ರಾಜಕೀಯ ಸುದ್ದಿಗಳು

ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಸಮಾಧಾನ

ಸುದ್ದಿಲೈವ್/ಶಿವಮೊಗ್ಗ

ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರನ್ನ ನೇಮಿಸಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ. ನಿಗಮ ಮಂಡಳಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದಿರುವುದು  ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಬೇಸರ ವ್ಯಕ್ತಪಡಿಸಲಾಗಿದೆ.

ಈ ಕುರಿಸು ಸುದ್ದಿಗೋಷ್ಠಿ ನಡೆಸಿದ ಮಾಜಿ ಕಾರ್ಪರೇಟರ್ ಅಸೀಫ್ ಮಸೂದು, ಮುಸ್ಲೀಂ ಮುಖಂಡರಿಗೆ ಜಿಲ್ಲೆಯಲ್ಲಿ ಒಂದು ನಿಗಮ ಮಂಡಳಿ ನೀಡಲಾಗುತ್ತಿಲ್ಲ. ಅದರಲ್ಲೂ ಸೂಡಾ ಅಧ್ಯಕ್ಷ ಸ್ಥಾನವನ್ನ‌ ನೀಡಲು ಪಕ್ಷದ ಜಿಲ್ಲಾ ಮುಖಂಡರು ವಾಗ್ದಾನ ಮಾಡಿದ್ದರು. ಜಿಲ್ಲಾಧ್ಯಕ್ಷ ಮತ್ತು‌ಹೆಚ್  ಸಿ ಯೋಗೀಶ್ ವಾಗ್ದಾನ ಮಾಡಿದ್ದರು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಿಗಮ ಮಂಡಳಿಗೆ ಐದು ಸ್ಥಾನ  ನೀಡಲಾಗುತ್ತಿದೆ. ಆದರೆ ಐದರಲ್ಲೂ ಮುಸ್ಲೀಂ ಸಮುದಾಯಕ್ಕೆ ಕೊಡಲಾಗುತ್ತಿಲ್ಲ. ಇನ್ನೂ ಅನೌನ್ಸ್ ಮಾಡಿಲ್ಲ. ಆದರೆ ಪಕ್ಷದ ಮೂಲಗಳು ಇದೇ ಸಾಂಭವನೀಯ ಪಟ್ಟಿಯೆಂದು ತಿಳಿದುಬಂದಿಧ. ಸಮುದಾಯವನ್ನ‌ ಪರಿಗಣಿಸದಿದ್ದರೆ ಸಮುದಾಯ ಮುಂದಿನ ದಿನಗಳಲ್ಲಿ ನಿರ್ಧಾರಿಸಲಿದೆ. ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

2023 ರಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲೀಂ ಗೆಲ್ಲಲು ಅನುಕೂಲವಿದೆ. ಇದು ಬ್ಲಾಕ್ ಮೇಲ್ ಅಲ್ಲ ಆದರೆ ಇದು ಮುಸ್ಲೀಂ ಸಮುದಾಯದ ಹಕ್ಕೋತ್ತಾಯವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮನವಿ ಮಾಡಿಕೊಂಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಫ್ತಾಬ್ ಪರ್ವೇಜದ, ವಕೀಲರಾದ ನಯಾಜ್ ಅಹಮದ್, ಮುಹಿಬ್,ಮುನ್ನಾ, ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7160

Related Articles

Leave a Reply

Your email address will not be published. Required fields are marked *

Back to top button