಿ ಊರಲ್ಲಿ ರಾಮನಿದ್ದಾನೆ. ಆರ್. ಅಶೋಕ್ ಗೆ ಮಾನ ಮರ್ಯಾದೆ ಇದೆಯಾ?ಅವರೇನು ರಾಮನನ್ನು ಅಡ ಇಟ್ಟು ಕೊಂಡಿದ್ದಾರಾ? ಎಂದು ಗರಂ ಆಗಿದ್ದಾರೆ.

ಮಾಜಿ ಡಿಸಿಎಂ ಹಾಗೂ ವಿಪಕ್ಷ ನಾಯಕರಾದವರಿಗೆ ಈ ರೀತಿ ಹೇಳಲು ನಾಚಿಕೆ ಆಗುವುದಿಲ್ಲವಾ?ಆರ್ ಅಶೋಕ್ ಹಿಂದೂ ವಿರೋಧಿ, ರಾಮನ ವಿರೋಧಿಯಾಗಿದ್ದಾರೆ. ಊರು ಊರುಗಳಲ್ಲಿ ರಾಮನಿದ್ದಾನೆ ಅಯೋಧ್ಯೆಗೆ 30% ಹೋಗದಿದ್ದವರು ರಾಮನ ವಿರೋಧಿಗಳಾ? ಎಂದು ಪ್ರಶ್ನಿಸಿದರು.

ರಾಜಕಾರಣದಲ್ಲಿ ಅಂಬೇಡ್ಕರ್ ಹೇಳಿಕೊಟ್ಟಿದ್ದನ್ನು ಮಾಡಬೇಕು. ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತೀರಾ? ಬಿಜೆಪಿಯವರು ಏನು ಸಾಧನೆ ಮಾಡಿದ್ದೀರಾ ಹೇಳಿ? ಬಿಜೆಪಿಯವರಿಗೆ ಮಾಡಲಿಕ್ಕೆ ಕೆಲಸ ಇಲ್ಲ ಅದಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಾರೆ ಎಂದು ದೂರಿದರು.

ಕಾಂತರಾಜ್ ಆಯೋಗದ ವರದಿ ಜಾರಿ ಕುರಿತು ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಿನ್ನೆ ಚಿತ್ರದುರ್ಗದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಕಾಂತರಾಜ ವರದಿ ಜಾರಿಮಾಡಿದರು.

ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯಲಿದೆ. ವರದಿಯ ಕುರಿತು ಕಾಂಗ್ರೆಸ್ ಸರ್ಕಾರ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಏಕವಚನದಲ್ಲಿ ಹೇಳಿದ ವಿಚಾರ ಸಿಎಂ ಸಿದ್ದರಾಮಯ್ಯ ಅವರ ಬಾಡಿ ಲ್ಯಾಂಗ್ವೇಜ್ ಅಗೌರವ ತರುವ ರೀತಿಯಲ್ಲಿ ಇರಲಿಲ್ಲ.

ಸಿಎಂ ಸಿದ್ದರಾಮಯ್ಯನವರ ಕಾಳಜಿಯನ್ನು ನೋಡಿ ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳಬಾರದು, ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಆದರೆ ಸಿದ್ದರಾಮಯ್ಯನವರ ಕಾಳಜಿಯ ಕುರಿತು ಯಾರು ಉತ್ತರ ಕೊಡುತ್ತಾರೆ? ಎಂದರು.

ಪಾರ್ಲಿಮೆಂಟ್ ಮತ್ತು ಅಯೋಧ್ಯ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಯವರನ್ನು ಆಹ್ವಾನ ಮಾಡಬೇಕಿತ್ತು. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಬಿಜೆಪಿ ಗೆಲ್ಲುವ ಹೇಳಿಕೆ ಬಗ್ಗೆ ನಮ್ಮ ತಂತ್ರಗಾರಿಕೆಯನ್ನು ಕೇಳಬೇಡಿ. ವಿಧಾನಸಭಾ ಚುನಾವಣೆಯಲ್ಲೂ 150 ಸ್ಥಾನ ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದ್ದರು ಆದರೆ ಗೆದ್ದಿದ್ದು 65 ಮಾತ್ರ ಎಂದು ವ್ಯಂಗ್ಯವಾಡಿದರು.

ರಾಮ ಮತ್ತು ಧರ್ಮವನ್ನು ಜಾತಿ ರಾಜಕಾರಣಕ್ಕೆ ತಂದು ಖಂಡನೆ ಮಾಡುತ್ತೇನೆ. ನಿತೀಶ್ ಕುಮಾರ್ ಪುನಃಎನ್ ಡಿ ಎ ಒಕ್ಕೂಟ ಸೇರ್ಪಡೆ ಇದು ಖಂಡಿತ ರಾಂಗ್ ಮೂವ್ ಎಂದಿರುವ ಸಚಿವರು,  ಸೆಟ್ ಬ್ಯಾಕ್ ಆಗಬಹುದು ಆದರೆ ಹೋರಾಟ ನಿಲ್ಲಿಸಲು ಬರುವುದಿಲ್ಲ ಎಂದರು. ಕಸ್ತೂರಿ ರಂಗನ್, ಶರಾವತಿ, ಭದ್ರಾ ಯೋಜನೆಗಳ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡುತ್ತೇವೆ. ಸುಮಲತಾ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರದಲ್ಲೂ ಪ್ರತಿಕ್ರಿಯಿಸಿರುವ ಸಚಿವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಲ್ಲಿ ಹೇಳಿದರೂ ಅಲ್ಲಿ ಹೋಗಿ ಕೆಲಸ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸಂಸದ ಬಿ ವೈ ರಾಘವೇಂದ್ರ ಪರ ಬ್ಯಾಟಿಂಗ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಇದನ್ನು ಶಾಮನೂರು ಅವರೇ ಬಂದು ಸರಿ ಮಾಡುತ್ತಾರೆ. ಎಂಬಿ ಪಾಟೀಲ್ ಅವರಿಗೆ ಯಡಿಯೂರಪ್ಪನವರು ಒಳ್ಳೆ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಎಂ.ಪಿ. ಪ್ರಕಾಶ್ ಅವರು ಜೆಡಿಎಸ್ ನಲ್ಲಿದ್ದ ನನ್ನನ್ನು ಮಧು ಬಂಗಾರಪ್ಪ ಗೆಲ್ಲಿಸಿ ಎಂದಿದ್ದರು. ಈಗ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಶಾಮನೂರು ಅವರೇ ಉತ್ತರ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು.

ಶಿವಮೊಗ್ಗ ರಾಜಕಾರಣಕ್ಕೂ ಅದಕ್ಕೂ ಯಾವುದೇ ಸಂಬಂಧ ಬರುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ.

ಈ ಹೇಳಿಕೆಯಿಂದ ಶಿವಮೊಗ್ಗ ರಾಜಕಾರಣ ಬದಲಾಗುತ್ತದೆ ಎಂದರೆ ಅದು 100% ರಾಂಗ್ ಎಂದರು.

ಇದನ್ನೂ ಓದಿ-https://suddilive.in/archives/7941

Related Articles

Leave a Reply

Your email address will not be published. Required fields are marked *

Back to top button