ಶೈಕ್ಷಣಿಕ ಸುದ್ದಿಗಳು

ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಮತ್ತು ಶಾಲಾಭಿಮಾನಿಗಳ ಪುನರ್ಮಿಲನ

ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇಯ ವಿದ್ಯಾರ್ಥಿಗಳ ಮತ್ತು ಶಾಲಾಭಿಮಾನಿಗಳ ಪುನರ್ಮಿಲನ- ಶಾಲಾ ಆವರಣದಲ್ಲಿ ಡಿ.22 ರಂದು ಸೋಮವಾರ ಸಂಜೆ 6ಗಂಟೆಗೆ ನಡೆಯಲಿದೆ.‌

ಸುದ್ದಿಲೈವ್/ತೀರ್ಥಹಳ್ಳಿ

ತಾಲೂಕಿನ ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 70 ವಸಂತಗಳನ್ನು ಪೂರೈಸಿದೆ. 2019-20ನೇ ಸಾಲಿನಿಂದ ಸರ್ಕಾರಿ ಶಾಲೆಯ ಅಬ್ಯುದಯಕ್ಕಾಗಿ ಹಾಗೂ ಬದಲಾದ ಶೈಕ್ಷಣಿಕ ಚಿಂತನೆಯಿಂದ ಶಾಲೆಯಲ್ಲಿ ಪೋಷಕರ ಸಹಕಾರದಿಂದ ಎಲ್ ಕೆ ಜಿ, ಯು ಕೆ ಜಿ ತರಗತಿ ಆರಂಭಿಸಿ ಶಾಲೆಯ ದಾಖಲಾತಿ ಹೆಚ್ಚಿಸಲಾಗಿದೆ. ನಾವಿನ್ಯತೆ ಚಟುವಟಿಕೆ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡಲು ಸ್ಮಾರ್ಟ್ ಕ್ಲಾಸ್ ತರಗತಿ ಆರಂಭಿಸಲಾಗುತ್ತಿದೆ.

2021-22ನೇ ಸಾಲಿನಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಬದಲಾದ ಸನ್ನಿವೇಶಗಳು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕಾ ವಾತಾವರಣ ನಿರ್ಮಾಣ ಮಾಡುವ ನಮ್ಮ ಪ್ರಯತ್ನ ನಿರಂತರವಾಗಿದೆ. ಈ ಹಿನ್ನೆಲೆಯಲ್ಲಿ ದಾನಿಗಳಿಂದ ನಿರ್ಮಿಸಿರುವ ನೂತನ ಎರಡು ಕೊಠಡಿಯನ್ನು ಶೃಂಗೇರಿ ಕ್ಷೇತ್ರದ ಪರಮ ಪೂಜ್ಯ ಜಗದ್ಗುರುಗಳಾದ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಜ.31 ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ಆಶೀರ್ವಾದದೊಂದಿಗೆ ಲೋಕಾರ್ಪಣೆ ಮಾಡಲಿದ್ದಾರೆ.

ಹಾಗೂ ಇದೇ ದಿನ ಮಧ್ಯಾಹ್ನ 3.30ಕ್ಕೆ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪನವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಲೆಯ ವಿವೇಕಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ತೀರ್ಥಹಳ್ಳಿ ವಿಧಾನ ಸಭಾ ಸದಸ್ಯರು ಹಾಗೂ ಮಾಜಿ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಈ ಹಿನ್ನಲೆಯಲ್ಲಿ ಜ.22 ರಂದು ಸಂಜೆ ಹಳೇಯ ವಿದ್ಯಾರ್ಥಿಗಳ ಮತ್ತು ಶಾಲಾಭಿಮಾನಿಗಳ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ನೀವೂ ಬನ್ನಿ ಮತ್ತು ಶಾಲಾಭಿಮಾನಿಗಳನ್ನ ಕರೆತನ್ನಿ

ಇದನ್ನೂ ಓದಿ-https://suddilive.in/archives/7299

Related Articles

Leave a Reply

Your email address will not be published. Required fields are marked *

Back to top button