ಶೈಕ್ಷಣಿಕ ಸುದ್ದಿಗಳು

ಜ್ಞಾನದೀಪ ಶಾಲೆಗೆ 25 ರ ಸಂಭ್ರಮ

ಸುದ್ದಿಲೈವ್/ಶಿವಮೊಗ್ಗ

ಜಾವಳ್ಳಿಯಲ್ಲಿರುವ ಜ್ಞಾನದೀಪ ಶಾಲೆಗೆ 25 ರ ಬೆಳ್ಳಿ ಹಬ್ಬದ ಸಂಭ್ರಮ, 1999 ರಲ್ಲಿ ಆರಂಭವಾದ ಶಾಲೆಗೆ ಈಗ 25 ವರ್ಷ ತುಂಬಿದೆ.

ಮಲೆನಾಡಿನ ಮಕ್ಕಳಿಗೆ ಸಿಬಿಎಸ್ ಇ ಶಿಕ್ಷಣ ನೀಡಲು ಮುಂದಾದ ಸಮಾನ ಮನಸ್ಕರ ಗುಂಪು ಕೂಡ್ಲಿಯ ಜಾವಳ್ಳಿಯಲ್ಲಿ ಜಾಗದೊರೆತು ಇಂದು ಇಂತಿಹಾಸ ನಿರ್ಮಿಸಿದೆ. ಡಿವಿಎಸ್, ಎನ್ ಇಎಸ್ ಶಾಲೆಗಳು ಆಗಿನ ಕಾಲದಲ್ಲಿ ಮುಂಚೂಣಿಯಲ್ಲಿತ್ತು.

ಇಬ್ರಾಹಿಂ ಸಾಹೇಬರು ಫೌಂಡರ್ ಆಗಿದ್ದರು. ಜ್ಞಾನದೀಪ ಕೇಂದ್ರೀಯ ವಿದ್ಯಾಲಯ 36 ಜನರ ವಿದ್ಯಾರ್ಥಿಗಳಿಂದ ಶಾಲೆ ಆರಂಭವಾಗಿದೆ. 36 ಜನರ ಫೌಂಡರ್ ನ ಮಕ್ಕಳಿಂದ 145 ಸಂಖ್ಯೆಗೆ ಏರಿದೆ ಪ್ರತಿವರ್ಷ 250 ವಿದ್ಯಾರ್ಥಿಗಳು ಪ್ರತಿ ವರ್ಷ ಸೇರುತ್ತಿದ್ದಾರೆ. ಎನ್ ಇಪಿ ಜಾರಿಗೊಂಡ ಕಾರಣ ಮೂರು ಕಡೆ ಫ್ರೀಸ್ಕೂಲ್  ಆರಂಭಿಸಲಾಗಿದೆ

ಚನ್ನಗಿರಿ, ವಿನೋಬ‌ನಗರ ಮತ್ತು‌ ಭದ್ರಾವತಿಯಲ್ಲಿ ಆರಂಭಿಸಲಾಯಿತು ನಾಲ್ಕನೇ ಫ್ರೀಸ್ಕೂಲ್ ಆರಂಭಿಸಲಾಗಿದೆ 2500 ವಿದ್ಯಾರ್ಥಿಗಳು ಈಗ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಿಸಲಾಗಿದೆ.

ಶಾಲೆಯ ಬೆಳ್ಳಿ ಹಬ್ಬ  ಡಿ.11 ರಿಂದ 17 ರವರೆಗೆ ನಡೆಯಲಿದೆ. ಕೂಡ್ಲಿಯ ಶಂಕರಾಚಾರ್ಯ ಮಹಾಸಂಸ್ಥಾನದ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಬೆಳ್ಳಿ ಹಬ್ವದಲ್ಲಿ ವಸ್ತುಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯವ್ಯಕ್ತಿಗಳು ಆಗಮಿಸಲಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಹೆಗ್ಡೆ ತಿಳಿಸಿದರು.

ಇದನ್ನೂ ಓದಿ-https://suddilive.in/archives/4449

Related Articles

Leave a Reply

Your email address will not be published. Required fields are marked *

Back to top button