ರಾಷ್ಟ್ರೀಯ ಸುದ್ದಿಗಳು

ನಾಳೆ ನಗರದಲ್ಲಿ ಲಡ್ಡು ವಿತರಣೆ

ಸುದ್ದಿಲೈವ್/ಶಿವಮೊಗ್ಗ

ನಾಳೆ ಅಯೋಧ್ಯದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನಾ ಹಾಗೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಶಿವಮೊಗ್ಗ ನಗರ ಸಹ‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

ನಾಳೆ ರಾಮ ಮಂದಿರ ಉದ್ಘಾಟನೆ ಕಾರ್ಯ ಮುಗಿಯುತ್ತಿದ್ದಂತೆ ಲಡ್ಡು ಹಂಚಲಾಗುತ್ತಿದೆ. ನಾಳೆ ರಾಮ ಮಂದಿರ ಉದ್ಘಾಟನೆ ‌ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಂಚಲು ಲಡ್ಡು ತಯಾರಿಸಲಾಗಿದೆ.

5 ಸಾವಿರ ಲಡ್ಡು ತಯಾರಿಸಿ ನಾಳೆ ಶಿವಪ್ಪ ನಾಯಕ ಪ್ರತಿಮೆಬಳಿ ಹಂಚಲಾಗುತ್ತದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಲಡ್ಡು ತಯಾರಿಸಲಾಗುತ್ತಿದೆ. ನಾಳೆ ಮುಂಜಾನೆ ರಾಮ ಮಂದಿರ ಉದ್ಘಾಟನೆ ನಂತರ ಲಡ್ಡು ವಿತರಿಸಲಾಗುತ್ತಿದೆ.

ನಾಳಿನ ರಾಮ ಪ್ರತಿಷ್ಠ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಹಂಚಲು ವಿನೋಬನಗರದ ಶ್ರೀಧರ ಭಟ್ಟರ ಮನೆಯಲ್ಲಿ 5000 ಲಾಡುಗಳು ಸಿದ್ಧಪಡಿಸಲಾಗುತ್ತಿದೆ. ಲಡ್ಡು ತಯಾರಿಕಾ ಸ್ಥಳಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ‌ ಭೇಟಿ ನೀಡಿದ್ದರು. ಲಡ್ಡು ವಿತರಣೆಗೆ ಚಾಲನೆ ನೀಡಲಿರುವ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ‌ಮುರುಘರಾಜೇಂದ್ರ ಸ್ವಾಮೀಜಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ-https://suddilive.in/archives/7378

Related Articles

Leave a Reply

Your email address will not be published. Required fields are marked *

Back to top button