ರಾಷ್ಟ್ರೀಯ ಸುದ್ದಿಗಳು

ಕುವೆಂಪು ನಿಷ್ಠೂರವಾದಿಯಾಗಿದ್ದರಿಂದ ಜನಮನವನ್ನ‌ ಗೆದ್ದಿದ್ದರು-ಬಿ.ಎಲ್.ಶಂಕರ್

ಸುದ್ದಿಲೈವ್/ಶಿವಮೊಗ್ಗ

ನಿಷ್ಠೂರ ನಿಲುವು ತೆಗೆದುಕೊಂಡ ಕಾರಣ ಕುವೆಂಪುರವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ಥಾನ ಕೈತಪ್ಪಿತ್ತು. ಸರ್ಕಾರದ ಸ್ಥಾನ ಮಾನ ದೊರೆಯುವಲ್ಲಿ ವಂಚಿತರಾಗಿದ್ದ ಕುವೆಂಪುರು 7 ಕೋಟಿ ಜನರ ವಿಶಾಲ ಹೃದಯದಲ್ಲಿ ಕುವೆಂಪು ಸಾಮಾಜ್ಯವಮ್ನೇ ಆಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಎಲ್ ಶಂಕರ್ ತಿಳಿಸಿದರು.

ಅವರು ಕುಪ್ಪಳ್ಳಿಯಲ್ಲಿ 119 ನೇ ಜನ್ಮದಿನೋತ್ಸವ ವಿಶ್ವವಮಾನವ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು. ಎಂ ಚಂದ್ರಶೇಖರ್,  ಗಾಂಧಿ ವಿನೋಬ ಭಾವೆ, ಜಯಪ್ರಕಾಶ್ ನಾರಾಯಣ್  ಅವರ ಬಗ್ಗೆ ಕುವೆಂಪು ಅವರಿಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಜಯಪ್ರಕಾಶ್ ನಾರಾಯಣರಂತಹ ಹೋರಾಟಗಾರನ್ನ ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಕಳುಹಿಸಿದ್ದ ಕಾರಣ ರಾಷ್ಟ್ರಪತಿಗಳನ್ನೇ ಭೇಟಿ ಯಾಗಲು ಕುವೆಂಪು ನಿರಾಕರಿಸಿದ್ದರು ಎಂದು ಹಳೆಯ ನೆನಪನ್ನ ಬಿಚ್ಚಿಟ್ಟರು.

ಕುವೆಂಪು ಅವರಿಗೆ ಅಭಿವಯಕ್ತ ಸ್ವಾತಂತ್ರ್ಯದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಆದಿಚುಂಚನ ಗಿರಿ ಮಠದ ಸ್ವಾಮಿಗಳು ಮನೆಗೆ ಬಂದಾಗ ಕಾಲುತೊಳೆದು ಪೂಜಿಸೊಲ್ಲ. ಸಾಮಾನ್ಯರಾಗಿ ಬಂದು ಹೋದರೆ ಸ್ವಾಗತ ಎಂದು ಹೇಳಿ ಕುವೆಂಪು ಗಟ್ಟಿತನವನ್ನ ತಾಳಿದ್ದರು.  ಹಾಗಾಗಿ ಇಂದು ಅವರು  ಈಗಿನ ತಲೆಮಾರಿನ  ಯುವ ಪೀಳಿಗೆಗೆ ಮಾದರಿಯಾಗಲಿದ್ದಾರೆ ಎಂದು ಹೇಳಿದರು.

ಸರ್ಕಾರ ಕುವೆಂಪುರವರ ಬಯೋರಿಸರವ್ ಘೋಷಣೆ ಸ್ವಾಗತಾರ್ಹ ಎಂದಿರುವ‌ಬಿ.ಎಲ್ ಶಂಕರ್, ಬೆಂಗಳೂರಿನಲ್ಲಿ ನಿರ್ಮಿಸಲು ಇಚ್ಚೀಸಿರುವ ಕುವಪು ಅವರ ಪ್ರತಿಮೆಯನ್ನ ರಾಷ್ಟ್ರವೇ ತಿರುಗಿ ನೋಡುವಂತೆ ಮಾಡೋಣ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಚಿವ ಮಧು ಬಂಗಾರಪ್ಪನವರು ಮಾತನಾಡಿ,  ರಾಜಕೀಯದಲ್ಲಿ ನಿಷ್ಠೂರವಾದಿಗಳೆಂದರೆ, ಬಂಗಾರಪ್ಪನವರಾಗಿದ್ಧರೆ ಸಾಹಿತ್ಯದಲ್ಲಿ ಕುವೆಂಪು ಅವರು ನಿಷ್ಠೂರವಾದಿ ಎಂದರು.

ಡಾ.ರಾಜ್ ಅವರಿಗೆ ವಿಧಾನ ಸಭೆ ಮುಂದೆ ನೀಡಲಾಯಿತು. ಕುವೆಂಪು ಅವರಿಗೆ ಅನಾರೋಗ್ಯ ಇತ್ತು. ಪ್ರಶಸ್ತಿ ಪ್ರಧಾನಕ್ಕೆ  ಬರಲಿಲ್ಲ. ಬಂಗಾರಪ್ಪನವರು ಮನೆಗೆ ಹೋಗಿ ಕೊಟ್ಟು ಬಂದಿದ್ದಾರೆ ಎಂದರು.

ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅಲ್ಪಮಾನವನ್ನ‌ ವಿಶ್ವಮಾನವನ್ನಾಗಿರುವ‌ ಕೃತಿ ಕುವೆಂಪು ಅವರದ್ದು ಎಂದು ತಿಳಿಸಿದರು.

ಐದಾರು ತಿಂಗಳ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡುವುದು ಎಂಬುದೇ ಚರ್ಚೆ ಆಗಿತ್ತು. ಯಡಿಯೂರಪ್ಪನವರು ಹೆಸರು ಚರ್ಚೆಯ ಮುನ್ನೆಲೆಗೆ ಬಂದಿತ್ತು. ಆದರೆ ಯಡಿಯೂರಪ್ಪನವರು ಇತರೆ ಯಾರದ್ದೋ ಹೆಸರಿಡುವುದು ಬೇಡ. ಕುವೆಂಪು ಅವರ ನಾಡಲ್ಲಿ ನಾವೆಲ್ಲಾ ಹುಟ್ಟಿದ್ದೇವೆ ಆ ಹೆಸರು ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರು ಚಿರಂಜೀವಿಯಾಗಿಸೋಣ ಎಂದು ಹೇಳಿದ್ದರು. ಅವರಂತೆ ಕುವೆಂಪು ಹೆಸರಿಡಲಾಗಿದೆ ಎಂದರು.‌

ಪತ್ರಿಕೆಯಲ್ಲಿ ಅನಾನುಕೂಲ ಇದೆ ಎಂದು ಪ್ರಕಟವಾಗಿದೆ. ಪ್ರವಾಸಿ ತಾಣದಲ್ಲಿ ಹೋಟೆಲ್ ನಿರ್ಮಿಸಿ ಅದು ಪ್ರವಾದಿ ತಾಣವನ್ನ ಹಾಳು ಮಾಡಿದೆ ಎಂಬ ಎಚ್ಚರಿಕೆಯೂ ಇದೆ. ನೋಡೋಣ ಪ್ರವಾಸಿಗರಿಗೆ ಏನು ಅನುಕೂಲ ಮಾಡಬಹುದು ವಿಚಾರಿಸೋಣ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/5756

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373