ರಾಷ್ಟ್ರೀಯ ಸುದ್ದಿಗಳು

ಮೀಡಿಯಾದ ಬೆನ್ನಿಗೆ ನಿಂತ ರಾಘಣ್ಣ-ಪ್ರತಿಭಟನಾಕಾರರಿಗೆ ಎಳ್ಳುಬೆಲ್ಲ ಬೀರಿದ ಸಂಸದರು ಮತ್ತು ಶಾಸಕರು

ಸುದ್ದಿಲೈವ್/ಶಿವಮೊಗ್ಗ

ವಿಐಎಸ್ ಎಲ್ ಕಾರ್ಖಾನೆ ಮುಚ್ಚುವುದನ್ನ ತಪ್ಪಿಸಿ ಕಾರ್ಮಿಕರಿಗೆ 26 ದಿನಗಳ ಕೆಲಸ ಕೊಡಿ ಎಂಬ ಬೇಡಿಕೆಗಳ ಮುಂದಿಟ್ಟು ಸಂಸದರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದ ಕಾರ್ಖಾನೆಯ ಕಾರ್ಮಿಕರಿಗೆ ಎಂಪಿ ರಾಘವೇಂದ್ರ ಎಳ್ಳು ಬೆಲ್ಲ ಹಂಚಿದ್ದಾರೆ. ಜೊತೆಗೆ ಶಾಸಕ ಚೆನ್ನಬಸಪ್ಪ ಸಾಥ್ ನೀಡಿದ್ದಾರೆ.

ವಿಐಎಸ್ ಎಲ್ ಕಾರ್ಖಾನೆಯನ್ನ ಮುಚ್ಚದಂತೆ ಸತತ ಹೋರಾಟವನ್ನ ಮಾಡಿಕೊಂಡು ಬಂದಿದ್ದೇನೆ. 2022 ರಿಂದ ಕಾರ್ಖಾನೆ ಮುಚ್ಚದಂತೆ ದೆಹಲಿ ನಾಯಕರನ್ನ ಭೇಟಿಯಾಗಿ ನಿಮ್ಮ ಜೊತೆ ನಿಂತಿದ್ದೇನೆ ಎಂದು ಸಂಸದ ರಾಘವೇಂದ್ರ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.

ಚೇರಿನ ಮೇಲೆ‌ನಿಂತು ಮೈಕ್ ಹಿಡಿದ ಸಂಸದರು ಕಾರ್ಮಿಕರಿಗೆ   ಕಾರ್ಖಾನೆ ಮುಚ್ಚದಂತೆ ತಡೆಹಿಡಿದ್ದೇನೆ. ನೀವು ಏನು ಹೇಳಲಿ ಅಥವಾ‌ ಬಿಡಲಿ ದೆಹಲಿಗೆ ಹೋದಾಗಲೆಲ್ಲಾ ವಿಐಎಸ್ ಎಲ್ ಕಾರ್ಖಾನೆಯನ್ನ ಮುಂದು ವರೆಸಿಕೊಂಡು ಹೋಗುವಂತೆ ನಿರಂತರ ಪ್ರಯತ್ನದಲ್ಲಿ ನಾನಿದ್ದೇನೆ ಎನ್ನುವ ಮೂಲಕ ಪ್ರತಿಭಟನಾಕಾರರಿಗೆ ಮನಮುಟ್ಟುವಂತೆ ತಿಳಿಸಿದರು.

ಆದರೂ ಕೆಲ ಕಾರ್ಮಿಕರು ಸಂಸದರ ಮಾತನ್ನ‌ ಆಲಿಸಿ ಮತ್ತೆ ನ್ಯಾಯಬೇಕು ಎಂದರೆ ಕೆಲ ಮಹಿಳಾ ಕಾರ್ಮಿಕರು ನಿಮ್ಮ ಪಾದಮುಟ್ಟಿ ಹೇಳುತ್ತೇವೆ ಕಾರ್ಖಾನೆಯನ್ನ ನಿರಂತರವಾಗಿ ಮತ್ತೆ ಆರಂಭಿಸಿಕೊಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳುವ ದೃಶ್ಯಗಳು ಲಭ್ಯವಾಗಿದೆ.

ಕೆಲ ಕಾರ್ಮಿಕರು ಮಾ.31 ಕ್ಕೆ ಕಾರ್ಖಾನೆಗೆ ಕೊನೆಯ ಮೊಳೆ ಹೊಡೆದು‌ ಮುಚ್ಚುವ ಕೆಲಸ ಆಗುತ್ತಿದೆ ಎಂಬ ವಿಷಯವನ್ನೂ ಸಂಸದರ ಗಮನಕ್ಕೆ ತಂದಿದ್ದಾರೆ. ಈ ವಿಷಯದ ಬಗ್ಗೆ ಕೂಲಂಕುಷವಾಗಿ ತಿಳಿದು ಮುಚ್ಚದಂತೆ ತಡೆಹಿಡಿಯುವೆ ನಾಳೆ ಮತ್ತೆ ದೆಹಲಿಗೆ ತೆರಳಿ ಸಂಬಂಧ ಪಟ್ಟ ಅಧಿಕಾರಿಯನ್ನ ಭೇಟಿ ಮಾಡಿ ನಾಳೆಯೇ ಸಿಹಿ ಸುದ್ದಿಕೊಡುವೆ ಎಂದು ಹೇಳಿದರು.

ಖಾಸಗಿ ಬಂಡವಾಳ ಹೂಡಿಕೆಯ ಟೆಂಡರ್ ಪ್ರೋಸೆಸ್ ಬಗ್ಗೆ ಕೇಂದ್ರ ಸರ್ಕಾರ ಹಿಂಪಡೆಯುವುದಾಗಿ ಹೇಳಿದೆ. ಈಗಿನ ಸ್ಥಿತಿಯನ್ನ ಮುಂದುವರೆಸುವುದಾಗಿ ಕೇಂದ್ರ ಪತ್ರ ಬರೆದಿದೆ. ಇಷ್ಟಾದರೂ ನಿಮಗೆ ಅನಿಸಬೇಕಿತ್ತು. ಬಾಗಿಲು ಹಾಕಲು ಹೊರಟ ಸಂದರ್ಭದಲ್ಲಿ ತಡೆಹಿಡಿದು ಕಾರ್ಖಾನೆ 12-15 ದಿನ ರನ್ ಮಾಡುವಂತೆ ಸಂಸದರು ಮಾಡಿದ್ದಾರೆ ಎಂದು  ಹೇಳಿದರು.

ನಾಳೆ ಜ.16 ರಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಚಿವ ಪ್ರಹ್ಲಾದ್ ಜೋಷಿಯವರ ಜೊತೆ ಗೃಹ ಸಚಿವ ಅಮಿತ್ ರನ್ನ‌ ನಾನು ಭೇಟಿಯಾಗುತ್ತಿದ್ದೇನೆ. ನಾಳೆ ನಡೆಯುವ‌ ಸಭೆ ಮಹತ್ವದಾಗಿದೆ. ಒಬ್ಬ ಸಂಸದನಾಗಿ ಏನು ಮಾಡಲು ಸಾಧ್ಯ ನೀವೆ ಹೇಳಿ ಎಂದರು.

ನೀವಿರುವ ಬಳಿ ಪೊಲೀಸರ ಸಹಾಯ ತೆಗೆದುಕೊಂಡು ಬಂದು ಅಹವಾಲು ಕೇಳಬಹುದಿತ್ತು. ಚುನಾವಣೆ ಬರುತ್ತೆ ಹೀಗುತ್ತೆ. ಆದರೆ ನನ್ನ ಹೆಂಡತಿ ಮಕ್ಕಳು ಇರುವ ಮನೆಯ ಮುಂದೆ ನೀವು ಬರ್ತೀರ ಎಂದಿದ್ದೀರಿ. ನಿಮ್ಮ ಅಹವಾಲನ್ನ ಕೇಳಿರುವೆ. ತಿಂಗಳಲ್ಲಿ 12-15 ದಿನ ಕಾರ್ಖಾನೆ ನಡೆಯುವಂತೆ ನಾಡಿರುವುದು ನಿಮ್ಮ ರಾಘಣ್ಣ. ಇನ್ನೇನು ಮಾಡಬಹುದಿತ್ತು ನೀವೆ ಹೇಳಿ ಎಂದರು.

ಮೀಡಿಯಾದ ಬೆನ್ನಿಗೆ ನಿಂತ ರಾಘಣ್ಣ

ವಿಐಎಸ್ ಎಲ್ ಕಾರ್ಮಿಕರು ಪ್ರತಿಭಟನೆಯ ವೇಳೆ ಭಾಷಣ ಮಾಡುವ ಮುಂಚೆ ಹಲವಾರು ಬಾರಿ ಸಂಸದ ರಾಘವೇಂದ್ರ  ಸಂಸದರ ಬೆನ್ನಿಗೆ ನಿಂತಿದ್ದಾರೆ.  ಆರಂಭದಿಂದಲೂ ಪತ್ರಕರ್ತರು ನಮ್ಮ ಪ್ರತಿಭಟನೆಯನ್ನ ವರದಿ ಮಾಡಿಲ್ಲ ಈಗ ಯಾಕೆ  ಮೀಡಿಯಾದವರು ಬಂದು ಕವರೇಜ್ ಮಾಡ್ತೀರ ಬೇಡ ಎಂದು ಪ್ರತಿಭಟನಾಕಾಋಉ ಸ್ಥಳದಲ್ಲಿಯೇ ವಿರೋಧ್ಷೇಪ ವ್ಯಕ್ತಪಡಿಸಿದರು. ಆ ವೇಳೆ ಸಂಸದರು ಮೀಡಿಯಾದ ಬೆನ್ನಿಗೆ ನಿಂತಿದ್ದಾರೆ. ನಿಮ್ಮ‌ಪ್ರತಿಭಟನೆ ಮೀಡಿಯಾದಲ್ಲಿ ಬರಲಿ ಎಂದು ನಾನೇ ಕರೆಸಿದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ-https://suddilive.in/archives/6886

Related Articles

Leave a Reply

Your email address will not be published. Required fields are marked *

Back to top button