ರಾಜಕೀಯ ಸುದ್ದಿಗಳು

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಪಕ್ಷಗಳ ಟಿಕೇಟ್ ಘೋಷಣೆಗಳ ಮಹಾಪರ್ವ‌ಮುಂದುವರೆದಿದೆ. ಬಿಜೆಪಿ ಕರ್ನಾಟಕವನ್ನ ಹೊರತು ಪಡುಸಿ 543 ರಲ್ಲಿ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ.

ಈಗ ಕಾಂಗ್ರೆಸ್ ಸಹ ತನ್ನ ಮೊದಲ‌ಪಟ್ಟಿ‌ ಬಿಡುಗಡೆ ಮಾಡಿದ್ದು, 39 ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ಬಿಡಯಗಡೆ ಮಾಡಿದ್ದು ಕರ್ನಾಟಕದಲ್ಲಿ 6 ಕ್ಷೇತ್ರಗಳಲ್ಲಿ ಘೋಷಣೆಯಾಗಿದೆ.

ಅದರಂತೆ ಮಾಜಿ ಮುಖ್ಯಮಂತ್ರಿ‌ ಅವರ ಪುತ್ರಿ ಹಾಗೂ ಹಾಲಿ ಸಚಿವರ ಗೀತಾ ಶಿವರಾಜ್ ಕುಮಾರ್ ಅವರ ಹೆಸರು ಮೊದಲಪಟ್ಟಿಯಲ್ಲಿ ಘೋಷಣೆಯಾಗಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಬಿಜೆಪಿಯ ಎರಡನೇ ಪಟ್ಟಿ ಬಿಡುಡೆಯಾಗಬೇಕಿದೆ. ಅಂದುಕೊಂಡಂತೆ ಹೆಸರುಗಳ ಪಟ್ಟಿ ಬಿಡುಗಡೆಯಾದಲ್ಲಿ, ಸಂಸದ ರಾಘವೇಂದ್ರ ಅವರ ಹೆಸರು ಪ್ರಕಟವಾಗಲಿದೆ. ಇದರಿಂದ ಇಬ್ಬರು ಮಾಜಿ ಸಿಎಂ ಮಕ್ಕಳು ಶಿವಮೊಗ್ಗ ಕ್ಷೇತ್ರದಿಂದ ಎದುರಾಳಿಯಾಗಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ‌ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/10338

Related Articles

Leave a Reply

Your email address will not be published. Required fields are marked *

Back to top button