ಸ್ಥಳೀಯ ಸುದ್ದಿಗಳು

ಈ ಬಾರಿಯೂ ತನ್ನನ್ನೇ ಗೆಲ್ಲಿಸುವಂತೆ ಆಯನೂರು ಬಿರುಸಿನ ಮತಯಾಚನೆ

ಸುದ್ದಿಲೈವ್/ ಭದ್ರಾವತಿ ಜ 25

ಎಂಭತ್ತು ಸಾವಿರ ಮತದಾರರು , ಐದು ಜಿಲ್ಲೆ, ಮೂವತ್ತು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಮುಂಬರುವ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಯಾಗುತ್ತೀದ್ದು ಮತದಾರರು ತಮ್ಮ ನಂಬಿಕೆಯನ್ನು ಹುಸಿಗೊಳಿಸದೇ, ಕೈಹಿಡಿಯುವರು ಎಂಬ ಅಚಲ ವಿಶ್ವಾಸದೊಂದಿಗೆ ಚುನಾವಣೆ ಕಣಕ್ಕಿಳಿಯುತ್ತೀದ್ದೇನೆ. ತಮಗೆ ಮತ ನೀಡುವಂತೆ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ ಆಯನೂರು ಮಂಜುನಾಥ ಮನವಿ ಮಾಡಿದ್ದಾರೆ.

ಈ ಸಂಬಂಧ ಗುರುವಾರ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾವು ಈ ಹಿಂದೆ ಇದೇ ಕ್ಷೇತ್ರದಿಂದ ಅಭೂತಪೂರ್ವ ಅತ್ಯದಿಕ ಮತಗಳಿಂದ ವಿಜಯನಾಗಿದ್ದೇನೆ. ಕಾರಣ ಈ ಕ್ಷೇತ್ರದಲ್ಲಿ ತಾವು ಶಿಕ್ಷಕ, ಉಪನ್ಯಾಸಕ, ನೌಕರ, ಪದವೀದರರ ಸಂಕಷ್ಟಗಳಿಗೆ ಸ್ಪಂದಿಸಿರುವುದು,

ಸದನದಲ್ಲಿ ಹಠ ಹಿಡಿದು ವೇತನ ಗಳ ಶೇಕಡವಾರು ಗಳನ್ನು ಹೆಚ್ಚುವಲ್ಲಿ ಸಫಲತೆ ಹೊಂದಿದ್ದು, ಹಿಂದಿನ ಸರ್ಕಾರದಲ್ಲಿ ಅಗಿರುವ ವೇತನ ತಾರತಮ್ಯವನ್ನು ಈಗಿನ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಮನವಿ ಮಾಡಿದ್ದೇನೆ ಇದಕ್ಕೆ ಸರ್ಕಾರ ಸ್ಪಂದಿಸುವ ಭರವಸೆಯಿದೆ ಎಂದು ಮಂಜುನಾಥ್ ತಿಳಿಸಿದರು.

ರಾಜ್ಯದಲ್ಲಿ 2006 ರ ನಂತರ ಸರ್ಕಾರಿ ಸೇವೆಗೆ ಸೇರಿದ ಸುಮಾರು 2.5 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ನೂತನ ಪಿಂಚಣಿ ಯೋಜನೆಯಡಿ ನೇಮಕವಾಗಿದ್ದು, ನಿವೃತ್ತಿ ವೇತನದಿಂದ ವಂಚಿತರಾಗಿರುವ ಅನುದಾನಿತ ಮತ್ತು ಅರೆಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ಸಹಾ ಹಳೇ ಪದ್ಧತಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಸ್ವಪಕ್ಷದ ವಿರುದ್ಧವೇ ಹೋರಾಟ ನಡೆಸುವ ಮೂಲಕ ಒತ್ತಾಯಿಸುತ್ತಾ ಬಂದಿದ್ದೇನೆ ಎಂದರು.ತಮ್ಮ ವಿಜಯದ ನಂತರ ಪೋಲಿಸ್ ಇಲಾಖೆಯಲ್ಲಿ ಜಾರಿಯಾಗಲಿರುವ ಔರಾದ್ ಕರ್ ವರದಿ ಯಲ್ಲಿ ಬಡ್ತಿ ಹೊಂದುವ ಅಧಿಕಾರಿಗಳ ವೇತನದಲ್ಲಿ ಕಡಿತಗೊಳಿಸಲಾಗುವುದು, ಇದನ್ನು ಸರಿಪಡಿಲು ಹಾಲಿ ಇರುವ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ ಉಳಿದ ಎಂಟು ಗಂಟೆ ಕಾರ್ಮಿಕನ ನಿತ್ಯ ಕೆಲಸಗಳು ಎಂಬ ನಿಯಮವನ್ನು ಈ ಹಿಂದಿನ ಬೊಮ್ಮಯಿ ಅಳ್ವಿಕೆಯ ಭಾಜಾಪ ಸರ್ಕಾರ ನಿಯಮವನ್ನು ಮುರಿದು ಹನ್ನೇರಡು ಘಂಟೆ ಉದ್ಯೋಗ, ಉಳಿದ ಹನ್ನೇರಡು ಘಂಟೆಯಲ್ಲಿ ವಿಶ್ರಾಂತಿ ಮತ್ತು ಕಾರ್ಮಿಕನ ನಿತ್ಯ ಕೆಲಸಗಳನ್ನು ನಿರ್ವಹಿಸಲಿ ಎಂಬ ಅವೈಜ್ಞಾನಿಕ ನಿಯಮವನ್ನು ಜಾರಿಗೊಳಿಸಿದೆ, ಈ ನಿಯಮವನ್ನು ಸಹಾ ಸರಿಪಡಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದರು.

ಪದವಿಧರ ನೌಕರರು, ಸ್ವಯಂ ಉದ್ಯೋಗಿ ಮತ್ತು ನಿರುದ್ಯೋಗಿ ಪದವಿಧರರ ಪರವಾಗಿ ಸದನದಲ್ಲಿ ಧ್ವನಿಯಾಗಲು ಪದವಿಧರ ಮತದಾರರ ಮತವನ್ನು ಯಾಚಿಸುತ್ತಿರುವುದಾಗಿ ಮಂಜುನಾಥ ಮನವಿ ಮಾಡಿದರು.

ಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಕೆಂಚೆನಹಳ್ಳಿ ಕುಮಾರ್, ನಗರಸಭಾ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಕೆ.ಪಿ.ಸಿ.ಸಿ. ಸದಸ್ಯ ನಾಗಣ್ಣ, ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಕೆ. ಮೋಹನ್, ಮುಖಂಡ ಮಣಿಶೇಖರ್, ನಗರಸಭಾ ಸದಸ್ಯ ಚನ್ನಪ್ಪ ಇದ್ದರು.

ಇದನ್ನೂ ಓದಿ-https://suddilive.in/archives/7693

Related Articles

Leave a Reply

Your email address will not be published. Required fields are marked *

Back to top button