ಸ್ಥಳೀಯ ಸುದ್ದಿಗಳು

ಗಾಂಜಾ ರೈಡ್

ಸುದ್ದಿಲೈವ್/ಶಿವಮೊಗ್ಗ

ಮಾದಕ ವಸ್ತು ಗಾಂಜಾ ನಿಯಂತ್ರಣಕ್ಕಾಗಿ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ಕಾರ್ಯಾಚರಣೆಯನ್ನ ಕೈಗೊಂಡಿದ್ದಾರೆ. ಅದರ ಹಿನ್ನಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ.

ಈತನಿಂದ 28 ಸಾವಿರ ರೂ. ಮೌಲ್ಯದ 680 ರೂ. ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಶಕ್ತಿಧಾಮ ಲೇಔಟ್ ನಲ್ಲಿ ಮರಾಠಿ ಕ್ಯಾಂಪ್ ನ ನಾಗರಾಜ್ (38) ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ.

ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಉಪಾಧೀಕ್ಷಕರಾದ ಸುರೇಶ್ ನೇತೃತ್ವದಲ್ಲಿ ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್, ಪಿಎಸ್ಐ ಕುಮಾರ್ ಕೂರಗುಂದ ಮತ್ತು ಸಿಬ್ಬಂದಿಗಳು ಸ್ಥಳಕ್ಜೆ ತೆರೀ ತಪಾಸಣೆ ನಡೆಸಿದ್ದಾರೆ.‌

ಈ ವೇಳೆ ಚೋರಡಿಯ ಮರಾಠಿ ಕ್ಯಾಂಪ್ ನ ನಾಗರಾಜ್ ಎಂಬಾತ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಆತನನ್ನ ಬಂಧಿಸಿ, ಗಾಂಜಾವನ್ನ ಸೀಜ್ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/5651

Related Articles

Leave a Reply

Your email address will not be published. Required fields are marked *

Back to top button