ಪತ್ರಕರ್ತ ಪಿ.ಅತ್ರಿ ಆತ್ಮಹತ್ಯೆ

ಸುದ್ದಿಲೈವ್/ಸಾಗರ

ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಕರ್ತ ಪಿ. ಆತ್ರಿ ತಮ್ಮ ಮುದ್ರಣ ಕಛೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಸಾಗರ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.
ಪಟ್ಟಣದ ಹಳೇ ಮಥುರ ಹೋಟೆಲ್ ನ ಮೇಲ್ಭಾಗದಲ್ಲಿದ್ದ ಕಚೇರಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪಿ ಅತ್ರಿ ಪತ್ತೆಯಾಗಿದ್ದು ಅವರ ಕುಟುಂಬ ಮತ್ತು ಆಪ್ತ ವಲಯದಲ್ಲಿ ತುಂಬಲಾಗದ ನಷ್ಟ ಉಂಟಾಗಿದೆ. ಇವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬರಬೇಕಿದೆ.
ಖ್ಯಾತ ಪತ್ರಕರ್ತ ಹಾಗೂ ಸಮಾಜಮುಖಿಯಾಗಿದ್ದ ಬಿ. ಆತ್ರಿ ನಮ್ಮನಗಲಿರುವುದನ್ನು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘ (ರಿ ) ಸಾಗರ ಶಾಖೆಯ ಅಧ್ಯಕ್ಷರಾದ ನಾಗೇಶ್, ಕಾರ್ಯದರ್ಶಿಯಾದ ಮಹೇಶ್ ಹೆಗಡೆ ಹಾಗೂ ಸಹ ಪದಾಧಿಕಾರಿಗಳು, ದಿನೇಶ್ ಡಿ, ಸಾಗರ ನಗರ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಗಿರೀಶ್ ಕೋವಿ, ತಾರಾಮೂರ್ತಿ, ಲಾರಿ ಗಂಗಣ್ಣ, ರಾಘವೇಂದ್ರ ಹಾಗೂ ಅಪಾರ ಸ್ನೇಹಿತರು, ಬಂದು ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/1552
