ರಾಷ್ಟ್ರೀಯ ಸುದ್ದಿಗಳು

ಶಬರಿ ಮಲೆಯಲ್ಲಿ ಭಕ್ತರಿಗೆ ಆಗುತ್ತಿರುವ ಸಮಸ್ಯೆ ಶೀಘ್ರವೇ ಬಗೆಹರಿಸಬೇಕು, ಇಲ್ಲ ಕೇಂದ್ರದ ಸುಪರ್ಧಿಗೆ ದೇವಸ್ಥಾನವನ್ನ ಒಪ್ಪಿಸಲಿ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಎರಡು‌ ಬಾರಿ ನಾನು ಸಹ ಶಬರಿಮಲೆಗೆ ಹೋಗಿದ್ದೇನೆ.ಆಗ ಯಾವುದೇ ಸಮಸ್ಯೆ ಇರಲಿಲ್ಲ. ವ್ಯವಸ್ಥಿತವಾಗಿ ‌ಮಾಡ್ತಿರುವ ಹಿಂದು ವಿರೋಧಿ ವ್ಯವಸ್ಥೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೆಂಡಕಾರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ವರ್ಷ ಶಬರಿಮಲೆ ಭಕ್ತರಿಂದ 310 ಕೋಟಿ ಹಣ ಸಂಗ್ರಹವಾಗಿದೆ. ಈ ಹಣವನ್ನು ‌ಮೂಲಭೂತ ಸೌಕರ್ಯಕ್ಕಾಗಿ ಬಳಸಬೇಕು. ಕುಡಿಯುವ ನೀರು, ರಸ್ತೆ ವ್ಯವಸ್ಥೆ ಮಾಡಬೇಕು. ಕೇರಳ ಸರಕಾರ ಬೇಕು ಅಂತಾನೆ ಈ ರೀತಿ ಮಾಡ್ತಿದೆ. ಈ ಬಗ್ಗೆ ಸರ್ವೇ ಮಾಡಿ ರಿಪೋರ್ಟ್ ಕೊಡಿ ಅಂತಾ ಕೋರ್ಟ್ ಆದೇಶ ಮಾಡಿದೆ ಎಂದು ಆರೋಪಿಸಿದರು.

ಶಬರಿಮಲೆಗೆ ಹೋಗುವ ರೀತಿ ತಿರುಪತಿ, ಬದ್ರಿನಾಥ ಕೇದರನಾಥಕ್ಕೆ ಭಕ್ತರು ಹೋಗ್ತಾರೆ. ಅಲ್ಲಿ ಎಲ್ಲಿಯೂ ‌ಇಲ್ಲದಿರುವ ಸಮಸ್ಯೆ ಶಬರಿಮಲೆಯಲ್ಲಿದೆ.ಆನ್ ಲೈನ್ ವ್ಯವಸ್ಥೆ ಇದ್ದರೂ ಆನ್ ಲೈನ್ ವ್ಯವಸ್ಥೆಯಲ್ಲಿ ಮೋಸ ಮಾಡ್ತಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಕೇರಳ ಸರಕಾರದ ಮುಜರಾಯಿ ಇಲಾಖೆ ಕೈಯಲ್ಲಿದೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಕೇರಳ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.‌

ಇಲ್ಲದಿದ್ದರೆ ರಾಜ್ಯದ ಅಯ್ಯಪ್ಪ ಭಕ್ತರು ಸೇರಿಕೊಂಡು ಕೇರಳದಲ್ಲಿ ದೊಡ್ಡ ಆಂದೋಲನ ನಡೆಸಬೇಕಾಗುತ್ತದೆ. ಅಯ್ಯಪ್ಪ ಭಕ್ತರ ಭಕ್ತಿಯನ್ನು ಪರೀಕ್ಷಿಸಲು ಹೋಗಬೇಡಿ. ರಾಜ್ಯ ಸರಕಾರ ಬೇಕು ಅಂತಾಲೆ ಮಾಡ್ತಿದೆ. ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಬೇಕು ಅಂತಾಲೇ ತೊಂದರೆ ಕೊಡ್ತಿದ್ದರೆ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ,  ದೇವಸ್ಥಾನವನ್ನು ಕೇಂದ್ರ ಸರಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು.‌ ಮೂಲಭೂತ ಸೌಲಭ್ಯ ಕೊಡುವುದರಲ್ಲಿ ಕೇರಳ ಸರಕಾರ ವಿಫಲವಾಗಿದೆ. ಎಲ್ಲಾ ವ್ಯವಸ್ಥೆ ಮಾಡಬೇಕಿರೋದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದರು.

ಹಿಂದು ಸಮಾಜದ ಭಕ್ತರಿಗೆ ಪುರಾಣ ಕಾಲದಿಂದಲೂ ತೊಂದರೆ ಕೊಡ್ತಾ ಬಂದಿದ್ದಾರೆ. ಮೃತಪಟ್ಟ ಮಗುಗೆ ಕೇರಳ ಸರಕಾರ ಪರಿಹಾರ ಕೊಡಲಿಗಾಯಗೊಂಡ ಭಕ್ತನಿಗೆ ಪರಿಹಾರ ಕೊಡಬೇಕು ಎಂದರು.

ಇದನ್ನೂ ಓದಿ-https://suddilive.in/archives/4918

Related Articles

Leave a Reply

Your email address will not be published. Required fields are marked *

Back to top button