ರಾಜಕೀಯ ಸುದ್ದಿಗಳು

ರಾಮ ಯಾರನ್ನೂ ಬಿಡೊಲ್ಲ ಎಲ್ಲರನ್ನೂ ತನ್ನ ಬಳಿ ಕರೆಯುತ್ತಾನೆ-ಆರಗ

ನಿನ್ನೆ ಯುವನಿಧಿ ಕಾರಗಯಕ್ರಮಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ರಾಮಮಂದಿರ ಉದ್ಘಾಟನೆಯ ನಂತರ ತಡರಳುವುದಾಗಿ ಹೇಳಿದ್ದರು. ಅವರ ಮಾತಿಗೆ ಮಾಜಿ ಗೃಹ ಸಚಿವ ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯಸಿದ್ದಾರೆ. 

ಸುದ್ದಿಲೈವ್/ತೀರ್ಥಹಳ್ಳಿ

ಅಯೋದ್ಯ ಸಾಂಸ್ಕೃತಿಕ ಕೇಂದ್ರವಾಗಿರುವುದರಿಂದ ರಾಮಯ ಯಾರನ್ನೂ‌ಬಿಡೊಲ್ಲ ಎಲ್ಲರನ್ನೂ ತನ್ನ ಬಳಿ ಕರೆಯುತ್ತಾನೆ ಎಂದು ಮಾಜಿ ಗೃಹ ಸಚಿವ ಆರಗ‌ ಜ್ಞಾನೇಂದ್ರ ಸಿದ್ದರಾಮಯ್ಯನವರು ಅಯೋಧ್ಯೆಗೆ ಹೋಗುವ ವಿಷಯವನ್ನ ಪ್ರಸ್ತಾಪಿಸಿ ಮಾತನಾಡಿದರು.  .

ತೀರ್ಥಹಳ್ಳಿಯ ತೆಪ್ಪೋತ್ಸವ ಕಾರ್ಯಕ್ರಮದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಸಿದ್ದರಾಮಯ್ಯನವರು ಈಗ ಅಯೋಧಗಯಗೆ ಹೋಗುವುದಾಗಿ ಹೇಳಿದ್ದಾರೆ. ಎರಡು ಮೂರು ದಿನಗಳ ಹಿಂದೆ ಅಯೋಧ್ಯಗೆ ಯಾಕೆ ಹೋಗ ಬೇಕಿತ್ತು ಎಂದು ಹೇಳುತ್ತಿದ್ದರು. ಹಾಗಾಗಿ ಅಯೋಧ್ಯ ಹಿಂದೂಗಳ ಸಾಂಸ್ಕೃತಿಕ ಕೇಂದ್ರ. ಹಾಗಾಗಿ ರಾಮ ಯಾರನ್ನೂ ಬಿಡೊಲ್ಲ ಎಲ್ಲರನ್ನೂ ತನ್ಬೆಡೆಗೆ ಸೆಳೆದುಕೊಳ್ಳುತ್ತಾನೆ ಎಂದು ಹೇಳಿದರು.

ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗುತ್ತೇನೆ ಎಂದರೆ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳುವ ಭೀತಿ, ಹೋಗಲಿಲ್ಲ ಎಂದರೆ ಹಿಂದೂ ಮತಗಳು ಕಳೆದುಕೊಳ್ಳುವ ಭೀತಿ‌ ಹೀಗಾಗಿ ಕಾಂಗ್ರೆಸ್ ಉಬಯ ಸಂಕಟದಲ್ಲಿ ಸಿಲುಕಿಕೊಂಡಿದೆ ಎಂದು ವಿವರಿಸಿದರು.

ಅಯೋಧ್ಯ ರಾಮ ಮಂದಿರ ಹೋರಾಟದ, ಸಾಂಸ್ಕೃತಿಕದ ಪ್ರತೀಕ 1528 ರಲ್ಲಿ ಬಾಬರ್ ನ ಸೇನಾನಿ ಮೀರ್ ಬಾಕಿ ಅಯೋಧ್ಯವನ್ನ ಧ್ವಂಸ ಮಾಡಿ ಡೂಮ್ ಗಳನ್ನ ಕಟ್ಟುತ್ತಾನೆ. ಈ ಡೂಮ್ ಗಳನ್ನ 1992 ರಲ್ಲಿ ಕೆಡವಲಾಗಿತ್ತದೆ. ಕರಸೇವೆಗೆ ನಾನು ಭಾಗಿಯಾಗಿದ್ದೆ ಎಂದು ಆರಗ ಯಿಳಿಸಿದರು.

ರಾನ ಹುಟ್ಟಿದ ನಾಡಲ್ಲಿ ಹೊಸ ರಾಮಮಂದಿರ ನಿರ್ಮಾಣ ಕಟ್ಟಡ ನೋಡ್ತಾ ಇದ್ದೇನೆ ಎಂಬುದೆ ಆನಂದ. ಸಿದ್ದರಾಮಯ್ಯನವರು ಸೇರಿ ಎಲ್ಲರೂ ಹೋಗಿ ಬರಲಿ ಅವರು ಮಾಡಿದ ಪಾಪವನ್ನ ಕಳೆದುಕೊಂಡು ಬರಲಿ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/6772

Related Articles

Leave a Reply

Your email address will not be published. Required fields are marked *

Back to top button