ಸ್ಥಳೀಯ ಸುದ್ದಿಗಳು

ಮಡಿವಾಳ ಮಾಚಿದೇವ ನೌಕರರ ಸಂಘ ಪದಾಧಿಕಾರಿಗಳ ಅವಿರೋಧ ಆಯ್ಕೆ

ಸುದ್ದಿಲೈವ್/ಶಿಕಾರಿಪುರ

ಸಂಘಟನೆ ಮತ್ತು ಸಮುದಾಯವನ್ನು ಬಲಪಡಿಸುವುದರ ಜೊತೆಗೆ ಹೊಸ ರೂಪರೇಷೆಗಳನ್ನು ಸಂಘಕ್ಕೆ ತುಂಬುವುದರ ಮೂಲಕ ಇನ್ನೂ ಹೆಚ್ಚಿನ ಸಂಘದ ಭದ್ರತೆ ಹೆಚ್ಚಿಸುವುದು ನಮ್ಮ ಧ್ಯೇಯವಾಗಿದೆ ಎಂದು ಮಡಿವಾಳ ಮಾಚಿದೇವ ನೌಕರರ ಸಂಘದ ಅಧ್ಯಕ್ಷರಾದ ರಾಜಶೇಖರ್ ಹೇಳಿದರು.

ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ ಎರಡನೇ ವಾರ್ಷಿಕ ಮಹಾಸಭೆಯ ಮತ್ತು ನೂತನ ಕಾರ್ಯಕಾರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘ ನಿರ್ವಹಣೆಯಲ್ಲಿ ನಿರ್ದೇಶಕರು ಮತ್ತು ಶೇರುದಾರರು ಹೆಚ್ಚಿನ ಪಾತ್ರ ವಹಿಸಿದ್ದು, ಪ್ರತಿ ಹಂತದ ಅಭಿವೃದ್ಧಿ ಹಾಗೂ ಸಂಘಟನೆಗೆ ಬುನಾದಿ ಆಗಿದ್ದಾರೆ ಎಂದು ಹೇಳಿದರು.
ಶೇರುದಾರರು ಮತ್ತೆ ಪುನಃ ನಮ್ಮನ್ನ ಐದು ವರ್ಷಗಳ ಕಾಲ ಕಾರ್ಯಕಾರಿ ಆಡಳಿತ ಮಂಡಳಿಯು ಮುಂದುವರಿಸಿ ಕೊಂಡು ಹೋಗಲು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಖಾಲಿ ಇದ್ದ ಎರಡು ನಿರ್ದೇಶಕರ ಸ್ಥಾನಗಳನ್ನು ಸಭೆಯಲ್ಲಿ ವಿಜಯ್ ಕುಮಾರ್ ಗಾಮ, ಜಗದೀಶ್ ಶಿಕ್ಷಕರು ಶಿರಾಳಕೊಪ್ಪ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ನೌಕರ ಸಂಘದ ಗೌರವ ಅಧ್ಯಕ್ಷರಾದ ಶಿವಪ್ಪ ಮಡಿವಾಳ ಮಾಚಿದೇವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಪ್ಪ ಹಾಗೂ ಉಪಾಧ್ಯಕ್ಷರಾದ ಆಂಜನೇಯ (ರುದ್ರಮನಿ ) ಹಾಗೂ ಮಡಿವಾಳ ಮಾಚಿದೇವ ನೌಕರರ ಸಂಘದ ಉಪಾಧ್ಯಕ್ಷರಾದ ದುರ್ಗಪ್ಪ ಖಜಾನ್ಸಿಯಾದ ಹಾಲೇಶಪ್ಪ ಕಾರ್ಯದರ್ಶಿಯಾದ ನಾಗರಾಜ್ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/3720

Related Articles

Leave a Reply

Your email address will not be published. Required fields are marked *

Back to top button