ಸ್ಥಳೀಯ ಸುದ್ದಿಗಳು

ಸಿಗಂದೂರು : ನವರಾತ್ರಿ ಉತ್ಸವಕ್ಕೆ ಚಾಲನೆ

ಸುದ್ದಿಲೈವ್/ಸಾಗರ

ತಾಲ್ಲೂಕಿನ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮೊದಲ ದಿನದ ನವರಾತ್ರಿ ಉತ್ಸವ ಅದ್ದೂರಿಯಾಗಿ ನೇರವೇರಿತು.

ನವರಾತ್ರಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸೋಲೂರು ಈಡೀಗ ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಧರ್ಮ ಕಾರ್ಯಗಳು ತಡೆ ಇಲ್ಲದೆ ನೆಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ, ಆಂತರಂಗದ ಶುದ್ದಿಯೊಂದಿಗೆ ಮಾಡುವ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಿಗಂದೂರು ದೇವಾಲಯ ಇಂದು ರಾಷ್ಟ್ರ ವ್ಯಾಪಿಯಾಗಿ ಪ್ರಸಿದ್ಧಿ ಪಡೆಯಲು ಧರ್ಮದರ್ಶಿ ಎಸ್ ರಾಮಪ್ಪ ಅವರ ಕೊಡುಗೆ ಅಪಾರ ಎಂದು ಹೇಳಿದರು.

ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ಪ್ರಾತಃ ಕಾಲ 04 ಗಂಟೆಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಿತು. ಬೆಳಿಗ್ಗೆಯಿಂದಲೇ ದೇವಿಗೆ ಪಂಚಾಮೃತ ಅಭಿಷೇಕ. ಮಹಾಭಿಷೇಕ. ಅರ್ಚನೆ ನೇರವೇರಿತು. ಪ್ರಾತಃ ಕಾಲ ಪೂಜೆಯಲ್ಲಿ ಅನುವಂಶಿಕ ಧರ್ಮದರ್ಶಿ ಎಸ್ ರಾಮಪ್ಪ ಗರ್ಭಗುಡಿ ಪ್ರವೇಶದ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಚಂಡಿಕಾ ಹೋಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಎಲ್ಲಾ ಕಾರ್ಯಕ್ರಮಗಳು ಧರ್ಮಾಧಿಕಾರಿ ಡಾ ಎಸ್ ರಾಮಪ್ಪ ನವರ ನೇತೃತ್ವದಲ್ಲಿ ನೆಡೆಯಿತು.

ಮೊದಲ ದಿನದ ಶರವನ್ನವರಾತ್ರಿ ಉತ್ಸವವನ್ನು ಆದಾಯ ತೆರಿಗೆ ಇಲಾಖೆ ಮೇಲ್ಮನವಿ ಮಂಡಳಿ ಸದಸ್ಯ, ಜಿ ಮಂಜುನಾಥ ಚಾಲನೆ ನೀಡಿ ಮಾತನಾಡಿದರು ಸಿಗಂದೂರು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ ಎಸ್ ರಾಮಪ್ಪ ವಹಿಸಿ ನೆರೆದಿದ್ದ ಭಕ್ತರಿಗೆ ನವರಾತ್ರಿ ಶುಭಾಶಯ ಕೋರಿದರು.
ಸಂಜೆ ದೀಪೋತ್ಸವ ಕಾರ್ಯಕ್ರಮ ನೆಡೆಯಿತು, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವೇಳೆ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ಇದ್ದರು.

ಇದನ್ನೂ ಓದಿ-https://suddilive.in/archives/1311

Related Articles

Leave a Reply

Your email address will not be published. Required fields are marked *

Back to top button